ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವೀಟ್ಸ್ : ಆರ್ ಸಿಬಿ ಮಕಾಡೆ ಮಲಗಿದೆ, ಕಾಲೆಳೆಯೋಕೆ ಆಗಲ್ಲ

By Mahesh
IPL 2018 : RCB vs CSK- Twitteratis reactions Dont tease Kohli

ಬೆಂಗಳೂರು, ಮೇ 06: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎಲ್ ಕ್ಲಾಸಿಕೋ ಎಂದು ಕರೆಸಿಕೊಳ್ಳುವ ಆರ್ ಸಿಬಿ ಹಾಗೂ ಸಿ ಎಸ್ ಕೆ ನಡುವಿನ ಪಂದ್ಯದಲ್ಲಿ ಮತ್ತೊಮ್ಮೆ ಚೆನ್ನೈ ಮೇಲುಗೈ ಸಾಧಿಸಿದೆ. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಏನೆಲ್ಲ ತಂತ್ರ, ಪ್ರತಿತಂತ್ರ ಮಾಡಿದರೂ ಪಂದ್ಯ ಗೆಲ್ಲಲಾಗುತ್ತಿಲ್ಲ.

ಐಪಿಎಲ್ 2018ರ ವಿಶೇಷ ಪುಟ | ಅಂಕಪಟ್ಟಿ | ಆರ್ ಸಿಬಿ ವೇಳಾಪಟ್ಟಿ

ವಾಂಖೆಡೆ ಅಂಗಳದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಕೊಹ್ಲಿ, ಪುಣೆಯಲ್ಲಿ ಮಿಂಚಲಿಲ್ಲ. ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯ, ಕೈಚೆಲ್ಲಿದ ಕ್ಯಾಚುಗಳು ಮ್ಯಾಚು ಕೈತಪ್ಪುವಂತೆ ಮಾಡಿತು.

ಮತ್ತೆ ಆರ್‌ಸಿಬಿ ಆಟಗಾರರ ಕಾಲೆಳೆದರು ಟ್ವಿಟ್ಟಿಗರುಮತ್ತೆ ಆರ್‌ಸಿಬಿ ಆಟಗಾರರ ಕಾಲೆಳೆದರು ಟ್ವಿಟ್ಟಿಗರು

ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಫ್ಯಾನ್ಸ್ ಗಳು ಹತಾಶೆಯಿಂದ ಮುಂದಿನ ಸಲ ಅಥವಾ ನೆಕ್ಸ್ಟ್ ಸಲ ಕಪ್ ನಮ್ದೇ ಎನ್ನುವಂತಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಆರ್ ಸಿಬಿ, ಸಿಎಸ್ ಕೆ, ಕೆಕೆಆರ್, ಪಂಜಾಬ್, ಮುಂಬೈ ತಂಡಗಳ ಫ್ಯಾನ್ಸ್ ಗಳು ಈ ಬಾರಿ ಹೆಚ್ಚು ಸಕ್ರಿಯವಾಗಿವೆ.

ಆರ್ ಸಿಬಿ ಸೋಲಲಿ, ಗೆಲ್ಲಲಿ ಅಭಿಮಾನಿಗಳು ತಂಡವನ್ನು ಕೈ ಬಿಟ್ಟಿಲ್ಲ, ಸೋತ ತಂಡದ ನಾಯಕ ಕೊಹ್ಲಿಯನ್ನು ಹೀಯಾಳಿಸುವವರ ವಿರುದ್ಧ ದನಿಯೆತ್ತಿದ್ದಾರೆ.

ಐಪಿಎಲ್ ಫ್ಯಾನ್ಸ್ ಗಳಲ್ಲಿ ವಿನಂತಿ

ಐಪಿಎಲ್ ಫ್ಯಾನ್ಸ್ ಗಳಲ್ಲಿ ವಿನಂತಿ, ವಿರಾಟ್ ಕೊಹ್ಲಿ ಒಬ್ಬ ಲೆಜೆಂಡ್, ಆರ್ ಸಿಬಿ ಸೋಲಿಗೆ ಕೊಹ್ಲಿ ಮಾತ್ರ ಹೊಣೆಯಲ್ಲ. ಫುಟ್ಬಾಲ್ ಜಗತ್ತಿನ ರೊನಾಲ್ಡೊ ಹಾಗೂ ಮೆಸ್ಸಿ ಕೂಡಾ ಇನ್ನೂ ವಿಶ್ವಕಪ್ ಗೆದ್ದಿಲ್ಲ. ತಾಳ್ಮೆ ಇರಲಿ, ಕೊಹ್ಲಿ ಟೀಂ ಇಂಡಿಯಾದ ನಾಯಕ ಎಂಬುದನ್ನು ಮರೆಯದಿರಿ.

ಕೊಹ್ಲಿ ವಿಕೆಟ್ ಕಿತ್ತ ಜಡೇಜ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ವಿಕೆಟ್ ಕಿತ್ತ ಬಳಿಕ ಚೆನ್ನೈ ತಂಡದ ಸ್ಪಿನ್ನರ್ ರವೀಂದ್ರ ಜಡೇಜ ಅವರು ನೀಡಿದ ಪ್ರತಿಕ್ರಿಯೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಜಡೇಜ ಅವರು ಯಾಕೆ ವಿಕೆಟ್ ಕಿತ್ತ ಬಳಿಕ ಸಂಭ್ರಮಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ. ಈಗ ಭಾರತ ತಂಡದ ನಾಯಕ ಧೋನಿಯಲ್ಲ, ಕೊಹ್ಲಿ ಎಂದು ಜಡೇಜಗೆ ಅರಿವಾಗಿದೆ.

ಮೈದಾನದಲ್ಲಿ ಮೋದಿ ಮೋದಿ ಮೋದಿ

ಪಂದ್ಯದ ವೇಳೆ ಮೋದಿ, ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಆರ್ ಸಿಬಿ ಸೋಲಿಗೆ ಸಿದ್ದರಾಮಯ್ಯ ಸರ್ಕಾರವೆ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಆರ್ ಸಿಬಿಗೆ ಗೆಲುವು ಗ್ಯಾರಂಟಿ.

ಬಾಹುಬಲಿಯನ್ನು ಕಟ್ಟಪ್ಪ ಕೊಂದ ಹಾಗೆ

ಬಾಹುಬಲಿಯನ್ನು ಕಟ್ಟಪ್ಪ ಕೊಂದ ಹಾಗೆ, ಪ್ರತಿ ವರ್ಷ ಆರ್ ಸಿಬಿ ಫ್ಯಾನ್ಸ್ ಗಳನ್ನು ಆರ್ ಸಿಬಿ ಕೊಲ್ಲುತ್ತಿದೆ. ಚಿತ್ರವೇ ಎಲ್ಲವನ್ನು ಹೇಳುತ್ತಿದೆ

ಈ ಬಾರಿ ಆರ್ ಸಿಬಿ ಗೆಲ್ಲಬಹುದೇ?

ಈ ಬಾರಿ ಆರ್ ಸಿಬಿ ಗೆಲ್ಲಬಹುದೇ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ.

Story first published: Sunday, May 6, 2018, 14:36 [IST]
Other articles published on May 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X