ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI ಈಗಲೂ ನಂ.1 ಶ್ರೀಮಂತ ಮಂಡಳಿ: ಅತ್ಯಧಿಕ ಆದಾಯ ಹೊಂದಿರುವ ಮಂಡಳಿಗಳ ಪಟ್ಟಿ ಇಲ್ಲಿದೆ

BCCI Still No.1 Richest Board In The World; Here Is The List With Highest Income

ಫುಟ್‌ಬಾಲ್ ನಂತರ ಕ್ರಿಕೆಟ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಈ ಜೆಂಟಲ್‌ಮನ್ ಆಟವು ವಿಶ್ವದ ಪ್ರಸಿದ್ಧ ಆಟಗಳಾದ ಫುಟ್‌ಬಾಲ್, ರಗ್ಬಿ, ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ನಡುವೆ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಅದರಲ್ಲಿಯೂ ಏಷ್ಯಾದ ಉಪಖಂಡದಲ್ಲಿ ಮತ್ತು ಸಕ್ರಿಯವಾಗಿ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಕ್ರಿಕೆಟ್ ಅಗಾಧ ಜನಪ್ರಿಯತೆಯನ್ನು ಗಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಪಂಚದಾದ್ಯಂತ ಕ್ರಿಕೆಟ್ ಆಟವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಆದರೆ ಪ್ರತಿ ಕ್ರಿಕೆಟ್ ಆಡುವ ರಾಷ್ಟ್ರದ ತಂಡವು ಅದರ ಸ್ವಂತ ಮಂಡಳಿಯನ್ನು ಸ್ಥಾಪಿಸಿಕೊಂಡು ಆಡಳಿತ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

ನ್ಯೂಜಿಲೆಂಡ್‌ನಲ್ಲಿ ನಾನು ನೋಡಿದ ಅತ್ಯುತ್ತಮ ಆಟಗಳಲ್ಲಿ ಇದು ಒಂದು; ಕಿವೀಸ್ ಕ್ರಿಕೆಟಿಗನ್ಯೂಜಿಲೆಂಡ್‌ನಲ್ಲಿ ನಾನು ನೋಡಿದ ಅತ್ಯುತ್ತಮ ಆಟಗಳಲ್ಲಿ ಇದು ಒಂದು; ಕಿವೀಸ್ ಕ್ರಿಕೆಟಿಗ

ಅದೇ ರೀತಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದಲ್ಲಿ ದೇಶೀಯ ಮತ್ತು ಪ್ರಾಂಚೈಸ್ ಲೀಗ್‌ ನಡೆಸುವುದು ಸೇರಿದಂತೆ ಅಂತಾರಾಷ್ಟ್ರೀಯ ಸರಣಿಗಳನ್ನು ಆಯೋಜಿಸುತ್ತಿದೆ. ಸದ್ಯ ಭಾರತದಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುವ ಅಭಿಮಾನಿಗಳಿರುವುದರಿಂದ, ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಆಟವಾಗಿದೆ.

ಬಿಸಿಸಿಐ ಆಸ್ಟ್ರೇಲಿಯಾಗಿಂತ ಶೇ.23ರಷ್ಟು ಹೆಚ್ಚು ಆದಾಯ

ಬಿಸಿಸಿಐ ಆಸ್ಟ್ರೇಲಿಯಾಗಿಂತ ಶೇ.23ರಷ್ಟು ಹೆಚ್ಚು ಆದಾಯ

ಹೀಗಾಗಿ ಬಿಸಿಸಿಐ ತನ್ನ ಇತರ ಪ್ರತಿಸ್ಪರ್ಧಿಗಳಿಗಿಂತ ಕ್ರಿಕೆಟ್‌ನಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವುದನ್ನು ಮುಂದುವರೆಸಿದೆ ಎಂದು ಇತ್ತೀಚಿನ ಡೇಟಾ ಬಹಿರಂಗಪಡಿಸಿದೆ. ಬಿಸಿಸಿಐ ಈಗಲೂ ವಿಶ್ವ ಕ್ರಿಕೆಟ್‌ನ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಟೈಮ್ಸ್ ನೌ ವರದಿ ಮಾಡಿರುವ ಅಂಕಿಅಂಶಗಳ ಪ್ರಕಾರ, ಬಿಸಿಸಿಐ ತನ್ನ ಪ್ರತಿಸ್ಪರ್ಧಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗಿಂತ ಶೇ.23ರಷ್ಟು ಹೆಚ್ಚು ಆದಾಯ ಗಳಿಸಿದೆ. ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಭಾರತದ ಬಿಸಿಸಿಐ ಮತ್ತು ಆಸ್ಟ್ರೇಲಿಯಾದ ಸಿಎ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿವೆ.

ಬಿಸಿಸಿಐ 3,730 ಕೋಟಿ ರೂಪಾಯಿ ಆದಾಯ

ಬಿಸಿಸಿಐ 3,730 ಕೋಟಿ ರೂಪಾಯಿ ಆದಾಯ

2021ರ ವೇಳೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು 3,730 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಇದೇ ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಅಂದಾಜು 2,843 ಕೋಟಿ ರೂಪಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಇನ್ನು ಈ ಪಟ್ಟಿಯಲ್ಲಿ 2,135 ಕೋಟಿ ರೂ. ಮೌಲ್ಯದ ಆದಾಯ ಗಳಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮೂರನೇ ಸ್ಥಾನದಲ್ಲಿದೆ. 811 ಕೋಟಿ ರೂಪಾಯಿಗಳ ಅಂದಾಜು ಆದಾಯದೊಂದಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಾಲ್ಕನೇ ಸ್ಥಾನದಲ್ಲಿದೆ.

811 ಕೋಟಿ ರೂಪಾಯಿ ಆದಾಯ ಹೊಂದಿರುವ ಪಿಸಿಬಿ

811 ಕೋಟಿ ರೂಪಾಯಿ ಆದಾಯ ಹೊಂದಿರುವ ಪಿಸಿಬಿ

ಹೆಚ್ಚು ಆದಾಯ ಗಳಿಸಿರುವ ಪಟ್ಟಿಯಲ್ಲಿ 802 ಕೋಟಿ ರೂ. ಆದಾಯದೊಂದಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐದನೇ ಸ್ಥಾನದಲ್ಲಿದ್ದರೆ, ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) 485 ಕೋಟಿ ರೂಪಾಯಿ ಆದಾಯದೊಂದಿಗೆ ಆರನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (ಎನ್‌ಝೆಡ್‌ಸಿ) 210 ಕೋಟಿ ರೂಪಾಯಿಗಳೊಂದಿಗೆ ಏಳನೇ ಸ್ಥಾನ ಪಡೆದಿದೆ.

ಹೆಚ್ಚು ಆದಾಯ ಗಳಿಸಿದವರ ಪಟ್ಟಿಯಲ್ಲಿನ ಅಂತಿಮ ಮೂರು ಸ್ಥಾನಗಳನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 116 ಕೋಟಿ ರೂ, ಜಿಂಬಾಬ್ವೆ ಕ್ರಿಕೆಟ್ ಮಂಡಳಿ 113 ಕೋಟಿ ರೂ ಪಡೆದಿದ್ದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ 100 ಕೋಟಿ ರೂ. ಆದಾಯ ಗಳಿಸಿದೆ.

ಬಿಸಿಸಿಐನ ಆದಾಯದ ಮೂಲವೇನು?

ಬಿಸಿಸಿಐನ ಆದಾಯದ ಮೂಲವೇನು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅತಿ ಹೆಚ್ಚು ಆದಾಯ ಗಳಿಸಲು ದೇಶದಲ್ಲಿ ಕ್ರಿಕೆಟ್ ಪ್ರೀತಿಸುವ ಅಗಾಧ ಅಭಿಮಾಗಳಿರುವುದರಿಂದ ಎಂಬುದು ಗಮನಾರ್ಹ ಅಂಶವಾಗಿದೆ. ಏಕೆಂದರೆ ಅನೇಕ ವರ್ಷಗಳಿಂದ ದೊಡ್ಡ ಮಟ್ಟದ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಡೆಸಿಕೊಂಡು ಬರುತ್ತಿರುವುದು ಆದಾಯ ಮತ್ತು ಯಶಸ್ಸಿಗೆ ಕಾರಣವಾಗಿದೆ.

ಹಲವು ವರ್ಷಗಳಿಂದ ಬಿಸಿಸಿಐ ವಿಶ್ವದ ಪ್ರಶ್ನಾತೀತ ಕ್ರಿಕೆಟ್ ಆಡಳಿತ ಮಂಡಳಿಯಾಗಿ ಮುಂದುವರೆದಿದೆ. ಜಾಹೀರಾತು ಮತ್ತು ಕ್ರೀಡಾಂಗಣಗಳಲ್ಲಿ ಸೇರುವ ಜನರಿಂದ ಹೆಚ್ಚಿನ ಆದಾಯ ಗಳಿಸುತ್ತಿದೆ. ಆದಾಯ ಉತ್ಪಾದನೆ ಮತ್ತು ವಾಣಿಜ್ಯೀಕರಣವಾಗಿ ಮೇರು ಸ್ಥಾನದಲ್ಲಿರುವುದರಿಂದ ವಿಶ್ವದ ಕಠಿಣ ಟಿ20 ಲೀಗ್‌ನ ತನ್ನ ಪ್ರತಿಸ್ಪರ್ಧಿಗಳಾದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ದಿ ಹಂಡ್ರೆಡ್, ಇತರ ಲೀಗ್‌ಗಳನ್ನು ಮೀರಿಸಿದೆ ಎಂದು ಹೇಳಬಹುದು.

Story first published: Sunday, November 20, 2022, 22:22 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X