ಬ್ರಾವೋ- ಪೊಲ್ಲಾರ್ಡ್ ಒಂದೇ ನಂಬರ್ ಜರ್ಸಿ ತೊಟ್ಟಿದ್ದೇಕೆ?

Posted By:
IPL 2018: Dwayne Bravo-Kieron Pollard spotted with 400 number jersy

ಮುಂಬೈ, ಏಪ್ರಿಲ್ 08: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11 ನೇ ಋತುವಿಗೆ ಭರ್ಜರಿಯಾದ ಆರಂಭವನ್ನು ವೆಸ್ಟ್ ಇಂಡೀಸ್ ನ ಡ್ವಾಯ್ನೆ ಬ್ರಾವೊ ಅವರು ಒದಗಿಸಿದರು ಎಂದರೆ ತಪ್ಪಾಗಲಾರದು.

ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರೋಚಕ ಜಯ ದಾಖಲಿಸಿದ್ದನ್ನು ಮರೆಯುವಂತಿಲ್ಲ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೂಲದ ಇಬ್ಬರು ಆಟಗಾರರು ಒಂದೇ ನಂಬರ್ ನ ಜರ್ಸಿ ತೊಟ್ಟಿದ್ದರು.

ಐಪಿಎಲ್ ವಿಶೇಷ ಪುಟ | ಮುಂಬೈ ವೇಳಾಪಟ್ಟಿ | ಚೆನ್ನೈ ವೇಳಾಪಟ್ಟಿ

ಮುಂಬೈ ಇಂಡಿಯನ್ಸ್ ತಂಡದ ಕಿರಾನ್ ಪೊಲ್ಲಾರ್ಡ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನ ಡ್ವಾಯ್ನೆ ಬ್ರಾವೋ ಅವರು 400 ಸಂಖ್ಯೆ ಇದ್ದ ಜರ್ಸಿಯನ್ನು ತೊಟ್ಟು ಪಂದ್ಯದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ಕೀರಾನ್ ಪೊಲಾರ್ಡ್ ಮತ್ತು ಡ್ವಾಯ್ನೆ ಬ್ರಾವೋ ಅವರು ತಮ್ಮ ವೈಯಕ್ತಿಕ ಮೈಲಿಗಲ್ಲುಗಳನ್ನು ಗುರುತಿಸಲು ಈ ರೀತಿ ಒಂದೇ ನಂಬರ್ ನ ಜರ್ಸಿಗಳನ್ನು ಧರಿಸಿದ್ದರು ಎಂಬುದು ಪಂದ್ಯದ ನಂತರ ತಿಳಿದು ಬಂದಿತು.

ಪಂದ್ಯದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಬ್ರಾವೋ ಈ ವಿಷಯದ ಬಗ್ಗೆ ವಿವರಣೆಯನ್ನು ನೀಡಿದರು. 400-ಜರ್ಸಿ ಧರಿಸಲು ನಮಗೆ ಒಂದು ಕಾರಣವಿದೆ.

ಕೀರಾನ್ ಪೊಲ್ಲಾರ್ಡ್ ಅವರಿಗೆ 40ನೇ ಟಿ20 ಪಂದ್ಯಾವಳಿ ಇದಾಗಿತ್ತು. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಹೀಗಾಗಿ ಅವರು 400 ಸಂಖ್ಯೆ ಇದ್ದ ಜರ್ಸಿ ತೊಟ್ಟಿದ್ದರು. ನಾನು 400 ವಿಕೆಟ್ ಗಳಿಸಿದ ಸಂಭ್ರಮಕ್ಕೆ ಅದೇ ಸಂಖ್ಯೆಯ ಜರ್ಸಿತೊಟ್ಟಿದ್ದೆ ಎಂದರು. ಸಾಮಾನ್ಯವಾಗಿ ಪೊಲಾರ್ಡ್ (47) ಮತ್ತು ಬ್ರಾವೋ (55) ಜರ್ಸಿ ಆಗಿರುತ್ತವೆ.

ಶನಿವಾರದಂದು ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಗೆಲ್ಲಲು ಬ್ರಾವೋ ಅವರು ಕಾರಣರಾದರು. 7 ಸಿಕ್ಸರ್, 3 ಬೌಂಡರಿ ಇದ್ದ 68 ರನ್( 30 ಎಸೆತ) ಚೆಚ್ಚಿ ಕಿಚ್ಚು ಹಚ್ಚಿದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 19:25 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ