ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ಟೂರ್ನಮೆಂಟ್‌ನಲ್ಲಿ ಆತ ಗನ್ ಪ್ಲೇಯರ್, 2023ರ ವಿಶ್ವಕಪ್‌ಗೆ ಪರಿಗಣಿಸಿ: ದಿನೇಶ್ ಕಾರ್ತಿಕ್

Dinesh karthik

ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಗೆಲುವು ಸಾಧಿಸಿದೆ. ಮೂರನೇ ಟಿ20 ಪಂದ್ಯವು ಮಳೆಯಿಂದಾಗಿ ಟೈನಲ್ಲಿ ಅಂತ್ಯಗೊಂಡ ಪರಿಣಾಮ ಅದಾಗಲೇ ಒಂದು ಪಂದ್ಯ ಗೆದ್ದಿದ್ದ ಹಾರ್ದಿಕ್ ಪಾಂಡ್ಯ ಪಡೆ ಸರಣಿ ಜಯಿಸಿತು.

ಟಿ20 ಸರಣಿ ಬಳಿಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಮುನ್ನಡೆಯಲಿರುವ ಟೀಂ ಇಂಡಿಯಾ, 50 ಓವರ್ ಫಾರ್ಮೆಟ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಲು ಎದುರು ನೋಡುತ್ತಿದೆ. ನವೆಂಬರ್ 25ರಂದು ಆಕ್ಲೆಂಡ್‌ನ ಈಡೆನ್ ಪಾರ್ಕ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು ಉಳಿದೆರಡು ಪಂದ್ಯಗಳು ಹ್ಯಾಮಿಲ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ನವೆಂಬರ್ 27 ಮತ್ತು 30 ರಂದು ನಡೆಯಲಿದೆ.

ಈ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾ ನಾಯಕತ್ವ ವಹಿಸಿದ್ರೆ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ. ಟಿ20 ಸರಣಿಯಲ್ಲಿ ತನ್ನ ಕಳಪೆ ಆಟ ಪ್ರದರ್ಶಿಸಿದ ರಿಷಭ್ ಪಂತ್‌ಗೆ ಏಕದಿನ ಫಾರ್ಮೆಟ್‌ನಲ್ಲಿಯೂ ಅವಕಾಶ ನೀಡಲಾಗಿದೆ. ಜೊತೆಗೆ ಟಿ20 ಅವಕಾಶ ಸಿಗದ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಬಹುದು.

ವಿಶ್ವಕಪ್‌ನಲ್ಲಿ ಶಿಖರ್ ಧವನ್ ಖಂಡಿತವಾಗಿಯೂ ಮಿಂಚಬಲ್ಲರು: ದಿನೇಶ್ ಕಾರ್ತಿಕ್

ವಿಶ್ವಕಪ್‌ನಲ್ಲಿ ಶಿಖರ್ ಧವನ್ ಖಂಡಿತವಾಗಿಯೂ ಮಿಂಚಬಲ್ಲರು: ದಿನೇಶ್ ಕಾರ್ತಿಕ್

ಪ್ರಸ್ತುತ ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಹಂಗಾಮಿ ನಾಯಕನಾಗಿರುವ ಶಿಖರ್ ಧವನ್ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಟೀಂ ಇಂಡಿಯಾದಲ್ಲಿ ಆಡಬೇಕೆಂದು ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಬೆಂಬಲಿಸಿದ್ದಾರೆ.

ಶಿಖರ್ ಧವನ್‌ರನ್ನು ಉದ್ದೇಶಪೂರ್ವಕವಾಗಿಯೇ ಏಕದಿನ ಫಾರ್ಮೆಟ್‌ನಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಉಳಿಸಿಕೊಂಡಿದೆ. ಆತ ತನ್ನ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಐಸಿಸಿ ಟೂರ್ನಮೆಂಟ್‌ನಲ್ಲಿ ಆಡಿಸುವ ಗುರಿಯನ್ನ ಹೊಂದಲಾಗಿದೆ.

''ನನಗೆ ಅನ್ನಿಸುವ ಪ್ರಕಾರ, ವಿಶ್ವಕಪ್‌ನಲ್ಲಿ ಆತ ಖಂಡಿತವಾಗಿಯೂ ಇನ್ನಿಂಗ್ಸ್‌ ಆರಂಭಿಸುತ್ತಾನೆ. ಇಲ್ಲದೇ ಹೋದಲ್ಲಿ ಆತನನ್ನು ಏಕದಿನ ಫಾರ್ಮೆಟ್‌ನಲ್ಲಿ ಆಡಿಸುತ್ತಿರಲಿಲ್ಲ. ಆತನಿಗೆ ಒಡಿಐ ತಂಡದಲ್ಲಿ ಏಕೆ ಅವಕಾಶ ನೀಡಲಾಗಿದೆ ಎಂಬ ಅರಿವಿದೆ ಮತ್ತು ಆತ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಗನ್‌ ಪ್ಲೇಯರ್ ಆಗಿದ್ದಾನೆ. ಕೆಲವರು ಕೆಲ ನಿರ್ದಿಷ್ಟ ಅವಧಿಯಲ್ಲಷ್ಟೇ ಮಿಂಚುತ್ತಾರೆ. ಆದ್ರೆ ಆತ ಸತತವಾಗಿ ತನ್ನ ಸ್ಥಿರ ಪ್ರದರ್ಶನ ನೀಡಿದ್ದಾನೆ'' ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ICC ODI Ranking: ಕುಸಿದ ಇಂಗ್ಲೆಂಡ್, ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್; ಭಾರತದ ಸ್ಥಾನವೇನು?

2019ರ ವಿಶ್ವಕಪ್‌ನಲ್ಲಿ ಗಾಯಗೊಳ್ಳುವ ಮೊದಲು ಉತ್ತಮ ಆಟ ಪ್ರದರ್ಶಿಸಿದ್ದನು!

2019ರ ವಿಶ್ವಕಪ್‌ನಲ್ಲಿ ಗಾಯಗೊಳ್ಳುವ ಮೊದಲು ಉತ್ತಮ ಆಟ ಪ್ರದರ್ಶಿಸಿದ್ದನು!

''2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಳ್ಳುವ ಮೊದಲು ಶಿಖರ್ ಧವನ್ ಉತ್ತಮ ಆಟವಾಡಿದ್ರು. ಆತನ ಮೇಲೆ ಓಪನರ್ ಆಗಿ ಹೆಚ್ಚು ನಂಬಿಕೆ ಇಡಬಹುದು. ಏಕೆಂದರೆ ಆತನ ಗ್ಲೇಮ್‌ಪ್ಲಾನ್ ಏನೆಂದು ಆತನಿಗೆ ತಿಳಿದಿದೆ. ಕ್ರೀಸ್ ಅನ್ನು ಆತ ಉತ್ತಮವಾಗಿ ಬಳಸಿಕೊಳ್ಳುತ್ತಾನೆ'' ಎಂದು ಕಾರ್ತಿಕ್ ಹೇಳಿದ್ದಾರೆ.

ಬಾಂಗ್ಲಾದೇಶ ಸರಣಿಯಿಂದ ಜಡೇಜಾ ಔಟ್: ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್‌ಗೆ ಸ್ಥಾನ?

ಈ ವರ್ಷದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಶಿಖರ್ ಧವನ್

ಈ ವರ್ಷದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಶಿಖರ್ ಧವನ್

ಶಿಖರ್ ಧವನ್ 2022ರಲ್ಲಿ 16 ಏಕದಿನ ಪಂದ್ಯಗಳಲ್ಲಿ 40.50 ಸರಾಸರಿಯಲ್ಲಿ 567 ರನ್ ಕಲೆಹಾಕಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಜಿಂಜಾಬ್ವೆ ಪ್ರವಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿದ್ದಾರೆ. ಅದ್ರಲ್ಲೂ ಆತ ಐಸಿಸಿ ಟೂರ್ನಮೆಂಟ್‌ನಲ್ಲಿ ಆಡುವುದನ್ನು ಆನಂದಿಸುತ್ತಾರೆ. 2019ರ ವಿಶ್ವಕಪ್‌ ಆರಂಭಕ್ಕೂ ಮುನ್ನ ಹೆಬ್ಬರಳಿನ ಗಾಯಕ್ಕೆ ತುತ್ತಾದ ಧವನ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ರು.

Story first published: Wednesday, November 23, 2022, 23:18 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X