ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಿಯ ಫೀಲ್ಡಿಂಗ್ ನೋಡಿ ಪ್ರಶಸ್ತಿ ಘೋಷಿಸಿದ ಐಸಿಸಿ: ವೈರಲ್ ವಿಡಿಯೋ

ICC announces Player of the Month award to a DOG

ಅಬುಧಾಬಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಗಸ್ಟ್ ತಿಂಗಳ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ ಪ್ರಕಟಿಸಿದೆ. ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್‌ಗೆ ಈ ಪ್ರಶಸ್ತಿ ಒಲಿದಿದೆ. ಆದರೆ ಎಲ್ಲರ ಗಮನ ಐಸಿಸಿ ಹೊಸದಾಗಿ ಘೋಷಿಸಿರುವ ಮತ್ತೊಂದು ಪ್ರಶಸ್ತಿಯತ್ತ ಹೊರಳಿದೆ. ಆ ಪ್ರಶಸ್ತಿ ಯಾವುದೆಂದರೆ ನಾಯಿಗೆ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಟೇಲರ್ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಟೇಲರ್

ನಿಜಕ್ಕೂ ಐಸಿಸಿ ನಾಯಿಯೊಂದಕ್ಕೆ 'ಐಸಿಸಿ ಡಾಗ್ ಆಫ್‌ ದ ಮಂಥ್' ಎನ್ನುವ ವಿಶೇಷ ಪ್ರಶಸ್ತಿ ಘೋಷಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಐಸಿಸಿ ಈ ಬಗ್ಗೆ ಪೋಸ್ಟ್ ಕೂಡ ಹಾಕಿಕೊಂಡಿದೆ. 'ಐಸಿಸಿ ಡಾಗ್ ಆಫ್‌ ದ ಮಂತ್ ಪ್ರಸಸ್ತಿಯಾಗಿ ಡ್ಯಾಝಲ್ ನಾಯಿಗೆ ಐರ್ಲೆಂಡ್‌ ಕ್ರಿಕೆಟ್‌ನಲ್ಲಿ ಬೆಸ್ಟ್ ಫೀಲ್ಡರ್ ಆಫ್‌ ದ ಮೊಮೆಂಟ್' ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ನಾವು ಟ್ರೋಫಿ ಗೆದ್ದಿಲ್ಲ, ಧೋನಿ ಮೆಂಟರ್ ಆಗಲು ಸಿಎಸ್‌ಕೆ ಕೂಡ ಕಾರಣ; ಮನಬಿಚ್ಚಿ ಮಾತನಾಡಿದ ಗಂಗೂಲಿನಾವು ಟ್ರೋಫಿ ಗೆದ್ದಿಲ್ಲ, ಧೋನಿ ಮೆಂಟರ್ ಆಗಲು ಸಿಎಸ್‌ಕೆ ಕೂಡ ಕಾರಣ; ಮನಬಿಚ್ಚಿ ಮಾತನಾಡಿದ ಗಂಗೂಲಿ

ಅಸಲಿಗೆ ಇದು ತಮಾಷೆಗಾಗಿ ಘೋಷಿಸಲಾದ ಪ್ರಶಸ್ತಿ. ಅದೇನೆಂದರೆ, ಐರ್ಲೆಂಡ್‌ನಲ್ಲಿ ಮಹಿಳೆಯರಿಗಾಗಿ ದೇಸಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಆ ವೇಳೆ ಅಚಾನಕ್ ಮೈದಾನಕ್ಕೆ ಓಡಿ ಬಂದ ನಾಯಿಯೊಂದು ಫೀಲ್ಡರ್‌ಗಳ ಮಧ್ಯೆಯಲ್ಲಿ ಓಡಾಡುತ್ತಿದ್ದ ಚೆಂಡನ್ನು ಕಚ್ಚಿಕೊಂಡು ಓಡತೊಡಗಿತ್ತು.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

ಚೆಂಡಿಗಾಗಿ ಫೀಲ್ಡರ್‌ಗಳು ನಾಯಿಯ ಹಿಂದೆ ಓಡಿದರಾದರೂ ನಾಯಿ ಯಾರ ಕೈಗೂ ಸಿಗದೆ ಸ್ಟ್ರೈಕ್‌ನಲ್ಲಿದ್ದ ಬ್ಯಾಟ್ಸ್‌ಮನ್‌ ಕೈಗೆ ಚೆಂಡು ನೀಡಿತ್ತು. ಆಲ್ ಐರ್ಲೆಂಡ್ ಟಿ20 ವಿಮೆನ್ಸ್ ಕಪ್‌ ಟೂರ್ನಿಯಲ್ಲಿ ಬ್ರೆಡಿ ಮತ್ತು ಸಿಎಸ್‌ಎನ್ ನಡುವೆ ಶನಿವಾರ (ಸೆಪ್ಟೆಂಬರ್‌ 11) ನಡೆದ ಪಂದ್ಯದ ವೇಳೆ ಡ್ಯಾಝಲ್ ಎನ್ನುವ ನಾಯಿ ಹೀಗೆ ತಮಾಷೆಯ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇದೇ ನಾಯಿಗೆ ಈಗ ಐಸಿಸಿ ವಿಶೇಷ ಪ್ರಶಸ್ತಿ ಘೋಷಿಸಿದೆ.

Story first published: Tuesday, September 14, 2021, 10:00 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X