ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018ರಲ್ಲಿ ಮೊದಲ ಶತಕ ಸಿಡಿಸಿ, ದಾಖಲೆ ಬರೆದ ಗೇಲ್

By Mahesh
IPL 2018 : Chris Gayle smashes first Hundred

ಮೊಹಾಲಿ, ಏಪ್ರಿಲ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ಮೊದಲ ಶತಕ 16ನೇ ಪಂದ್ಯದಲ್ಲಿ ದಾಖಲಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಆರಂಭಿಕ ಆಟಗಾರ, ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಈ ಸಾಧನೆ ಮಾಡಿದ್ದಾರೆ.

ಸ್ಕೋರ್ ಕಾರ್ಡ್

38ವರ್ಷ ವಯಸ್ಸಿನ ಕ್ರಿಸ್ ಗೇಲ್ ಅವರು 58 ಎಸೆತಗಳಲ್ಲಿ 100ರನ್ ಗಡಿ ದಾಟಿದರು. 63 ಎಸೆತಗಳಲ್ಲಿ 104ರನ್ ಗಳಿಸಿ ಅಜೇಯರಾಗಿ ಉಳಿದ್ದಲ್ಲದೆ, ತಂಡದ ಮೊತ್ತವನ್ನು 193/3 ಕ್ಕೇರಿಸಲು ನೆರವಾದರು. ಗೇಲ್ ಅವರು 11 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.

193ರನ್ ಗುರಿ ಬೆನ್ನು ಹತ್ತಿದ ಹೈದರಾಬಾದ್ ತಂಡ 178/4ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು. ಹೈದರಾಬಾದ್ ಪರ ಮನೀಶ್ ಪಾಂಡೆ ಅಜೇಯ 57, ಕೇನ್ ವಿಲಿಯಮ್ಸನ್ 54ರನ್ ಗಳಿಸಿದರು.

ಐಪಿಎಲ್ 11: ಈ 11 ದಾಖಲೆ ಮುರಿಯಲು ಸಾಧ್ಯವೇ?ಐಪಿಎಲ್ 11: ಈ 11 ದಾಖಲೆ ಮುರಿಯಲು ಸಾಧ್ಯವೇ?

ಗೇಲ್ ಐಪಿಎಲ್ ದಾಖಲೆ

ಕ್ರಿಸ್ ಗೇಲ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಶತಕ ಸೇರಿದಂತೆ ಗೇಲ್ ಒಟ್ಟು 6 ಶತಕ ಗಳಿಸಿದ್ದಾರೆ. ಒಟ್ಟಾರೆ, 21 ಟಿ20 ಶತಕ ಗಳಿಸಿದ್ದು, ಈ ಸಾಧನೆ ಮಾಡಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ ತ್ವರಿತಗತಿ ಶತಕ(30 ಎಸೆತ), ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ (17) ದಾಖಲೆ ಕೂಡಾ ಗೇಲ್ ಹೆಸರಿನಲ್ಲಿದೆ.

Story first published: Friday, April 20, 2018, 1:24 [IST]
Other articles published on Apr 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X