ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ಗೆದ್ದ ನಂತರವೂ ಮುಂಬೈಗಿದೆ ಪ್ಲೇಆಫ್ ಅವಕಾಶ; ಪಂದ್ಯದ ಟಾಸ್ ಇಡೀ ಲೆಕ್ಕಾಚಾರವನ್ನೇ ಉಲ್ಟಾ ಮಾಡಲಿದೆ!

IPL 2021: Mumbai Indians still have playoff chances after KKRs big win against RR

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಇಂದಿಗೆ ( ಅಕ್ಟೋಬರ್ 8 ) ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿವೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಏಕಕಾಲಕ್ಕೆ ಪಂದ್ಯಗಳು ನಡೆಯಲಿದ್ದು ಲೀಗ್ ಹಂತ ಮುಕ್ತಾಯಗೊಂಡು ಯಾವ ಯಾವ ತಂಡಗಳು ಪ್ಲೇ ಆಫ್ ಹಂತವನ್ನು ಅಂತಿಮವಾಗಿ ಪ್ರವೇಶಿಸಲಿವೆ ಎಂಬ ಚಿತ್ರಣ ಸಿಗಲಿದೆ.

ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!

ಸದ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವನ್ನು ಸೋತರೂ ಸಹ ಅಗ್ರಸ್ಥಾನದಲ್ಲಿಯೇ ಉಳಿಯಲಿದೆ, ಇನ್ನು ಈಗಾಗಲೇ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ದ್ವಿತೀಯ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೃತೀಯ ಸ್ಥಾನದಲ್ಲಿದೆ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಕ್ಟೋಬರ್ 7ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಒಳ್ಳೆಯ ನೆಟ್ ರನ್ ರೇಟ್ ಪಡೆದುಕೊಂಡು ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು ಪ್ಲೇ ಆಫ್ ಹಂತಕ್ಕೆ ಬಹುತೇಕ ಪ್ರವೇಶ ಪಡೆದುಕೊಂಡಿದೆ ಎನ್ನಬಹುದು.

ಅಂತಿಮ ಓವರ್‌ನಲ್ಲಿ ಎಬಿಡಿ ರನ್ ಗಳಿಸಲು ಪರದಾಡುವ ರೀತಿ ತಾನು ಮಾಡಿದ ಪ್ಲಾನ್ ಬಹಿರಂಗಪಡಿಸಿದ ಭುವಿಅಂತಿಮ ಓವರ್‌ನಲ್ಲಿ ಎಬಿಡಿ ರನ್ ಗಳಿಸಲು ಪರದಾಡುವ ರೀತಿ ತಾನು ಮಾಡಿದ ಪ್ಲಾನ್ ಬಹಿರಂಗಪಡಿಸಿದ ಭುವಿ

ಇನ್ನು ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ದೊಡ್ಡ ಮಟ್ಟದ ಪೈಪೋಟಿ ಇತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿರುವ ಹಿನ್ನಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಕನಸು ಬಹುತೇಕ ಅಳಿಸಿಹೋಗಿದೆ. ಹೌದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 86 ರನ್‌ಗಳ ಅಂತರದಿಂದ ಗೆಲುವು ಸಾಧಿಸಿರುವುದರಿಂದ 14 ಅಂಕಗಳೊಂದಿಗೆ +0.587 ನೆಟ್ ರನ್ ರೇಟ್ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. ಇನ್ನು 12 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ -0.048 ನೆಟ್ ರನ್ ರೇಟ್ ಹೊಂದಿದ್ದು ಇಂದು ( ಅಕ್ಟೋಬರ್ 8 ) ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಿ ಬಹು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಂಡರೆ ಮಾತ್ರ ಪ್ಲೇ ಆಫ್ ಹಂತವನ್ನು ಪ್ರವೇಶಿಸಬಹುದಾಗಿದೆ.

ಹಾಗಾದರೆ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಬೇಕೆಂದರೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಯಾವ ರೀತಿಯ ಗೆಲುವನ್ನು ಸಾಧಿಸಬೇಕು ಎಂಬುದರ ಮಾಹಿತಿ ಮುಂದೆ ಓದಿ..

ಭಾರೀ ರನ್ ಅಂತರದಿಂದ ಗೆಲ್ಲಲೇಬೇಕಿದೆ ಮುಂಬೈ ಇಂಡಿಯನ್ಸ್!

ಭಾರೀ ರನ್ ಅಂತರದಿಂದ ಗೆಲ್ಲಲೇಬೇಕಿದೆ ಮುಂಬೈ ಇಂಡಿಯನ್ಸ್!

ಇಂದು ( ಅಕ್ಟೋಬರ್ 8 ) ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 171 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬರಲಿದೆ ಮತ್ತು ಪ್ಲೇ ಆಫ್ ಹಂತವನ್ನು ಯಶಸ್ವಿಯಾಗಿ ತಲುಪಲಿದೆ. ಹೀಗೆ 171 ರನ್‌ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ ಮಾತ್ರ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಡಲಿದೆ, ಇದಕ್ಕಿಂತ ಕಡಿಮೆ ರನ್‌ಗಳ ಅಂತರದಿಂದ ಗೆದ್ದರೂ ಕೂಡ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಸುತ್ತನ್ನು ಪ್ರವೇಶಿಸುವಲ್ಲಿ ವಿಫಲವಾಗಲಿದೆ.

ಪಂದ್ಯದ ಟಾಸ್ ಇಡೀ ಲೆಕ್ಕಾಚಾರವನ್ನೇ ಉಲ್ಟಾ ಮಾಡಲಿದೆ!

ಪಂದ್ಯದ ಟಾಸ್ ಇಡೀ ಲೆಕ್ಕಾಚಾರವನ್ನೇ ಉಲ್ಟಾ ಮಾಡಲಿದೆ!

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎಷ್ಟು ರನ್‌ಗಳ ಅಂತರದಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಆದರೆ ಈ ಪಂದ್ಯದ ಟಾಸ್ ಈ ಲೆಕ್ಕಾಚಾರಗಳೆಲ್ಲ ಉಲ್ಟಾ ಮಾಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಂದ್ಯ ಆರಂಭವಾಗುವ ಮುನ್ನವೇ ಪ್ಲೇ ಆಫ್ ಹಾದಿಯನ್ನು ಮುಚ್ಚಿಬಿಡಲಿದೆ. ಹೌದು, ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡು ದೊಡ್ಡ ಮೊತ್ತ ಕಲೆಹಾಕಿ 171 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ಪ್ಲೇ ಆಫ್ ಹಂತವನ್ನು ಪ್ರವೇಶಿಸಬಹುದು ಎಂಬುದು ಲೆಕ್ಕಾಚಾರದ ಪ್ರಕಾರ ಇರುವ ಸಾಧ್ಯತೆಗಳು. ಆದರೆ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ಆ ಕ್ಷಣವೇ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಹೌದು, ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಯಾವುದೇ ಮಾರ್ಗಗಳು ಉಳಿದಿರುವುದಿಲ್ಲ. ಹಾಗೂ ಇದೇ ಸಮಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಧಿಕೃತವಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಲಿದೆ.

T 20 ಕ್ರಿಕೆಟ್ ನಲ್ಲಿ ಧೋನಿಗೆ ಸ್ಥಾನ: ವಿರಾಟ್ ಮತ್ತು ರೋಹಿತ್ ಫೇಲ್ಯೂರ್ | Oneindia Kannada
ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 220 ರನ್ ಬಾರಿಸಲೇಬೇಕು!

ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 220 ರನ್ ಬಾರಿಸಲೇಬೇಕು!

ಒಂದುವೇಳೆ ಮುಂಬೈ ಇಂಡಿಯನ್ಸ್ ತಂಡವು ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಡ್ಡಾಯವಾಗಿ ಕನಿಷ್ಠವೆಂದರೂ 220 ರನ್‌ಗಳನ್ನು ಮುಂಬೈ ಇಂಡಿಯನ್ಸ್ ತಂಡ ಕಲೆ ಹಾಕಲೇಬೇಕಾಗಿದೆ. ಅಷ್ಟು ಮಾತ್ರವಲ್ಲದೇ 220 ರನ್ ಗಳಿಸಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 49 ರನ್‌ಗಳಿಗೆ ಆಲ್ ಔಟ್ ಮಾಡಿ 171 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡ ಜಯ ಗಳಿಸಿದರೆ ಮಾತ್ರ ಪ್ಲೇ ಆಫ್ ಪ್ರವೇಶ ಸಾಧ್ಯ. ಈ ಸಾಧ್ಯತೆಗಳಲ್ಲಿ ಯಾವುದೇ ಒಂದು ಅಂಶ ತಪ್ಪಿದರೂ ಸಹ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಸುತ್ತಿನ ರೇಸ್‌ನಿಂದ ಹೊರಬೀಳಲಿದೆ.

Story first published: Friday, October 8, 2021, 9:27 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X