ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಬ್ಯಾಟಿಂಗ್ ಉಲ್ಲೇಖಿಸಿ ತಮ್ಮ ಕನಸು ಹಂಚಿಕೊಂಡ ಇಶಾನ್ ಕಿಶನ್

Indian opener Ishan Kishan said All of us want to bat like Suryakumar Yadav

ಸದ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಸೂರ್ಯಕುಮಾರ್ ಯಾದವ್ ಬಗ್ಗೆಯೇ ಮಾತು. ಪ್ರತಿ ಪಂದ್ಯದಲ್ಲಿಯೂ ಅಮೋಫ ಪ್ರದರ್ಶನ ನೀಡುವ ಮೂಲಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೂರ್ಯ ನೀಡುತ್ತಿರುವ ಸ್ಥಿರ ಪ್ರದರ್ಶನಕ್ಕೆ ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಕೂಡ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು ತಾವು ಕೂಡ ಅಂಥಾದ್ದೇ ಪ್ರದರ್ಶನ ನೀಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯಕ್ಕೂ ಮುನ್ನ ಪ್ರೈಮ್ ವಿಡಿಯೋ ಜೊತೆಗೆ ಮಾತನಾಡಿದ ಇಶಾನ್ ಕಿಶನ್ ಸೂರ್ಯಕುಮಾರ್ ಯಾದವ್ ಅವರಿಂದ ಸಾಕಷ್ಟು ಕಲಿಯುವುದು ಇದೆ ಎಂದಿದ್ದಾರೆ. "ಅವರ ಬ್ಯಾಟಿಂಗ್ ಸಂದರ್ಭದಲ್ಲಿ ನಾನು ಮತ್ತೊಂದು ತುದಿಯಲ್ಲಿರಲು ಬಯಸುತ್ತೇನೆ. ಅವರು ಬ್ಯಾಟಿಂಗ್ ನಡೆಸುವುದು ಬಹಳ ಸುಲಭ ಎಂಬಂತೆ ಬ್ಯಾಟ್ ಬೀಸುತ್ತಾರೆ. ಅವರಂತೆಯೇ ನಾವೆಲ್ಲರೂ ಬ್ಯಾಟಿಂಗ್ ನಡೆಸುವುದನ್ನು ಬಯಸುತ್ತೇವೆ" ಎಂದಿದ್ದಾರೆ ಇಶಾನ್ ಕಿಶನ್.

Vijay Hajare Trophy: ಜಾರ್ಖಂಡ್ ವಿರುದ್ಧ ಸೋತು ನಾಕೌಟ್ ರೇಸ್‌ನಿಂದ ಹೊರಬಿದ್ದ ದೆಹಲಿVijay Hajare Trophy: ಜಾರ್ಖಂಡ್ ವಿರುದ್ಧ ಸೋತು ನಾಕೌಟ್ ರೇಸ್‌ನಿಂದ ಹೊರಬಿದ್ದ ದೆಹಲಿ

ಸಾಕಷ್ಟು ಕಲಿಯುವುದು ಇದೆ ಎಂದ ಇಶಾನ್ ಕಿಶನ್

ಸಾಕಷ್ಟು ಕಲಿಯುವುದು ಇದೆ ಎಂದ ಇಶಾನ್ ಕಿಶನ್

"ಮೈದಾನದ ಹೊರಗೆಯೂ ನಾನು ಅವರೊಂದಿಗೆ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಕಾಲ ಕಳೆದಿದ್ದೇನೆ. ಅವರ ಹೈಡ್ರೇಶನ್, ನಿದ್ರಿಸುವ ಕ್ರಮ ಹಾಗೂ ಆಹಾರ ಕ್ರಮದಲ್ಲಿ ಅವರು ಸಾಕಷ್ಟು ಕಟ್ಟುನಿಟ್ಟಾಗಿದ್ದಾರೆ. ನಾವು ಯುವ ಆಟಗಾರರು ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಬ್ಯಾಟಿಂಗ್, ಅವರ ಶಕ್ತಿ, ಕೆಲಸದ ಮೇಲಿನ ಬದ್ಧತೆ ಎಲ್ಲದಕ್ಕೂ ಕೂಡ ಅವರು ಶೇಕಡಾ ನೂರರಷ್ಟು ಶ್ರಮವಹಿಸುತ್ತಾರೆ" ಎಂದಿದ್ದಾರೆ ಇಶಾನ್ ಕಿಶನ್.

IPL 2023: ಈ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದ ಸನ್‌ರೈಸರ್ಸ್ ಹೈದರಾಬಾದ್

ಸೂರ್ಯ ಆಟಕ್ಕೆ ತಲೆದೂಗಿದ ಕೊಹ್ಲಿ ಸಚಿನ್

ಸೂರ್ಯ ಆಟಕ್ಕೆ ತಲೆದೂಗಿದ ಕೊಹ್ಲಿ ಸಚಿನ್

ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದರು. ಪ್ರದರ್ಶನದಬಳಿಕ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿ ಸೂರ್ಯ ಬ್ಯಾಟಿಂಗ್‌ಅನ್ನು ವಿಡಿಯೋ ಗೇಮ್‌ಗೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಸಚಿನ್ ತೆಂಡೂಲ್ಕರ್ ಕೂಡ ಭಾರತ ತಂಡದ ಆಟಗಾರನ ಪ್ರದರ್ಶನವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಅಂತಿಮ ಪಂದ್ಯದಲ್ಲಿ ವಿಫಲವಾದ ಸೂರ್ಯ

ಅಂತಿಮ ಪಂದ್ಯದಲ್ಲಿ ವಿಫಲವಾದ ಸೂರ್ಯ

ಇನ್ನು ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಅತ್ಯಂತ ಅಪರೂಪವೆಂಬಂತೆ ವಿಫಲವಾದರು. ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ವೈಫಲ್ಯದ ಬಳಿಕ ಬ್ಯಾಟಿಂಗ್‌ಗೆ ಇಳಿದ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 13 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

IND vs NZ: ಟಿ20ನಲ್ಲಿ ನಂ.1 ಪಟ್ಟ ಪಡೆದಿರುವ ಸೂರ್ಯಕುಮಾರ್ ಮುಂದಿನ ಗುರಿ ಇದು!

ಪಂದ್ಯಕ್ಕೆ ಮಳೆ ಅಡ್ಡಿ DLS ಆಧಾರದಲ್ಲಿ ಪಂದ್ಯ ಟೈ

ಪಂದ್ಯಕ್ಕೆ ಮಳೆ ಅಡ್ಡಿ DLS ಆಧಾರದಲ್ಲಿ ಪಂದ್ಯ ಟೈ

ಇನ್ನು ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತದ ಬಳಿಕ ಚೇತರಿಸಿಕೆ ಕಂಡಿತು. ಡೆವೋನ್ ಕಾನ್ವೆ ಹಾಗೂ ಗ್ಲೆನ್ ಫಿಲಿಪ್ಸ್ ಅವರ ಅದ್ಭುತ ಜೊತೆಯಾಟದ ಕಾರಣದಿಂದ ಕಿವೀಸ್ ಪಡೆ ಉತ್ತಮ ರನ್‌ನತ್ತ ಮುನ್ನುಗ್ಗಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ನಾಟಕೀಯ ಕುಸಿತ ಕಂಡು 160 ರನ್‌ಗಳಿಗೆ ಆಲೌಟ್ ಆಯಿತು. ನಂತರ ಭಾರತ ಬ್ಯಾಟಿಂಗ್ ನಡೆಸಿ 75 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತವಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಈ ಪಂದ್ಯ ಟೈ ಎಂದು ಘೋಷಿಸಲಾಗಿದೆ.

Story first published: Tuesday, November 22, 2022, 16:15 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X