ಮುಂಬೈ ವಿರುದ್ಧ ಹೈದರಾಬಾದಿಗೆ ಪ್ರಯಾಸದ ಗೆಲುವು


ಹೈದರಾಬಾದ್, ಏಪ್ರಿಲ್ 12 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಏಳನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು ಪ್ರಯಾಸದ ಗೆಲುವು ದಾಖಲಿಸಿದೆ. ಶಿಖರ್ ಧವನ್ 45ರನ್ ಹಾಗೂ ದೀಪಕ್ ಹೂಡಾ 32ರನ್ ಗಳಿಸಿ ಹೈದರಾಬಾದ್ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.
ಸ್ಕೋರ್ ಕಾರ್ಡ್-ಕಾಮೆಂಟ್ರಿ-ಗ್ರಾಫಿಕ್ಸ್ ವಿಶ್ಲೇಷಣೆ
ಆದರೆ, ಪಂದ್ಯವು ಕೊನೆ ಓವರ್ ನ ಕೊನೆ ಎಸೆತದ ತನಕ ಕುತೂಹಲ ಕಾಯ್ದುಕೊಂಡು ಪ್ರೇಕ್ಷಕರನ್ನು ರಂಜಿಸಿತು. ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 148ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 151/9 ಸ್ಕೋರ್ ಮಾಡಿ ಗೆಲುವು ಸಾಧಿಸಿತು.
ಐಪಿಎಲ್ ವಿಶೇಷ ಪುಟ | ಹೈದರಾಬಾದ್ ವೇಳಾಪಟ್ಟಿ | ಮುಂಬೈ ವೇಳಾಪಟ್ಟಿ
ಕೊನೆ ಓವರ್ ನಲ್ಲಿ 11 ರನ್ ಬೇಕಿತ್ತು. ದೀಪಕ್ ಹೂಡಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಎರಡನೇ ಎಸೆತ ವೈಡ್ ಬಾಲ್ ಆಯಿತು. ಒಂದು ಡಾಟ್ ಬಾಲ್, ಎರಡು ಸಿಂಗಲ್ ಸಿಕ್ಕಿತು. ಕೊನೆ ಎಸೆತದಲ್ಲಿ 1 ರನ್ ಬೇಕಿತ್ತು. ಸ್ಟಾನ್ಲೇಕ್ ಸುಲಭವಾಗಿ ಒಂದು ರನ್ ಗಳಿಸಿ ತಂಡಕ್ಕೆ ಜಯ ತಂದಿತ್ತರು.
ಚೇಸಿಂಗ್ : 148ರನ್ ಗಳ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ವೃದ್ಧಿಮನ್ ಸಹಾ 22ರನ್ (20 ಎಸೆತ) ಹಾಗೂ ಶಿಖರ್ ಧವನ್ 45ರನ್ (28 ಎಸೆತ, 8ಬೌಂಡರಿ) ಗಳಿಸಿ ಉತ್ತಮ ಆರಂಭ ಒದಗಿಸಿದರು.
ಆದರೆ, ನಿರಂತರವಾಗಿ ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡವು ಹಲವು ಆತಂಕದ ಕ್ಷಣಗಳನ್ನು ಎದುರಿಸಿತು. 136/6 ಸ್ಕೋರ್ ಆಗಿದ್ದಾಗ ಸತತವಾಗಿ ಯೂಸುಫ್ ಪಠಾಣ್, ರಶೀದ್ ಖಾನ್, 137 ಸ್ಕೋರ್ ಆಗಿದ್ದಾಗ ಸಿದ್ದಾರ್ಥ್ ಕೌಲ್ ಹಾಗೂ ಸಂದೀಪ್ ಶರ್ಮ ವಿಕೆಟ್ ಕಳೆದುಕೊಂಡಿತು.
ಆದರೆ, ದೀಪಕ್ ಹೂಡಾ 25 ಎಸೆತಗಳಲ್ಲಿ 32ರನ್ ಗಳಿಸಿ ತಂಡವನ್ನು ಜಯದ ಗಡಿ ದಾಟಿಸಿದರು. ಮುಂಬೈ ಪರ ಬೂಮ್ರಾ 2, ಮುಸ್ತಫಿಜುರ್ 3 ಹಾಗೂ ಮಾರ್ಕಂಡೆ 4ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications