ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರ್ಷದೀಪ್ ಸಿಂಗ್ ಉತ್ತಮ ಬೌಲರ್: ಆದರೂ ಈ ತಪ್ಪನ್ನು ಮಾಡಬೇಡಿ ಎಂದ ಜಾಂಟಿ ರೋಡ್ಸ್

Dont Compare Arshdeep Singh With Wasim Akram, Its Put Pressure On Him: Jonty Rhodes

ಅರ್ಷದೀಪ್‌ ಸಿಂಗ್‌ಗೆ ಉತ್ತಮ ಸಾಮರ್ಥ್ಯವಿದೆ. ಆತ ಅತ್ಯುತ್ತಮ ವೇಗದ ಬೌಲರ್. ಅರ್ಷದೀಪ್ ಸಿಂಗ್ ಕಡಿಮೆ ಸಮಯದಲ್ಲಿ ವೇಗವಾಗಿ ಯಶಸ್ಸು ಪಡೆದಿದ್ದಾರೆ. ಆದರೆ, ಅವರನ್ನು ಶ್ರೇಷ್ಠ ಬೌಲರ್ ವಾಸಿಮ್ ಅಕ್ರಮ್‌ಗೆ ಹೋಲಿಸಬೇಡಿ ಎಂದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಸಲಹೆ ನೀಡಿದ್ದಾರೆ.

23 ವರ್ಷದ ಯುವ ವೇಗಿ ಅರ್ಷದೀಪ್‌ರನ್ನು ವಾಸಿಂ ಅಕ್ರಮ್‌ಗೆ ಹೋಲಿಕೆ ಮಾಡುವುದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಅರ್ಷದೀಪ್ ಅತ್ಯುತ್ತಮ ಬೌಲರ್, ಅವರು ಎರಡೂ ರೀತಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 7.80 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು, 10 ವಿಕೆಟ್‌ಗಳನ್ನು ಪಡೆದಿದ್ದರು.

ICC T20 Ranking: ಅಗ್ರಸ್ಥಾನದಲ್ಲಿ ಉಳಿದ ಸೂರ್ಯ, ಭಾರಿ ಜಿಗಿತ ಕಂಡ ಅಲೆಕ್ಸ್ ಹೇಲ್ಸ್ICC T20 Ranking: ಅಗ್ರಸ್ಥಾನದಲ್ಲಿ ಉಳಿದ ಸೂರ್ಯ, ಭಾರಿ ಜಿಗಿತ ಕಂಡ ಅಲೆಕ್ಸ್ ಹೇಲ್ಸ್

ಅಮೆರಿಕದ 'ಸ್ಯಾಂಪ್ ಆರ್ಮಿ' ಕ್ರಿಕೆಟ್ ಫ್ರಾಂಚೈಸಿಯ ಜಾಗತಿಕ ಮಾರ್ಗದರ್ಶಕರಾಗಿ ನೇಮಕವಾದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. "ಅರ್ಷದೀಪ್‌ರನ್ನು ಸ್ವಿಂಗ್ ಸುಲ್ತಾನ ಎನಿಸಿಕೊಂಡಿರುವ ವಾಸಿಂ ಅಕ್ರಮ್‌ಗೆ ಹೋಲಿಕೆ ಮಾಡುವ ಮೂಲಕ ಯುವ ಆಟಗಾರನ ಮೇಲೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ" ಎಂದು ಹೇಳಿದರು.

Dont Compare Arshdeep Singh With Wasim Akram, Its Put Pressure On Him: Jonty Rhodes

ಆತನ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ

"ಜಸ್ಪ್ರೀತ್ ಬುಮ್ರಾ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಸಿದ್ಧಿ ಪಡೆದ ವೇಗದ ಬೌಲರ್ ಅರ್ಷದೀಪ್ ಸಿಂಗ್. ಆತ ಕಲಿಯಲು ಸಿದ್ಧವಾಗಿದ್ದಾನೆ, ಅವನನ್ನು ಇನ್ನೂ ಪಕ್ವವಾಗಿಸಬೇಕು, ಕಠಿಣ ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಪಡೆಯಬೇಕು" ಎಂದರು.

"ಆತ ಚೆಂಡನ್ನು ಸ್ವಿಂಗ್ ಮಾಡುತ್ತಾನೆ, ಅಂತಿಮ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾನೆ. ಪವರ್‌ಪ್ಲೇನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಲೈನ್ ಮತ್ತು ಲೆಂಥ್ ಮೇಲೆ ನಿಯಂತ್ರಣ ಹೊಂದಿದ್ದಾರೆ. ವಾಸಿಂ ಅಕ್ರಮ್ ರೀತಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು" ಎಂದು ಹೇಳಿದ್ದಾರೆ.

ಐಪಿಎಲ್‌ನ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಫೀಲ್ಡಿಂಗ್ ತರಬೇತುದಾರರಾಗಿ ಕೆಲಸ ಮಾಡಿರುವ ಜಾಂಟಿ ರೋಡ್ಸ್ ಅರ್ಷದೀಪ್‌ ಜೊತೆ ಒಡನಾಟ ಹೊಂದಿದ್ದರು. ಆತನ ಕೌಶಲ್ಯವನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.

"ಆತ ಅತ್ಯುತ್ತಮವಾದ ವೃತ್ತಿಜೀವನವನ್ನು ಹೊಂದಿದ್ದಾನೆ. ನೀವು ಆತನನ್ನು ಬೇರೆ ಆಟಗಾರರಿಗೆ ಹೋಲಿಸಲು ಪ್ರಾರಂಭಿಸುತ್ತಿದ್ದೀರಿ, ಅದು ಅವರನ್ನು ಅನಗತ್ಯ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ. ಅವರು ಅತ್ಯುತ್ತಮ ಅರ್ಷದೀಪ್ ಸಿಂಗ್ ಆಗಲು ಬಯಸುತ್ತಾರೆ, ವಾಸಿಂ ಅಕ್ರಮ್ ಅಲ್ಲ" ಎಂದು ಹೇಳಿದರು.

ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಯುವ ತಂಡ ಸಾಕಷ್ಟು ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ಐಪಿಎಲ್‌ನಲ್ಲಿ ಆಡಿರುವ ಅನುಭವ ಅವರಿಗೆ ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಹಕಾರಿಯಾಗಿದೆ ಎಂದರು. ಐಪಿಎಲ್‌ನಲ್ಲಿ ಆಡುವ ಮೂಲಕ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಆಟಗಾರರು ಲಾಭ ಪಡೆದಿದ್ದಾರೆ ಎಂದು ಹೇಳಿದರು.

Story first published: Wednesday, November 16, 2022, 18:33 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X