ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup for Blind : ಅಂಧರ ಟಿ20 ವಿಶ್ವಕಪ್: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ವೀಸಾ ನಿರಾಕರಿಸಿದ ಭಾರತ

Blind T20 World Cup: India Denies Visa To Pakistan Cricket Team

ಡಿಸೆಂಬರ್ 5ರಿಂದ ಅಂಧರ ಟಿ20 ವಿಶ್ವಕಪ್ ಟೂರ್ನಿ ಆರಂಭವಾದರೂ ಪಾಕಿಸ್ತಾನ ತಂಡಕ್ಕೆ ವೀಸಾ ಸಿಗದ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಅಂಧರ ಟಿ20 ವಿಶ್ವಕಪ್‌ನ 3ನೇ ಆವೃತ್ತಿಯನ್ನು ಮಿಸ್ ಮಾಡಿಕೊಳ್ಳಲಿದೆ.

ಪಾಕಿಸ್ತಾನ ತಂಡವು ನವದೆಹಲಿಯಲ್ಲಿ ಪಂದ್ಯಾವಳಿಯ ಆರಂಭಿಕ ದಿನದಂದು ದಕ್ಷಿಣ ಆಫ್ರಿಕಾ ಅಂಧರ ತಂಡವನ್ನು ಎದುರಿಸಬೇಕಿತ್ತು. ಆದರೆ ಅಂಧರ ವಿಶ್ವಕಪ್ ಕ್ರಿಕೆಟ್‌ಗಾಗಿ ಭಾರತಕ್ಕೆ ತೆರಳಲು ಸಿದ್ಧವಾಗಿದ್ದ ಪಾಕಿಸ್ತಾನ ತಂಡಕ್ಕೆ ವೀಸಾ ಸಮಸ್ಯೆ ಎದುರಾಗಿದೆ.

ಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ಭಾರತೀಯರೇ ಬಯಸುತ್ತಿದ್ದಾರೆ; ಶಾಹಿದ್ ಅಫ್ರಿದಿಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ಭಾರತೀಯರೇ ಬಯಸುತ್ತಿದ್ದಾರೆ; ಶಾಹಿದ್ ಅಫ್ರಿದಿ

ಪಾಕಿಸ್ತಾನ ಅಂಧರ ಕ್ರಿಕೆಟ್ ಕೌನ್ಸಿಲ್ (ಪಿಬಿಸಿಸಿ) ತಂಡವು ಮಂಗಳವಾರ ನೀಡಿದ ಹೇಳಿಕೆಯಲ್ಲಿ, ಭಾರತದಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದೆ. "ಈ ದುರದೃಷ್ಟಕರ ಘಟನೆಯು ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡವನ್ನು ಕಂಗಾಲಾಗಿಸಿದೆ," ಎಂದು ಪಿಬಿಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿಯಾಗುವ ಸಾಧ್ಯತೆಯಿತ್ತು ಮತ್ತು ಪ್ರಸ್ತುತ ಪಾಕಿಸ್ತಾನ ಅಂಧರ ತಂಡವನ್ನು ಪರಿಗಣಿಸಿದರೆ, ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲುವ ಹೆಚ್ಚಿನ ಅವಕಾಶಗಳಿದ್ದವು,"ಎಂದು ಪಿಬಿಸಿಸಿ ಹೇಳಿದೆ.

ವೀಸಾ ವಿಳಂಬದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಾಕಿಸ್ತಾನದ ಆರಂಭಿಕ ಪಂದ್ಯವನ್ನು ಮರು ನಿಗದಿಪಡಿಸಲಾಗಿದೆ. ಆದರೆ ವಿಶ್ವಕಪ್‌ನ ಭಾಗವಾಗಲು ಭಾರತಕ್ಕೆ ಹೋಗಲು ಅಸಾಧ್ಯವಾದ ನಂತರ ಪಿಬಿಸಿಸಿ ನಿರಾಶೆ ವ್ಯಕ್ತಪಡಿಸಿದೆ.

ರಮೇಶ್ ಪೊವಾರ್ ಎನ್‌ಸಿಎಗೆ ವರ್ಗಾವಣೆ; ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕ

2021 ಮತ್ತು 2022ರಲ್ಲಿ ನಡೆದ ಕೊನೆಯ ಐದು ಪಂದ್ಯಗಳಲ್ಲಿ ಪಾಕಿಸ್ತಾನ ಅಂಧರ ತಂಡವು ಭಾರತವನ್ನು ಸೋಲಿಸಿದೆ ಎಂದು ಪಿಬಿಸಿಸಿ ತಿಳಿಸಿದೆ.

Blind T20 World Cup: India Denies Visa To Pakistan Cricket Team

ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಈ ಪಾಕಿಸ್ತಾನ ತಂಡದ ವೀಸಾ ಸಮಸ್ಯೆಯನ್ನು ದೃಢಪಡಿಸಿದೆ ಮತ್ತು ಪಾಕಿಸ್ತಾನ ತಂಡವು ಭಾಗವಹಿಸದ ಕಾರಣ ನವೀಕರಿಸಿದ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ಭಾರತವು ಡಿಸೆಂಬರ್ 7ರಂದು ಸರ್ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಬೇಕಿತ್ತು. ಆತಿಥೇಯ ಭಾರತದ ಹೊರತಾಗಿ ನೇಪಾಳ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಂಧರ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿವೆ.

ಫರಿದಾಬಾದ್‌ನಲ್ಲಿ ನಡೆದ ಅಂಧರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡವು ನೇಪಾಳವನ್ನು 274 ರನ್‌ಗಳಿಂದ ಸೋಲಿಸಿತು.

Story first published: Tuesday, December 6, 2022, 21:53 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X