ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RCB vs RR: ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಆರ್. ಅಶ್ವಿನ್, ಅಗ್ರಸ್ಥಾನದ ಮೇಲೆ ಕಣ್ಣು

 R Ashwin

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸಿದ ರಾಜಸ್ತಾನ್ ರಾಯಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಇದ್ರ ಜೊತೆಗೆ ಐಪಿಎಲ್‌ ಇತಿಹಾಸದಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

145 ರನ್ ಟಾರ್ಗೆಟ್ ಬೆನ್ನತ್ತಿದ್ದ ಆರ್‌ಸಿಬಿಗೆ ಸಾಕಷ್ಟು ಆಘಾತ ನೀಡಿದ ಆರ್. ಅಶ್ವಿನ್, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ರಜತ್ ಪಾಟೀದಾರ್ ಅನ್ನು ಬೌಲ್ಡ್ ಮಾಡುವ ಮೂಲಕ 150ರ ವಿಕೆಟ್‌ಗಳ ಗಡಿ ಮುಟ್ಟಿದ್ರು.

ಇದಾದ ಬಳಿಕ ಸುಯಾಶ್ ಪ್ರಭುದೇಸಾಯಿ (2), ಶಬಾಜ್ ಅಹ್ಮದ್ (17) ವಿಕೆಟ್ ಪಡೆಯುವ ಮೂಲಕ ಅಶ್ವಿನ್ ತನ್ನ 4 ಓವರ್‌ಗಳ ಖೋಟಾದಲ್ಲಿ ಕೇವಲ 17 ರನ್‌ ನೀಡಿ 3 ಪ್ರಮುಖ ವಿಕೆಟ್ ಪಡೆದರು.

ರಾಜಸ್ತಾನ್ ರಾಯಲ್ಸ್ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್‌ಸಿಬಿ 115ರನ್‌ಗಳಿಗೆ ಸರ್ವಪತನಗೊಂಡಿತು. ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್‌ 29ರನ್‌ಗಳಿಂದ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಅಶ್ವಿನ್ 150 ವಿಕೆಟ್‌ ಸಾಧನೆ

ಅಶ್ವಿನ್ 150 ವಿಕೆಟ್‌ ಸಾಧನೆ

ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ 8ನೇ ಬೌಲರ್ ಎಂಬ ಸಾಧನೆ ಆರ್‌. ಅಶ್ವಿನ್ ಮಾಡಿದ್ದಾರೆ. ಇದರ ಜೊತೆಗೆ ಹರ್ಭಜನ್ ಸಿಂಗ್, ಭುವನೇಶ್ವರ್ ವಿಕೆಟ್ ದಾಖಲೆಯನ್ನ ಮುರಿಯುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಆರ್‌. ಅಶ್ವಿನ್ 175 ಐಪಿಎಲ್ ಪಂದ್ಯಗಳಲ್ಲಿ 152 ವಿಕೆಟ್ ಪಡೆದಿದ್ದು, 4/34 ಬೆಸ್ಟ್ ಬೌಲಿಂಗ್ ಆಗಿದೆ. 6.93 ಅದ್ಭುತ ಎಕಾನಮಿ ಹೊಂದಿರುವ ಅಶ್ವಿನ್ ಇದೇ ಮೊದಲ ಬಾರಿಗೆ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ.

ಬೌಲಿಂಗ್‌ನಲ್ಲಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲೂ ನೆರವಾಗುವ ಅಶ್ವಿನ್, 512 ರನ್ ಕಲೆಹಾಕಿದ್ದು ಕೆಳಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲರು.

RCB VS RR: ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ, ಕೊಹ್ಲಿ, ಮ್ಯಾಕ್ಸ್‌ವೆಲ್ ಫ್ಲಾಪ್ ಶೋ

ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಸ್

ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಸ್

ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಎರಡನೇ ಆಫ್‌ ಸ್ಪಿನ್ನರ್ ಎಂಬ ದಾಖಲೆ ಮಾಡಿರುವ ಅಶ್ವಿನ್‌ ಸಾಧಕರ ಸಾಲಿನಲ್ಲಿ ಅಗ್ರಸ್ಥಾನದತ್ತ ದಾಪುಗಾಲಿರಿಸಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್ ಯಾರು ಎಂಬುದನ್ನ ಈ ಕೆಳಗೆ ತಿಳಿಯಬಹುದು.

166 - ಅಮಿತ್ ಮಿಶ್ರಾ
157 - ಪಿಯೂಷ್ ಚಾವ್ಲಾ
157 - ಯುಜವೇಂದ್ರ ಚಾಹಲ್
152 - ಆರ್. ಅಶ್ವಿನ್
151 - ಭುವನೇಶ್ವರ್ ಕುಮಾರ್
150 - ಹರ್ಭಜನ್ ಸಿಂಗ್

IPL 2022: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ತಾನ್ ರಾಯಲ್ಸ್, ಮತ್ತಷ್ಟು ಕುಸಿದ ಆರ್‌ಸಿಬಿ

Virat Kohli ಬ್ಯಾಟಿಂಗ್ ಮಾಡಲು ಇಷ್ಟು ಕಷ್ಟ ಪಟ್ಟಿದ್ದೇಕೆ | Oneindia Kannada
ಐಪಿಎಲ್‌ 2022ರ ಲೀಡಿಂಗ್ ವಿಕೆಟ್ ಟೇಕರ್ ಚಹಾಲ್

ಐಪಿಎಲ್‌ 2022ರ ಲೀಡಿಂಗ್ ವಿಕೆಟ್ ಟೇಕರ್ ಚಹಾಲ್

ಭಾರತದ ಎರಡು ಪ್ರಮುಖ ಸ್ಪಿನ್ನರ್‌ಗಳು ರಾಜಸ್ತಾನ್ ರಾಯಲ್ಸ್ ತಂಡದ ಪರ ಆಡುತ್ತಿರುವುದು ಫ್ರಾಂಚೈಸಿಗೆ ವರದಾನವಾಗಿದೆ. ಆರೆಂಜ್ ಕ್ಯಾಪ್ ಜೊತೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಆರ್‌ಆರ್ ಆಟಗಾರನ ಬಳಿಯೇ ಉಳಿದುಕೊಂಡಿದೆ. ಯುಜುವೇಂದ್ರ ಚಾಹಲ್ ಈ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಚಾಹಲ್ ಒಟ್ಟು 18 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

Story first published: Wednesday, April 27, 2022, 9:40 [IST]
Other articles published on Apr 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X