ಐಪಿಎಲ್ : ತ್ವರಿತಗತಿಯಲ್ಲಿ ಅರ್ಧಶತಕ ದಾಖಲೆ ಬರೆದ ರಾಹುಲ್

Posted By:
IPL 2018 : KL Rahul records fastest 50 in IPL

ಮೊಹಾಲಿ, ಏಪ್ರಿಲ್ 08: ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕನ್ನಡಿಗ ಕೆಎಲ್ ರಾಹುಲ್ ಅವರು ಹೊಸ ದಾಖಲೆ ಬರೆದಿದ್ದಾರೆ. ಯೂಸುಫ್ ಪಠಾಣ್ ಹೆಸರಿನಲ್ಲಿದ್ದ ತ್ವರಿತಗತಿ ಅರ್ಧ ಶತಕ ದಾಖಲೆಯನ್ನು ರಾಹುಲ್ ಧೂಳಿಪಟ ಮಾಡಿದ್ದಾರೆ.

ಐಪಿಎಲ್ ವಿಶೇಷ ಪುಟ | ಪಂಜಾಬ್ ವೇಳಾಪಟ್ಟಿ | ಡೆಲ್ಲಿ ವೇಳಾಪಟ್ಟಿ

ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಅವರು 16 ಎಸೆತಗಳಲ್ಲಿ 51ರನ್ (6 ಬೌಂಡರಿ, 4 ಸಿಕ್ಸರ್) ಚೆಚ್ಚಿದರು. 318.75 ಸ್ಟ್ರೈಕ್ ರೇಟ್ ನಂತೆ ಸ್ಕೋರ್ ಮಾಡಿದ ರಾಹುಲ್ ಅವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಮೊಹಮ್ಮದ್ ಶಮಿಗೆ ಕ್ಯಾಚಿತ್ತು ಔಟಾದರು. ಪಂದ್ಯದ ಸ್ಕೋರ್ ಕಾರ್ಡ್

ಯೂಸುಫ್ ಪಠಾಣ್ ಹಾಗೂ ಸುನಿಲ್ ನಾರಾಯಣ್ ತಲಾ 15 ಎಸೆತಗಳಲ್ಲಿ 50ರನ್ ಗಡಿ ದಾಟಿ, ದಾಖಲೆ ಬರೆದಿದ್ದರು. ಆದರೆ, ತ್ವರಿತಗತಿ ಟಿ20 ಅರ್ಧಶತಕ ದಾಖಲೆ ಜಂಟಿಯಾಗಿ ಕ್ರಿಸ್ ಗೇಲ್ ಹಾಗೂ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಇವರಿಬ್ಬರು 12 ಎಸೆತಗಳಲ್ಲಿ 50ರನ್ ಗಡಿ ದಾಟಿದ್ದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 18:45 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ