ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್, ಏಕದಿನ: ದಾಖಲೆ ಮೇಲೆ ದಾಖಲೆ ಬರೆದ ಕಿಂಗ್ ಕೊಹ್ಲಿ!

India vs Australia: Captain Virat Kohli aces another batting milestone

ರಾಂಚಿ, ಮಾರ್ಚ್ 8: ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ (ಮಾರ್ಚ್ 8) ನಡೆದ ಭಾರತ vs ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಆಕರ್ಷಕ ಬ್ಯಾಟಿಂಗ್ ಮೂಲಕ ಕಿಂಗ್ ಕೊಹ್ಲಿ ಅಭಿಮಾನಿಗಳಿಂದ ಮತ್ತೊಮ್ಮೆ ರನ್ ಮೆಷೀನ್ ಎಂದು ಕರೆಸಿಕೊಂಡಿದ್ದಾರೆ.

ಕೊಹ್ಲಿ ಹೋರಾಟ ವ್ಯರ್ಥ, ಭಾರತ ಮಣಿಸಿ ಸರಣಿ ಹಿಡಿದಿಟ್ಟುಕೊಂಡ ಆಸೀಸ್ಕೊಹ್ಲಿ ಹೋರಾಟ ವ್ಯರ್ಥ, ಭಾರತ ಮಣಿಸಿ ಸರಣಿ ಹಿಡಿದಿಟ್ಟುಕೊಂಡ ಆಸೀಸ್

ಪಂದ್ಯದಲ್ಲಿ 95 ಎಸೆತಗಳಿಗೆ 123 ರನ್ ಬಾರಿಸಿದ ಕೊಹ್ಲಿ ದಾಖಲೆಗಳ ಸರದಾರನಾಗಿ ಮತ್ತೊಮ್ಮೆ ಮಿಂಚಿದರು. ಈ ಸಾಧನೆಯೊಂದಿಗೆ ಕೊಹ್ಲಿ 41ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿಕೊಂಡರಲ್ಲದೆ ನಾಯಕನಾಗಿ ಅತೀ ವೇಗದ ರನ್‌ಗಾಗಿಯೂ ಗುರುತಿಸಿಕೊಂಡರು.

ಭಾರತ vs ಆಸೀಸ್: ಆರ್ಮಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾಭಾರತ vs ಆಸೀಸ್: ಆರ್ಮಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾ

ರಾಂಚಿ ಮೈದಾನದಲ್ಲಿ ಭಾರತ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಹಲವಾರು ಅಪರೂಪದ ದಾಖಲೆಗಳಿಗಾಗಿ ಗಮನ ಸೆಳೆದರು. ಈ ಪಂದ್ಯವನ್ನು ಟೀಮ್ ಇಂಡಿಯಾ 32 ರನ್‌ಗಳಿಂದ ಸೋತಿತು. ಆದರೆ ಪಂದ್ಯದಲ್ಲಿ ತಂಡದ ಪರ ಕೊಸರಾಡಿದ ಕೊಹ್ಲಿ ದಾಖಲೆಗಳ ವಿವರ ಕೆಳಗಿದೆ.

41ನೇ ಅಂತಾರಾಷ್ಟ್ರೀಯ ಶತಕ

41ನೇ ಅಂತಾರಾಷ್ಟ್ರೀಯ ಶತಕ

ರಾಂಚಿಯಲ್ಲಿ 123 ರನ್ ಸಿಡಿಸಿದ ಕೊಹ್ಲಿ ಒಟ್ಟು 217 ಏಕದಿನ ಇನ್ನಿಂಗ್ಸ್‌ಗಳಲ್ಲಿ 10,816 ರನ್‌ಗಳೊಂದಿಗೆ 41ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿಕೊಂಡರು. ಏಕದಿನದಲ್ಲಿ 60.09 ಸರಾಸರಿ ಮತ್ತು 92.95 ಸ್ಟ್ರೈಕ್ ರೇಟ್ ಹೊಂದಿರುವ ವಿರಾಟ್ 49 ಅರ್ಧಶತಕಗಳ ದಾಖಲೆ ಹೊಂದಿದ್ದಾರೆ. ಏಕದಿನದಲ್ಲಿ 1016 ಬೌಂಡರಿ ಮತ್ತು 117 ಸಿಕ್ಸರ್‌ಗಳ ರೆಕಾರ್ಡ್ ಕೊಹ್ಲಿ ಹೆಸರಿನಲ್ಲಿದೆ.

ವೇಗದ ರನ್

ವೇಗದ ರನ್

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 4,000 ರನ್ ಬಾರಿಸಿದ ಭಾರತದ ನಾಲ್ಕನೇ ನಾಯಕನಾಗಿ ಮತ್ತು ವಿಶ್ವದ 12ನೇ ಕ್ಯಾಪ್ಟನ್ ಆಗಿ ರನ್ ಮೆಷೀಸ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಅಲ್ಲದೆ ಅತೀ ವೇಗವಾಗಿ 4000 ರನ್ ಬಾರಿಸಿದ ವಿಶ್ವದ ಆಟಗಾರರಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಕೊಹ್ಲಿ ನಂ.1

ಕೊಹ್ಲಿ ನಂ.1

ಅತೀ ವೇಗವಾಗಿ 4000 ರನ್ ಬಾರಿಸಿದ ವಿಶ್ವದ ಕ್ರಿಕೆಟ್ ತಂಡಗಳ ನಾಯಕರಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸಾಧನೆಗೆ ಕೊಹ್ಲಿ ಬಳಸಿಕೊಂಡಿದ್ದು ಕೇವಲ 63 ಇನ್ನಿಂಗ್ಸ್‌ ಮಾತ್ರ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ 77 ಇನ್ನಿಂಗ್ಸ್‌, ಭಾರತದ ಎಂಎಸ್ ಧೋನಿ 100 ಇನ್ನಿಂಗ್ಸ್‌ (3ನೇ), ಸೌರವ್ ಗಂಗೂಲಿ 103 ಇನ್ನಿಂಗ್ಸ್‌ (4ನೇ) ಮತ್ತು ಶ್ರಿಲಂಕಾದ ಸನತ್ ಜಯಸೂರ್ಯ (5ನೇ) 106 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ.

ಸಚಿನ್ ದಾಖಲೆ ಸರಿಸಮ

ಸಚಿನ್ ದಾಖಲೆ ಸರಿಸಮ

ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ತೆಂಡೂಲ್ಕರ್ ಆಸೀಸ್ ವಿರುದ್ಧ ಒಟ್ಟು 8 ಶತಕಗಳನ್ನು ಬಾರಿಸಿದ್ದರು. ಈಗ ಕೊಹ್ಲಿ ಕೂಡ ಈ ಸಾಲಿನಲ್ಲಿ 8 ಶತಕಗಳನ್ನು ಪೂರೈಸಿ ಸಚಿನ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಇದೇ ಸಾಧನೆ ಮರೆಯೋದಕ್ಕೆ ಭಾರತದ ಉಪನಾಯಕ ರೋಹಿತ್ ಶರ್ಮಾಗೆ ಕೇವಲ ಒಂದು ಶತಕದ ಅವಶ್ಯಕತೆಯಿತ್ತು. ಆದರೆ ರೋಹಿತ್ ಕಳಪೆ ಬ್ಯಾಟಿಂಗ್‌ನಿಂದಾಗಿ ಅವಕಾಶ ಕಳೆದುಕೊಂಡಿದ್ದಾರೆ.

Story first published: Friday, March 8, 2019, 22:25 [IST]
Other articles published on Mar 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X