ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Breaking News: ಬಾಂಗ್ಲಾದೇಶ ಬ್ಯಾಟರ್ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

Bangladesh cricketer Tamim Iqbal announced his retirement for T20I with immediate effect

ಬಾಂಗ್ಲಾದೇಶದ ಅನುಭವಿ ಬ್ಯಾಟರ್ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಟಿ20 ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜುಲೈ 17 ಭಾನುವಾರದಂದು ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವ ಇಕ್ಬಾಲ್ ತಕ್ಷಣದಿಂದಲೇ ಈ ನಿವೃತ್ತಿ ನಿರ್ಧಾರ ಅನ್ವಯವಾಗಲಿದೆ ಎಂದಿದ್ದಾರೆ.

ವೆಸ್ಟ್ ಇಂಡಿಸ್ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 3 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಬಾಂಗ್ಲಾ ದಾಂಡಿಗ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಗಯಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯಲ್ಲಿ ಆತಿಥೇಯರಿಗೆ ವೈಟ್‌ವಾಶ್ ಬಳಿಯುವಲ್ಲಿ ಯಶಸ್ವಿಯಾಗಿದ್ದು ಬಾಂಗ್ಲಾದೇಶ ಐತಿಹಾಸಿಕ ಸಾಧನೆ ಮಾಡಿದೆ.

ಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮೀಮ್ ಇಕ್ಬಾಲ್ ಈ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು ಇಂದಿನಿಂದ ನಾನು ಟಿ20 ಕ್ರಿಕೆಟ್‌ನಿಂದ ನಿವೃತ್ತನಾಗಿದ್ದೇನೆ ಎಂದು ಪರಿಗಣಿಸಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಧನ್ಯವಾದಗಳು ಎಂದು ಚುಟುಕಾಗಿ ತಮ್ಮ ನಿವೃತ್ತಿಯನ್ನು ತಿಳಿಸಿದ್ದಾರೆ.

2020ರ ಬಳಿಕ ಟಿ20 ಆಡಿಲ್ಲ ತಮೀಮ್

2020ರ ಬಳಿಕ ಟಿ20 ಆಡಿಲ್ಲ ತಮೀಮ್

ತಮೀಮ್ ಇಕ್ಬಾಲ್ ಇತ್ತೀಚೆಗೆ ಬಾಂಗ್ಲಾದೇಶದ ಟಿ20 ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗುತ್ತಿದ್ದಾರೆ. 2020ರಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ತಮೀಮ್ ಕೊನೆಯ ಬಾರಿಗೆ ಟಿ20 ಮಾದರಿಯಲ್ಲಿ ಕಣಕ್ಕಿಳಿದಿದ್ದರು. ಅದಾದ ಬಳಿಕ ಗಾಯ ಹಾಗೂ ಇತರೆ ಕಾರಣಗಳಿಂದಾಗಿ ತಂಡದಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ತಮಿಮ್ ಇಕ್ಬಾಲ್ ಬಾಂಗ್ಲಾ ಪರವಾಗಿ ಆಡಿರಲಿಲ್ಲ.

ಬಾಂಗ್ಲಾ ಪರ ಹಲವು ಸಾಧನೆ

ಬಾಂಗ್ಲಾ ಪರ ಹಲವು ಸಾಧನೆ

ಚಿತ್ತಗಾಂಗ್‌ನಲ್ಲಿ ಜನಿಸಿರುವ ಈ ದಾಂಡಿಗ ಬಾಂಗ್ಲಾದೇಶದ ಪರವಾಗಿ 78 ಟಿ20ಐ ಪಂದ್ಯಗಳಲ್ಲಿ ಆಡಲಿಳಿದಿದ್ದು 1758 ರನ್ ಬಾರಿಸಿದ್ದಾರೆ. 24.08ರ ಸರಾಸರಿಯಲ್ಲಿ ರನ್ ಬಾರಿಸಿರುವ ಅವರು 116.96ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಏಳು ಅರ್ಧ ಶತಕಗಳು ದಾಖಲಿಸಿದ್ದಾರೆ. ಬಾಂಗ್ಲಾದೇಶದ ಪರವಾಗಿ ಟಿ20 ಮಾದರಿಯಲ್ಲಿ ಶತಕ ದಾಖಲಿಸಿರುವ ಎಕೈಕ ಕ್ರಿಕೆಟಿಗ ಎನಿಸಿದ್ದಾರೆ ತಮೀಮ್ ಇಕ್ಬಾಲ್. 201ರಲ್ಲಿ ಭಾರತದ ನೆಲದಲ್ಲಿ ಟಿ20 ವಿಶ್ವಕಪ್ ನಡೆದಿದ್ದಾಗ ಒಮಾನ್ ವಿರುದ್ಧ ಈ ಸಾಧನೆ ಮಾಡಿದ್ದರು.

ಇನ್ನು ಬಾಂಗ್ಲಾದೇಶದ ಪರವಾಗಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ತಮೀಮ್ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಬಾಂಗ್ಲಾದ ಹಾಲಿ ಟಿ20 ನಾಯಕ ಮಹ್ಮದುಲ್ಲಾ ರಿಯಾದ್ ಇದ್ದರೆ ಎರಡನೇ ಸ್ಥಾನದಲ್ಲಿ ಟೆಸ್ಟ್ ನಾಯಕ ಶಕೀಬ್ ಅಲ್ ಹಸನ್ ಇದ್ದಾರೆ.

ಮೂರು ಮಾದರಿಯಲ್ಲಿಯೂ ಬಾಂಗ್ಲಾ ಪರ ಉತ್ತಮ ಸಾಧನೆ

ಮೂರು ಮಾದರಿಯಲ್ಲಿಯೂ ಬಾಂಗ್ಲಾ ಪರ ಉತ್ತಮ ಸಾಧನೆ

ತಮೀಮ್ ಇಕ್ಬಾಲ್ ತಮ್ಮ 18ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 2017ರಲ್ಲಿ ಅಂತಾರಾಷ್ಟ್ರೀಯ T20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ಅವರು ಹಿಂದಿರುಗಿ ನೊಡಿದ್ದೇ ಇಲ್ಲ. T20 ಮಾದರಿಯಲ್ಲಿ ಮಾತ್ರವಲ್ಲದೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿಯೂ ಬಾಂಗ್ಲಾದೇಶ ರಾಷ್ಟ್ರೀಯ ತಂಡಕ್ಕೆ ಆಸರೆಯಾಗಿದ್ದಾರೆ.

ಏಕದಿನ ಹಾಗೂ ಟೆಸ್ಟ್‌ನಲ್ಲಿ ಮುಂದುವರಿಯಲಿದ್ದಾರೆ ತಮೀಮ್

ಏಕದಿನ ಹಾಗೂ ಟೆಸ್ಟ್‌ನಲ್ಲಿ ಮುಂದುವರಿಯಲಿದ್ದಾರೆ ತಮೀಮ್

ಆದರೆ ತಮೀಮ್ ಇಕ್ಬಾಲ್ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮುಂದುವರಿಯಲಿದ್ದಾರೆ. ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ತಮೀಮ್ ಇನ್ನು 7 ರನ್‌ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ಪರವಾಗಿ 8000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಒಟ್ಟಾರೆಯಾಗಿ ಅವರು 25 ಶತಕಗಳನ್ನು ದಾಖಲಿಸಿದ್ದು ಮತ್ತು 91 ಅರ್ಧಶತಕಗಳೊಂದಿಗೆ ಬಾಂಗ್ಲಾದೇಶದ ಪರವಾಗಿ 14000ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

Story first published: Sunday, July 17, 2022, 12:28 [IST]
Other articles published on Jul 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X