ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರವೀಣ್ ಕುಮಾರ್ ಮಾಡಿದ್ದ ಈ ಐಪಿಎಲ್ ದಾಖಲೆಯನ್ನು ಇನ್ನೂ ಯಾರಿಗೂ ಮುರಿಯಲಾಗಿಲ್ಲ!

Here is the list of bowlers who bowled most maiden overs in IPL history

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಐಪಿಲ್‌ನಲ್ಲಿ ಕೂಡ ಪ್ರವೀಣ್ ಕುಮಾರ್ ಕೆಲ ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದ 2010ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದ ಪ್ರವೀಣ್ ಕುಮಾರ್ 2008ರಲ್ಲಿ 124 ಮೀಟರ್ ಉದ್ದದ ಸಿಕ್ಸರ್ ಸಿಡಿಸುವುದರ ಮೂಲಕ ಆ ಟೂರ್ನಿಯಲ್ಲಿ ಅತಿಉದ್ದದ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಆಲ್ಬಿ ಮೊರ್ಕೆಲ್ ಜೊತೆ ಹಂಚಿಕೊಂಡಿದ್ದರು.

ನಂತರ 2011ರಿಂದ 2013ರ ಐಪಿಎಲ್ ಟೂರ್ನಿಯವರೆಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಪ್ರವೀಣ್ ಕುಮಾರ್ ಆಡಿದ್ದರು, 2014ರಲ್ಲಿ ಪ್ರವೀಣ್ ಕುಮಾರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತು, 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಪ್ರವೀಣ್ ಕುಮಾರ್ 2016-17ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. ಹೀಗೆ 2008ರಿಂದ 2017ರವರೆಗೆ ವಿವಿಧ ಐಪಿಎಲ್ ತಂಡಗಳಲ್ಲಿ ಆಡಿರುವ ಪ್ರವೀಣ್ ಕುಮಾರ್ ಬೌಲರ್‌ ಆಗಿ ನಿರ್ಮಿಸಿರುವ ಒಂದು ದಾಖಲೆಯನ್ನು ಮಾತ್ರ ಇದುವರೆಗೂ ಸಹ ಯಾರೂ ಸರಿಗಟ್ಟಲಾಗಲಿಲ್ಲ. ಹೌದು ಪ್ರವೀಣ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ ಮಾಡಿರುವ ಅತಿಹೆಚ್ಚು ಮೇಡನ್ ಓವರ್ ದಾಖಲೆಯನ್ನು ಇದುವರೆಗೂ ಯಾವ ಬೌಲರ್ ಕೂಡ ಸರಿಗಟ್ಟಿಲ್ಲ.

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಪ್ರವೀಣ್ ಕುಮಾರ್ ಒಟ್ಟು 14 ಮೇಡನ್ ಓವರ್‌ಗಳನ್ನು ಮಾಡಿದ್ದು, ಅತಿಹೆಚ್ಚು ಮೇಡನ್ ಓವರ್ ಮಾಡಿದ ಬೌಲರ್ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಪ್ರವೀಣ್ ಕುಮಾರ್ ಹೊರತುಪಡಿಸಿ ಇರ್ಫಾನ್ ಪಠಾಣ್ 10, ಧವಳ್ ಕುಲಕರ್ಣಿ, ಸಂದೀಪ್ ಶರ್ಮಾ, ಲಸಿತ್ ಮಾಲಿಂಗ ಮತ್ತು ಭುವನೇಶ್ವರ್ ಕುಮಾರ್ ತಲಾ 8 ಮೇಡನ್ ಓವರ್‌ಗಳನ್ನು ಮಾಡಿದ್ದಾರೆ.

Story first published: Sunday, May 9, 2021, 13:29 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X