For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್‌ ಮೆಕಲಮ್

Former New Zealand captain Brendon McCullum retires from all forms of cricket

ವೆಲ್ಲಿಂಗ್ಟನ್, ಆಗಸ್ಟ್ 6: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಸದ್ಯ ನಡೆಯುತ್ತಿರುವ 'ಗ್ಲೋಬಲ್ ಟಿ20 ಕೆನಡಾ' ಟೂರ್ನಿಯ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ ನಿವೃತ್ತಿ ಘೋಷಿಸಲಿದ್ದಾರೆ. ಗ್ಲೋಬಲ್ ಟಿ20 ಲೀಗ್‌ನಲ್ಲಿ ಮೆಕಲಮ್ ಅವರು ಯುವರಾಜ್ ಸಿಂಗ್ ನಾಯಕತ್ವದ ಟೊರೊಂಟೋ ನ್ಯಾಷನಲ್ಸ್ ಪರ ಆಡುತ್ತಿದ್ದರು.

ಬ್ರೆಂಡನ್ ಮೆಕಲಮ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2016ರಲ್ಲೇ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಮುಖ ವಿದೇಶಿ ಟೂರ್ನಿಗಳಲ್ಲೊಂದಾಗಿರುವ ಗ್ಲೋಬಲ್ ಟಿ20ಯಲ್ಲಿ ಮೆಕಲಮ್ ಮುಂದುವರೆದಿದ್ದರು. ಈ ಬಾರಿಯ ಗ್ಲೋಬಲ್ ಟಿ20 ಲೀಗ್ ಮೆಕಲಮ್ ಅವರ ಕೊನೆಯ ಟೂರ್ನಿಯಾಗಲಿದೆ.

37ರ ಹರೆಯದ ಬ್ಲ್ಯಾಕ್‌ಕ್ಯಾಪ್ಸ್ ಮಾಜಿ ನಾಯಕ ಮೆಕಲಮ್ 101 ಟೆಸ್ಟ್ ಪಂದ್ಯಗಳಲ್ಲಿ 12 ಶತಕಗಳೂ ಸೇರಿ ಒಟ್ಟಿಗೆ 6453 ರನ್ ಬಾರಿಸಿದ್ದರು. ಟೆಸ್ಟ್ ನಲ್ಲಿ 302 ಅತ್ಯಧಿಕ ರನ್ ದಾಖಲೆ ಬ್ರೆಂಡನ್ ಮಾಡಿದ್ದರು. ಇನ್ನು 260 ಏಕದಿನ ಪಂದ್ಯಗಳಲ್ಲಿ 6083 ರನ್, 71 ಅಂತಾರಾಷ್ಟ್ರೀತ ಟಿ20ಗಳಲ್ಲಿ 2140 ರನ್ ದಾಖಲೆ ಮೆಕಲಮ್ ಹೆಸರಿನಲ್ಲಿದೆ.

ಎಲ್ಲಾ ಟಿ20 ಲೀಗ್‌ಗಳು ಸೇರಿ ಒಟ್ಟು 370 ಪಂದ್ಯಗಳಲ್ಲಿ 9922 ರನ್ ಸಾಧನೆ ಮಾಡಿದ್ದಾರೆ. ಆಗಸ್ಟ್ 3ರಂದು ಟೊರೊಂಟೋ ನ್ಯಾಷನಲ್ಸ್ ಪರ ಆಡಿದ್ದ ಮೆಕಲಮ್, ಬ್ರಾಂಪ್ಟನ್ ವೂಲ್ವ್ಸ್‌ ವಿರುದ್ಧ 22 ಎಸೆತಗಳಿಗೆ 36 ರನ್ ಬಾರಿಸಿದ್ದರು. ಇದೇ ಪಂದ್ಯದಲ್ಲಿ ಯುವರಾಜ್ ಕೂಡ 22 ಎಸೆತಗಳಿಗೆ 51 ರನ್ ಸಿಡಿಸಿದ್ದರಾದರೂ ಟೊರೊಂಟೋ ನ್ಯಾಷನಲ್ಸ್ 11 ರನ್ ಸೋಲನುಭವಿಸಿತು.

Story first published: Tuesday, August 6, 2019, 10:36 [IST]
Other articles published on Aug 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+