ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಒಳ್ಳೆಯ ನಾಯಕನಲ್ಲ ಅನ್ನೋದನ್ನು ನಾನು ಒಪ್ಪಲ್ಲ: ಮದನ್ ಲಾಲ್

I dont believe Sachin Tendulkar was not a good captain: Madan Lal

ನವದೆಹಲಿ, ಜೂನ್ 19: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಬ್ಬ ಒಳ್ಳೆಯ ನಾಯಕನಾಗಿರಲಿಲ್ಲ ಅನ್ನೋ ಮಾತನ್ನು ನಾನು ಒಪ್ಪಲಾರೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಮದನ್ ಲಾಲ್ ಹೇಳಿದ್ದಾರೆ. ಭಾರತದಲ್ಲಿ ಸಚಿನ್ ಕೂಡ ಒಬ್ಬ ಒಳ್ಳೆಯ ನಾಯಕರಾಗಿದ್ದರು ಎಂದು ಲಾಲ್ ಅಭಿಪ್ರಾಯಿಸಿದ್ದಾರೆ.

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ''ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

1996ರಿಂದ 2000ರ ವರೆಗೆ ಸಚಿನ್ ತೆಂಡೂಲ್ಕರ್ ಭಾರತದ ನಾಯಕತ್ವ ವಹಿಸಿದ್ದರು. ಈ ವೇಳೆ 73 ಏಕದಿನ ಪಂದ್ಯಗಳಲ್ಲಿ ಮತ್ತು 25 ಟೆಸ್ಟ್ ಪಂದ್ಯಗಳಲ್ಲಿ ತಂಡಕ್ಕೆ ನಾಯಕನಾಗಿ ಜವಾಬ್ದಾರಿ ಹೊತ್ತಿದ್ದರು. ಇದರಲ್ಲಿ ಏಕದಿನದಲ್ಲಿ 23 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, 43 ಪಂದ್ಯಗಳಲ್ಲಿ ಭಾರತ ಸೋತಿತ್ತು. ಇನ್ನು 4 ಟೆಸ್ಟ್ ಪಂದ್ಯಗಳಲ್ಲಿ ಗೆದ್ದು 9 ಪಂದ್ಯಗಳನ್ನು ಸೋತಿತ್ತು.

 ಆ ಸಂದರ್ಭದಲ್ಲಿ ಒಂದು ಕ್ಷಣವೂ ನನ್ನ ಕುಟುಂಬ ಒಂಟಿಯಾಗಿರಲು ಬಿಟ್ಟಿರಲಿಲ್ಲ: ಮೊಹಮದ್ ಶಮಿ ಆ ಸಂದರ್ಭದಲ್ಲಿ ಒಂದು ಕ್ಷಣವೂ ನನ್ನ ಕುಟುಂಬ ಒಂಟಿಯಾಗಿರಲು ಬಿಟ್ಟಿರಲಿಲ್ಲ: ಮೊಹಮದ್ ಶಮಿ

'ಸಚಿನ್ ಒಬ್ಬ ಶ್ರೇಷ್ಠ ನಾಯಕಾಗಿರಲಿಲ್ಲ ಅನ್ನೋ ಮಾತನ್ನು ನಾನು ಒಪ್ಪಲಾರೆ. ಆದರೆ ಸಚಿನ್ ತನ್ನ ಸ್ವಂತ ಕಾರ್ಯಕ್ಷಮತೆಯ ಕಡೆಗೆ ಹೆಚ್ಚು ಮುಳುಗಿರುತ್ತಿದ್ದರು. ಹೀಗಾಗಿ ಸಹಜವಾಗೇ ಇಡೀ ತಂಡದ ಕಡೆಗೆ ಗಮನ ಹರಿಸಲು ಅವರಿಂದ ಕಷ್ಟವಾಗುತ್ತಿತ್ತು,' ಎಂದು ಸ್ಪೋರ್ಟ್ಸ್ ಕೀಡಾ ಜೊತೆ ಫೇಸ್ಬುಕ್ ಲೈವ್‌ನಲ್ಲಿ ಮಾತನಾಡಿದ ಮದನ್ ಲಾಲ್ ಹೇಳಿದ್ದಾರೆ.

ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್

'ಯಾಕೆಂದರೆ ನಾಯಕನಾಗಿ ಬರೀ ನೀವಷ್ಟೇ ನಿಮ್ಮ ಕಾರ್ಯಕ್ಷಮತೆಯ ಜಾಗ್ರತೆ ವಹಿಸಬೇಕಾಗಿರುವುದಿಲ್ಲ, ಉಳಿದ 10 ಆಟಗಾರರಿಂದಲೂ ಕಾರ್ಯಕ್ಷಮತೆ ಹೊರ ತೆಗೆಯಬೇಕಿರುತ್ತದೆ. ಇದನ್ನು ನಿಭಾಯಿಸಲು ಕಷ್ಟವಿರುತ್ತದೆ,' ಎಂದು ಲಾಲ್ ನಾಯಕವಾಗಿ ತಂಡ ನಿಭಾಯಿಸುವುದರ ಹಿಂದಿನ ಸವಾಲನ್ನು ವಿವರಿಸಿದ್ದಾರೆ.

'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!

ಸಚಿನ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಸಚಿನ್ ನಾಯಕತ್ವ ವಹಿಸಿದ 55 ಪಂದ್ಯಗಳಲ್ಲಿ 32 ಪಂದ್ಯಗಳಲ್ಲಿ ಎಂಐ ಗೆದ್ದಿತ್ತು. ಆದರೆ ಸಚಿನ್ ನಾಯಕತ್ವದಲ್ಲಿ ಎಂಐ ಫ್ರಾಂಚೈಸಿ ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲ.

Story first published: Friday, June 19, 2020, 22:15 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X