ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ನಲ್ಲಿ ಶತಕ ಹೊಡೆದ ಭಾರತೀಯ ವೀರರು

By Mahesh

ಲಾರ್ಡ್ಸ್,ಜು. 18 : ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟಿನ ಮೊದಲ ದಿನದಾಟದಲ್ಲಿ ಟೀಮ್​ ಇಂಡಿಯಾ ಹಾಗೂ ಹೀಗೂ ಸಮಾಧಾನಕರ ಮೊತ್ತ ಗಳಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬಂದ ಅಜಿಂಕ್ಯ ರಹಾನೆ ಬಾರಿಸಿದ ಶತಕದ ನೆರವಿನಿಂದ ಭಾರತ ದಿನದ ಅಂತ್ಯಕ್ಕೆ ನೆಮ್ಮದಿಯ ನಿಟ್ಟುಸಿರುಬಿಟ್ಟಿತು. ಲಾರ್ಡ್ಸ್ ನಲ್ಲಿ ಸಚಿನ್ ಗೆ ಸಾಧ್ಯವಾಗದ ಸಾಧನೆ ರಹಾನೆ ಪೂರೈಸಿದ್ದಾರೆ.

ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 290 ರನ್ ಸಂಪಾದಿಸಿದೆ. ಆಟ ನಿಂತಾಗ ಅಂತಿಮ ಜೋಡಿ ಮುಹಮ್ಮದ್ ಶಮಿ 14 ಮತ್ತು ಇಶಾಂತ್ ಶರ್ಮ 12 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. 57.2 ಓವರ್‌ಗಳಲ್ಲಿ 145 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಅಜಿಂಕ್ಯ ರಹಾನೆ ಮತ್ತು ಭುವನೇಶ್ವರ ಕುಮಾರ್ 8ನೆ ವಿಕೆಟ್‌ಗೆ 90 ರನ್‌ಗಳ ಕೊಡುಗೆ ನೀಡಿದರು. ಸ್ಕೋರ್ ಕಾರ್ಡ್ ನೋಡಿ

ಅಜಿಂಕ್ಯ ರಹಾನೆ ತಮ್ಮ ಏಳನೇ ಟೆಸ್ಟ್‌ನಲ್ಲಿ 2ನೇ ಶತಕ ಹಾಗೂ ಲಾರ್ಡ್ಸ್ ಮೈದಾನದಲ್ಲಿ ಮೊದಲ ಶತಕ ದಾಖಲಿಸಿದರು.151 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಅಂತಿಮವಾಗಿ ರಹಾನೆ 103 ರನ್ ಗಳಿಸಿ ಆಂಡರ್ಸನ್ ಓವರ್‌ನಲ್ಲಿ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು.

Cricket : Who are India's Test centurions at Lord's?

ಕ್ರಿಕೆಟ್ ಜಗತ್ತಿನ ಅತ್ಯಂತ ಪುರಾತನ ಕ್ರೀಡಾಂಗಣ, ಕ್ರಿಕೆಟ್ ಕಾಶಿ, ಕ್ರಿಕೆಟ್ ಮೆಕ್ಕಾ ಎಂದೆಲ್ಲ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸುವುದು ಪ್ರತಿ ಟೆಸ್ಟ್ ಆಟಗಾರನ ಕನಸು. ಈ ಕನಸು ನನಸು ಮಾಡಲು ಸಚಿನ್ ಗೂ ಸಾಧ್ಯವಾಗಿರಲಿಲ್ಲ. ಆದರೆ, ಮುಂಬೈನ ಆಟಗಾರ ಅಜಿಂಕ್ಯ ರಹಾನೆ ಸಾಧಿಸಿದ್ದಾರೆ.

ಶತಕ ವೀರರ ಪಟ್ಟಿಯಲ್ಲಿ ವಿನೂ ಮಂಕಂಡ್ ಮೊದಲಿಗರಾಗಿದ್ದು, 1952ರಲ್ಲಿ 184ರನ್ ಬಾರಿಸಿದ್ದರು. ರಹಾನೆ ಮುನ್ನ ರಹಾನೆ ಅವರ ಗುರು ರಾಹುಲ್ ದ್ರಾವಿಡ್ ಅವರು 2011ರಲ್ಲಿ 103 ಬಾರಿಸಿದ್ದರು ಎಂಬುದು ವಿಶೇಷ.

'ಲಾರ್ಡ್ಸ್ ನಲ್ಲಿ ಮೊದಲ ಬಾರಿಗೆ ಆಡುತ್ತಿರುವುದರ ಬಗ್ಗೆ ಹೆಮ್ಮೆ ಇತ್ತು ಅದರೆ, ಭಯ ಕೂಡಾ ಇತ್ತು. 25-30 ಎಸೆತಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಡಿದೆ. ಇದು ಅತ್ಯಂತ ಖುಷಿ ಕೊಟ್ಟ ಶತಕವಾಗಿದೆ' ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಲಾರ್ಡ್ಸ್ ನಲ್ಲಿ ಶತಕ ಬಾರಿಸಿರುವ ಭಾರತೀಯರ ಪಟ್ಟಿ ಇಂತಿದೆ. (ಜು.17, 2014 ಅಂಕಿ ಅಂಶದಂತೆ)
1. ವಿನೂ ಮಂಕಡ್ -184-1952
2. ದಿಲೀಪ್ ವೆಂಗ್ ಸರ್ಕಾರ್ 103-1979
3. ಜಿಆರ್ ವಿಶ್ವನಾಥ್ 113 -1979
4.ದಿಲೀಪ್ ವೆಂಗ್ ಸರ್ಕಾರ್ 157-1982
5.ದಿಲೀಪ್ ವೆಂಗ್ ಸರ್ಕಾರ್ 126(ಔಟಾಗದೆ) 1986
6. ರವಿ ಶಾಸ್ತ್ರಿ 100 -1990
7. ಮಹಮ್ಮದ್ ಅಜರುದ್ದೀನ್ 121 -1990
8. ಸೌರವ್ ಗಂಗೂಲಿ 131 -1996
9. ಅಜಿತ್ ಅಗರ್ಕರ್ 109 (ಔಟಾಗದೆ) -2002
10.ರಾಹುಲ್ ದ್ರಾವಿಡ್ 103 (ಔಟಾಗದೆ) -2011
11. ಅಜಿಂಕ್ಯ ರಹಾನೆ 103 -2014

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X