ಐಪಿಎಲ್ 2018 : ಬೆಂಗಳೂರು ವಿರುದ್ಧ ಕೋಲ್ಕತಾಗೆ ಗೆಲುವು

Posted By:
IPL 2018 : ಪಂಜಾಬ್ ಪರ ಬ್ಯಾಟ್ ಬೀಸಿದ ಕನ್ನಡದ ಹುಡುಗರು | Oneindia kannada
IPL 2018 : Match 03 Report Kolkata Knight Riders vs Royal Challengers Bangalore

ಕೋಲ್ಕತಾ, ಏಪ್ರಿಲ್ 08: ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11ನೇ ಆವೃತ್ತಿಯ ಮೂರನೇ ಪಂದ್ಯ ನಡೆದಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಸಮಬಲದ ಹೋರಾಟ ಕಂಡು ಬಂದರೂ ಕೆಕೆ ಆರ್ 4 ವಿಕೆಟ್ ಗಳ ಅಂತರದ ಜಯ ದಾಖಲಿಸಿದೆ. ಪಂದ್ಯದ ವರದಿ ಇಲ್ಲಿದೆ...

ಸ್ಕೋರ್ ಕಾರ್ಡ್ ಹಾಗೂ ಕಾಮೆಂಟ್ರಿ


ಕೋಲ್ಕತಾ ಚೇಸಿಂಗ್:
* ಸುನೀಲ್ ಸ್ಫೋಟಕ ಬ್ಯಾಟಿಂಗ್ 19 ಎಸೆತಗಳಲ್ಲಿ 50ರನ್ (4 ಬೌಂಡರಿ, 5ಸಿಕ್ಸರ್)
* ನಿತೀಶ್ ರಾಣಾ 25 ಎಸೆತಗಳಲ್ಲಿ 34ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ 35ರನ್ ಗಳಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದರು.
* 18.5 ಓವರ್ ಗಳಲ್ಲಿ 177/6 ಸ್ಕೋರ್ ಮಾಡಿದ ಕೆಕೆಆರ್ ಗೆ ಮೊದಲ ಜಯ.
* ಆರ್ ಸಿಬಿ ಪರ ಕ್ರಿಸ್ ವೋಕ್ಸ್ 36ಕ್ಕೆ 3, ಉಮೇಶ್ ಯಾದವ್ 27ಕ್ಕೆ 2 ಗಳಿಸಿದರು.

Sunil Narine

ಆರ್ ಸಿಬಿ ಇನ್ನಿಂಗ್ಸ್ :

* ಕ್ವಿಂಟಾನ್ ಡಿ ಕಾಕ್ 4 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದರು.
* ಬ್ರೆಂಡನ್ ಮೆಕಲಮ್ 27 ಎಸೆತಗಳಲ್ಲಿ 43 ರನ್ (6ಬೌಂಡರಿ, 2 ಸಿಕ್ಸರ್) ಬಾರಿಸಿ ಉತ್ತಮ ಆರಂಭ ನೀಡಿದರು.
* ನಾಯಕ ವಿರಾಟ್ ಕೊಹ್ಲಿ 31ರನ್ ಹಾಗೂ ಎಬಿ ಡಿ ವಿಲಿಯರ್ಸ್ 44ರನ್ (23 ಎಸೆತ, 1 ಬೌಂಡರಿ, 5 ಸಿಕ್ಸರ್) ಉತ್ತಮ ಜೊತೆಯಾಟ ಪ್ರದರ್ಶಿಸಿದರು.
* ಮನ್ದೀಪ್ ಸಿಂಗ್ 18 ಎಸೆತಗಳಲ್ಲಿ 37ರನ್ (4 ಬೌಂಡರಿ, 2ಸಿಕ್ಸರ್) ರನ್ ಗತಿ ಹೆಚ್ಚಿಸಿದರು.
* ನಿತೀಶ್ ರಾಣಾ ಸತತ ಎರಡು ಎಸೆತಗಳಲ್ಲಿ ಎಬಿಡಿ ಹಾಗೂ ಕೊಹ್ಲಿ ವಿಕೆಟ್ ಕಿತ್ತಿದ್ದು ಸ್ವಲ್ಪ ಹಿನ್ನಡೆಯಾಯಿತು.
* ವಿನಯ್ 30ಕ್ಕೆ2, ಪಿಯೂಷ್ ಚಾವ್ಲಾ, ಸುನಿಲ್ ನರೇನ್, ಮಿಚೆಲ್ ಜಾನ್ಸನ್ ತಲಾ 1 ವಿಕೆಟ್ ಗಳಿಸಿದರು.
* ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 176/7 ಸ್ಕೋರ್ ಮಾಡಿದೆ.

IPL 2018 : Match 03 Report Kolkata Knight Riders vs Royal Challengers Bangalore

ಟಾಸ್ ವರದಿ : ಟಾಸ್ ಗೆದ್ದ ಕೋಲ್ಕತಾ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಗೆದ್ದಿದ್ದರೆ ತಾನು ಕೂಡಾ ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಆರ್ ಸಿಬಿ ನಾಯಕ ಕೊಹ್ಲಿ ಹೇಳಿದರು.

ಐಪಿಎಲ್ ವಿಶೇಷ ಪುಟ | ಆರ್ ಸಿಬಿ ವೇಳಾಪಟ್ಟಿ | ಕೆಕೆಆರ್ ವೇಳಾಪಟ್ಟಿ

ಆಡುವ ಹನ್ನೊಂದು :
ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಕೋಲ್ಕತಾ ನೈಟ್ ರೈಡರ್ಸ್:

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 21:16 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ