ರಾಜಸ್ಥಾನ್ ವಿರುದ್ಧ ಇಶಾನ್ ಕಿಶನ್ ಭರ್ಜರಿ ಆಟಕ್ಕೆ ಕಾರಣ ರೋಹಿತ್ ಅಲ್ಲ, ಆ ಮೂವರು ಸ್ಟಾರ್ ಕ್ರಿಕೆಟಿಗರು!

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ಯ ಯುಎಇಯಲ್ಲಿ ನಡೆಯುತ್ತಿದೆ, ಲೀಗ್ ಹಂತದ ಪಂದ್ಯಗಳು ಬಹುತೇಕ ಮುಗಿಯುವ ಹಂತಕ್ಕೆ ತಲುಪಿದ್ದು, ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ,ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಧಿಕೃತವಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿವೆ. ಹಾಗೂ ಪ್ಲೇ ಆಫ್ ಸುತ್ತಿಗೆ ಆರ್ಹತೆಯನ್ನು ಪಡೆಯಬಹುದಾದ ನಾಲ್ಕನೇ ತಂಡದ ಸ್ಥಾನಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು.

ರೈನಾ ಸಿಎಸ್‌ಕೆ ಬಿಟ್ಟು ಬೇರೆ ಯಾವುದೇ ತಂಡದಲ್ಲಿದ್ದರೂ ಅವಕಾಶ ಸಿಗುತ್ತಿರಲಿಲ್ಲ ಎಂದ ಮಾಜಿ ಕ್ರಿಕೆಟಿಗರೈನಾ ಸಿಎಸ್‌ಕೆ ಬಿಟ್ಟು ಬೇರೆ ಯಾವುದೇ ತಂಡದಲ್ಲಿದ್ದರೂ ಅವಕಾಶ ಸಿಗುತ್ತಿರಲಿಲ್ಲ ಎಂದ ಮಾಜಿ ಕ್ರಿಕೆಟಿಗ

ಆದರೆ ಅಕ್ಟೋಬರ್ 5ರ ಮಂಗಳವಾರದಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಟೂರ್ನಿಯಲ್ಲಿ ನಿರೀಕ್ಷಿಸಿದಂತಹ ಫಲಿತಾಂಶವನ್ನು ಪಡೆದುಕೊಳ್ಳದೆ ಹಲವಾರು ಪಂದ್ಯಗಳಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ಇಶಾನ್ ಕಿಶನ್ ಕಳಪೆ ಪ್ರದರ್ಶನವನ್ನು ನೀಡುವುದರ ಮೂಲಕ ಮಂಕಾಗಿದ್ದರು. ಟೂರ್ನಿಯಲ್ಲಿನ ತನ್ನ ಮೊದಲ 8 ಪಂದ್ಯಗಳಲ್ಲಿ ಇಶಾನ್ ಕಿಶನ್ 107 ರನ್ ಗಳಿಸುವುದರ ಮೂಲಕ ಹಲವಾರು ಪಂದ್ಯಗಳಲ್ಲಿ ನೀರಸ ಪ್ರದರ್ಶನವನ್ನು ತೋರಿದ್ದರು. ಈ ಕಾರಣದಿಂದಾಗಿಯೇ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್ ಅವರನ್ನು ಒಂದೆರಡು ಪಂದ್ಯಗಳಿಂದ ಹೊರಗಿಡಲಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಕ್ಟೋಬರ್ 5ರ ಮಂಗಳವಾರದಂದು ನಡೆದ ಪಂದ್ಯದಲ್ಲಿ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡ ಇಶಾನ್ ಕಿಶನ್ 25 ಎಸೆತಗಳಲ್ಲಿ 50 ರನ್ ಚಚ್ಚುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಭರ್ಜರಿ ಗೆಲುವಿಗೆ ಪ್ರಮುಖ ಕಾರಣರಾದರು.

ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!

ಹೀಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಕಮ್ ಬ್ಯಾಕ್ ಮಾಡಿದ ಇಶಾನ್ ಕಿಶನ್ ಪಂದ್ಯ ಮುಗಿದ ನಂತರ ಮಾತನಾಡಿದ್ದು ತಮ್ಮ ಭರ್ಜರಿ ಬ್ಯಾಟಿಂಗ್‌ಗೆ ಸಹಾಯವನ್ನು ಮಾಡಿದ ಕೆಲ ಆಟಗಾರರ ಕುರಿತು ಈ ಕೆಳಕಂಡಂತೆ ಮಾತನಾಡಿದ್ದಾರೆ.

ಕಳಪೆ ಫಾರ್ಮ್ ಎದುರಾದಾಗ ಉತ್ತಮ ಸಲಹೆ ನೀಡಿದ ಮೂವರು ಆಟಗಾರರನ್ನು ಹೆಸರಿಸಿದ ಇಶಾನ್ ಕಿಶನ್

ಕಳಪೆ ಫಾರ್ಮ್ ಎದುರಾದಾಗ ಉತ್ತಮ ಸಲಹೆ ನೀಡಿದ ಮೂವರು ಆಟಗಾರರನ್ನು ಹೆಸರಿಸಿದ ಇಶಾನ್ ಕಿಶನ್

ಈ ಹಿಂದೆಯೇ ಹೇಳಿದಂತೆ ಇಶಾನ್ ಕಿಶನ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ತಮ್ಮ ಮೊದಲ 8 ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಮಂಕಾಗಿ ತಂಡದ ಆಡುವ ಬಳಗದಿಂದ ಆಚೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಕಂಗೆಟ್ಟಿದ್ದ ತನಗೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಉತ್ತಮ ಸಲಹೆಗಳನ್ನು ನೀಡುವುದರ ಮೂಲಕ ಉತ್ತೇಜಿಸಿದರು ಎಂದು ಇಶಾನ್ ಕಿಶಾನ್ ಪಂದ್ಯ ಮುಗಿದ ಬಳಿಕ ಹೇಳಿಕೆಯನ್ನು ನೀಡಿದರು. ಆದರೆ ತಮ್ಮ ತಂಡದ ನಾಯಕ ರೋಹಿತ್ ಶರ್ಮಾರ ಹೆಸರನ್ನು ಇಶಾನ್ ಕಿಶನ್ ಈ ಪಟ್ಟಿಯಲ್ಲಿ ತೆಗೆದುಕೊಳ್ಳದೇ ಇರುವುದು ಆಶ್ಚರ್ಯ ಮೂಡಿಸಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ ಎಂಬ ಹೇಳಿಕೆಯನ್ನು ರೋಹಿತ್ ಶರ್ಮಾ ನೀಡಿದ್ದರು.

ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದ ನಂತರ ಮಂಕಾಗಿ ಕುಳಿತಿದ್ದ ಇಶಾನ್ ಕಿಶನ್‌ಗೆ ಧೈರ್ಯ ತುಂಬಿದ್ದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದ ನಂತರ ಮಂಕಾಗಿ ಕುಳಿತಿದ್ದ ಇಶಾನ್ ಕಿಶನ್‌ಗೆ ಧೈರ್ಯ ತುಂಬಿದ್ದ ವಿರಾಟ್ ಕೊಹ್ಲಿ

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋತಿತ್ತು ಮತ್ತು ಇಶಾನ್ ಕಿಶನ್ ಕೂಡ ಆ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿ ಮಂಕಾಗಿದ್ದರು. ಹೀಗೆ ಪಂದ್ಯದಲ್ಲಿ ಸೋತ ನಂತರ ಸಪ್ಪೆ ಮೋರೆ ಹಾಕಿ ಕುಳಿತಿದ್ದ ಇಶಾನ್ ಕಿಶಾನ್ ಬಳಿ ತೆರಳಿದ ವಿರಾಟ್ ಕೊಹ್ಲಿ ಆತನ ಹೆಗಲ ಮೇಲೆ ಕೈಹಾಕಿಕೊಂಡು ಮೈದಾನದಲ್ಲಿ ಕೆಲಕಾಲ ಆತನ ಜೊತೆ ನಡೆದಾಡುತ್ತಾ ಮಾತನಾಡಿ ಧೈರ್ಯವನ್ನು ತುಂಬಿದ್ದರು. ವಿರಾಟ್ ಕೊಹ್ಲಿಯ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿಯೇ ಇಶಾನ್ ಕಿಶನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಉತ್ತಮ ಪ್ರದರ್ಶನದ ಹಿಂದೆ ವಿರಾಟ್ ಕೊಹ್ಲಿಯವರ ಸಲಹೆಯ ಪಾತ್ರವೂ ಇದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

RCB ನಿನ್ನೆ ಸೋಲಲು Padikkal ಮುಖ್ಯ ಕಾರಣವೇ | Oneindia Kannada
ಇಶಾನ್ ಕಿಶನ್ ವೇಗದ ಬ್ಯಾಟಿಂಗ್ ನೆರವಿನಿಂದ 5ನೇ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

ಇಶಾನ್ ಕಿಶನ್ ವೇಗದ ಬ್ಯಾಟಿಂಗ್ ನೆರವಿನಿಂದ 5ನೇ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್

ಅಕ್ಟೋಬರ್ 5ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿತು. ಆದರೆ ಮುಂಬೈ ಇಂಡಿಯನ್ಸ್ ತಂಡ 91 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಅತಿ ವೇಗವಾಗಿ ಮುಟ್ಟಿದರೆ ಮಾತ್ರ ಅಧಿಕ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ಜಿಗಿತ ಕಾಣುತ್ತಿತ್ತು. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ತಂಡದ ಅಗತ್ಯತೆಗೆ ತಕ್ಕಂತೆ ಬಿರುಸಾಗಿ ಬ್ಯಾಟ್ ಬೀಸಿದ ಇಶಾನ್ ಕಿಶನ್ 25 ಎಸೆತಗಳಲ್ಲಿ 50 ರನ್ ಬಾರಿಸಿದರು. ಇಶಾನ್ ಕಿಶನ್ ಭರ್ಜರಿ ಅರ್ಧಶತಕದಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಕೂಡ ಸೇರಿದ್ದವು. ಹೀಗೆ ಇಶಾನ್ ಕಿಶನ್ ವೇಗದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ 8.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿತ ಕಂಡಿತು.

For Quick Alerts
ALLOW NOTIFICATIONS
For Daily Alerts
Story first published: Wednesday, October 6, 2021, 13:24 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X