ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ, ಮುಂಬೈಗೆ ಮೊದಲ ಜಯ

Posted By:
IPL 2018, MI vs RCB: Rohit Sharmas 94 and a combined bowling effort gives Mumbai first win

ಮುಂಬೈ, ಏಪ್ರಿಲ್ 18: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 46ರನ್ ಗಳಿಂದ ಸೋಲು ಕಂಡಿದೆ. ಈ ಮೂಲಕ ಸತತ ಸೋಲು ಕಂಡಿದ್ದ ಮುಂಬೈಗೆ ಈ ಸೀಸನ್ ನ ಮೊದಲ ಗೆಲುವಿನ ಉಡುಗೊರೆ ಸಿಕ್ಕಿದೆ.

ಪಂದ್ಯದ ಸ್ಕೋರ್ ಕಾರ್ಡ್

ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ಕ್ವಿಂಟಾನ್ ಡಿಕಾಕ್ ಹಾಗೂ ಕೊಹ್ಲಿ ಉತ್ತಮ ಆರಂಭ ನೀಡಿದರು. ತಂಡದ ಮೊತ್ತ 40ರನ್ ಆಗಿದ್ದಾಗ, ಭಾರಿ ಹೊಡೆತಕ್ಕೆ ಯತ್ನಿಸಿದ ಡಿಕಾಕ್ ಮೆಕ್ಲೆನಘನ್ ಎಸೆತದಲ್ಲಿ ಬೋಲ್ಡ್ ಆದರು. ನಂತರ ಬಂದ ಎಬಿ ಡಿ ವಿಲಿಯರ್ಸ್ 1 ರನ್ ಗಳಿಸಿ ಬೌಂಡರಿ ಬಳಿ ಕ್ಯಾಚಿತ್ತು ನಿರ್ಗಮಿಸಿದರು.

ಐಪಿಎಲ್ ವಿಶೇಷ ಪುಟ | ಬೆಂಗಳೂರು ತಂಡ | ಬೆಂಗಳೂರು ವೇಳಾಪಟ್ಟಿ

ಮನ್ದೀಪ್ ಸಿಂಗ್ 16, ಕೊನೆಯಲ್ಲಿ ಕ್ರಿಸ್ ವೋಕ್ಸ್11 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಇನ್ನೊಂದೆಡೆ ಏಕಾಂಗಿಯಾಗಿ 214ರನ್ ಗಳ ಮೊತ್ತ ಬೆನ್ನು ಹತ್ತಿದ ಕೊಹ್ಲಿ 62 ಎಸೆತಗಳಲ್ಲಿ 92ರನ್ (7 ಬೌಂಡರಿ, 4ಸಿಕ್ಸರ್) ಗಳಿ ಅಜೇಯರಾಗಿ ಉಳಿದರು. ಪಂದ್ಯ ಗೆಲ್ಲಿಸಲಾಗಲಿಲ್ಲ. ಆದರೆ, ತಲೆಗೆ ಕಿತ್ತಳೆ ಟೋಪಿ ಸಿಕ್ಕಿತು. ಆರ್ ಸಿಬಿ 20 ಓವರ್ ಗಳಲ್ಲಿ 167/8 ಮಾತ್ರ ಗಳಿಸಿತು.

ಐಪಿಎಲ್ 2018 ಅಂಕಪಟ್ಟಿ | ಫ್ಯಾಂಟಸಿ ಲೀಗ್ ಆಡಿ

ಮುಂಬೈ ಪರ ಕೃನಾಲ್ ಪಾಂಡ್ಯ 28ಕ್ಕೆ3, ಬೂಮ್ರಾ, ಮೆಕ್ಲೆನಘನ್ ತಲಾ 2 ಹಾಗೂ ಮಾರ್ಕಂಡೆ 1 ವಿಕೆಟ್ ಗಳಿಸಿದರು.

ಮುಂಬೈ ಇನ್ನಿಂಗ್ಸ್ : ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡರೂ ಧೃತಿಗೆಡದ ಮುಂಬೈ ತಂಡ ಬೃಹತ್ ಮೊತ್ತ ಕಲೆ ಹಾಕಲು ಆರ್ ಸಿಬಿ ಕಳಪೆ ಬೌಲಿಂಗ್ ನೆರವಾಯಿತು.

ಎವಿನ್ ಲೆವಿಸ್ 42 ಎಸೆತಗಳಲ್ಲಿ 62 ರನ್, ನಾಯಕ ರೋಹಿತ್ ಶರ್ಮ 94ರನ್ (52 ಎಸೆತ, 10 ಬೌಂಡರಿ, 5ಸಿಕ್ಸರ್) ಚೆಚ್ಚಿದರು. ಆರ್ ಸಿಬಿ ಪರ ಯಾವ ಬೌಲರ್ ಕೂಡಾ ರನ್ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಉಮೇಶ್ ಯಾದವ್ 2, ಆಂಡರ್ಸನ್ 2, ವೋಕ್ಸ್ 1 ವಿಕೆಟ್ ಕಿತ್ತರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 18, 2018, 1:11 [IST]
Other articles published on Apr 18, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ