ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: KKR vs LSG: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಐಯ್ಯರ್, ರಸೆಲ್, ಡಿಕಾಕ್

IPL 2022: match 66, KKR vs LSG: players records and approaching milestones

ಇಂಡಿಯನ್ ಪ್ರೀಮಿಯರ್ ಲೀಗ್‌ನ 66ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಂತಿಮ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಏರುವುದು ಸ್ಪಷ್ಟವಾಗಿದ್ದರೂ ಅದನ್ನು ಖಚಿತಪಡಿಸಿಕೊಳ್ಳಲು ಇಂದು ಎಲ್‌ಎಸ್‌ಜಿ ಗೆಲುವು ಸಾಧಿಸಬೇಕಿದೆ. ಆದರೆ ಕೆಕೆಆರ್ ತಂಡ ಈ ಮುಂದಿನ ಹಂತಕ್ಕೇರುವ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆಲ್ಲಲೇ ಬೇಕಿದೆ. ಈ ಪಂದ್ಯದಲ್ಲಿ ಕೆಕೆಆರ್ ಸೋತರೆ ಲೀಗ್‌ ಹಂತದಿಂದ ಅಧಿಕೃತವಾಗಿ ಹೊರಬೀಳಲಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಂದು ಬಾರಿ ಮಾತ್ರವೇ ಮೂಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಕೆಕೆಆರ್ ವಿರುದ್ಧ 75 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಈಗ ಮತ್ತೊಮ್ಮೆ ಟೂರ್ನಿಯಲ್ಲಿ ಮುಖಾಮುಖಿಯಾಗಿರುವುದು ಕುತೂಹಲ ಮೂಡಿಸಿದೆ.

ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ಡೋಪಿಂಗ್ ಉಲ್ಲಂಘನೆ; ಐಸಿಸಿಯಿಂದ 9 ತಿಂಗಳು ಅಮಾನತಾದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್

ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ಮಹತ್ವದ ಮೈಲಿಗಲ್ಲು ಸ್ಥಾನಪಿಸಲು ಸಜ್ಜಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

IPL 2022: match 66, KKR vs LSG: players records and approaching milestones

* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್‌ಗೆ ಕೆಕೆಆರ್ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೈಲುಗಲ್ಲಿ ಸಾಧಿಸುವ ಅವಕಾಶವಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಮಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಯೂಸುಫ್ ಪಠಾಣ್ ಅವರನ್ನು ಹಿಂದಿಕ್ಕುವ ಅವಕಾಶ ಆಂಡ್ರೆ ರಸೆಲ್‌ಗೆ ಇದೆ. ಇದಕ್ಕಾಗಿ ಈ ಪಂದ್ಯದಲ್ಲಿ ರಸೆಲ್ 25 ರನ್‌ಗಳನ್ನು ಗಳಿಸಬೇಕಿದೆ. ರಸೆಲ್ ಕೆಕೆಆರ್ ಪರವಾಗಿ 2037 ರನ್ ಗಳಿಸಿದ್ದರೆ, ಯೂಸುಫ್ ಪಠಾಣ್ 2061 ರನ್ ಗಳಿಸಿದ್ದಾರೆ.

IPL 2022: MI vs SRH ಪಂದ್ಯದ ನಂತರ ಪಾಯಿಂಟ್ಸ್ ಟೇಬಲ್; ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆ
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ಗಡಿ ತಲುಪಲು 4 ಸಿಕ್ಸರ್‌ಗಳನ್ನು ಬಾರಿಸಬೇಕಿದೆ.

* ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಗಳಿಸಿದ ರನ್‌ಗಳನ್ನು ಹಿಂದಿಕ್ಕುವ ಅವಕಾಶವಿದೆ. ಪ್ರಸ್ತುತ ಶ್ರೇಯಸ್ ಐಯ್ಯರ್ ಐಪಿಎಲ್‌ನಲ್ಲಿ 2726 ರನ್ ಗಳಿಸಿದ್ದು ಇನ್ನು ಕೇವಲ 3 ರನ್‌ಗಳಿಸಿದರೆ 2728 ರನ್ ರನ್‌ಗಳನ್ನು ಗಳಿಸಿರುವ ವಿರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿದಂತಾಗುತ್ತದೆ. ಇನ್ನು ಐಪಿಎಲ್‌ನಲ್ಲಿ ಒಟ್ಟಾರೆ 2750 ರನ್‌ಗಳಿಸಿರುವ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಲು ಐಯ್ಯರ್ 25 ರನ್‌ಗಳನ್ನು ಗಳಿಸಬೇಕಿದೆ.

* ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್‌ಗೆ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲನ್ನು ಮೀರಿನಿಲ್ಲುವ ಅವಕಾಶವಿದೆ. ಇದಕ್ಕಾಗಿ ಈ ಪಂದ್ಯದಲ್ಲಿ ಡಿಕಾಕ್ 5 ಸಿಕ್ಸರ್‌ಗಳನ್ನು ಸಿಡಿಸಬೇಕಿದೆ.

* ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೊಯಿನಿಸ್ ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಲು 3 ಸಿಕ್ಸರ್‌ಗಳನ್ನು ಬಾರಿಸಬೇಕಿದೆ.

* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ ವರುಣ್ ಚಕ್ರವರ್ತಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರುದ್ಧ 1 ವಿಕೆಟ್ ಪಡೆದರೆ ಏಕಕಾಲದಲ್ಲಿ 3 ಬೌಲರ್‌ಗಳನ್ನು ಹಿಂದಿಕ್ಕಬಹುದು. ವರುಣ್ ಈಗ 42 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಅವರು ಆಂಡ್ರ್ಯೂ ಟೈ, ಯೂಸುಫ್ ಪಠಾಣ್ ಮತ್ತು ಮೊಯ್ಸಿಸ್ ಹೆನ್ರಿಕ್ಸ್ ಅವರೊಂದಿಗೆ ಸಮಬಲದಲ್ಲಿದ್ದಾರೆ.

Story first published: Wednesday, May 18, 2022, 13:21 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X