ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ 97ರನ್‌ಗೆ ಆಲೌಟ್‌: ರೈನಾಗೆ ಗೇಲಿ ಮಾಡಿದ ಯುವರಾಜ್ ಸಿಂಗ್

Yuvraj singh and raina

ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಹೀನಾಯ ಸೋಲಿನ ಕುರಿತಾಗಿ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ಕೇಳಿದ ಪ್ರಶ್ನೆಗೆ ರೈನಾ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಐಪಿಎಲ್ 2022ರ ಸೀಸನ್‌ನ 59ನೇ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸಿಎಸ್‌ಕೆ ಕೆಟ್ಟದಾಗಿ ಸೋಲನ್ನ ಕಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಪವರ್‌ಪ್ಲೇನಲ್ಲೇ ಪ್ರಮುಖ ವಿಕೆಟ್‌ಗಳನ್ನೆಲ್ಲಾ ಕಳೆದುಕೊಂಡಿತು.

ಎಂಎಸ್ ಧೋನಿ CSKಗೆ ಮೆಂಟರ್ ಅಥವಾ ಹೆಡ್ ಕೋಚ್ ಆಗಬಹುದು ಎಂದ ಪಾಕ್ ದಿಗ್ಗಜಎಂಎಸ್ ಧೋನಿ CSKಗೆ ಮೆಂಟರ್ ಅಥವಾ ಹೆಡ್ ಕೋಚ್ ಆಗಬಹುದು ಎಂದ ಪಾಕ್ ದಿಗ್ಗಜ

ಮೊದಲ ಆರು ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐದು ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿತು. ಮುಂಬೈ ಇಂಡಿಯನ್ಸ್‌ನ ಬೌಲರ್ ಡೇನಿಯಲ್ ಸ್ಯಾಮ್ಸ್‌ ಮೊದಲ ಓವರ್‌ನಲ್ಲಿಯೇ ಸಿಎಸ್‌ಕೆ ಎರಡು ವಿಕೆಟ್ ಕಳೆದುಕೊಂಡಿತು.

ರುತುರಾಜ್ ಗಾಯಕ್ವಾಡ್ 7, ಡೆವೊನ್ ಕಾನ್ವೆ 0, ಮೊಯಿನ್‌ ಅಲಿ 0, ರಾಬಿನ್ ಉತ್ತಪ್ಪ 1, ಅಂಬಟಿ ರಾಯುಡು 10, ಶಿವಂ ದುಬೆ 10 ರನ್‌ಗಳಿಸಿ ಔಟಾದರು. ಕೊನೆಯಲ್ಲಿ ಧೋನಿ ಅಜೇಯ 36, ಬ್ರಾವೊ 12 ರನ್‌ಗಳಿಸಿ ಔಟಾದರು. 16 ಓವರ್‌ಗಳಲ್ಲಿ ಸಿಎಸ್‌ಕೆ 97 ರನ್‌ಗೆ ಸರ್ವಪತನಗೊಂಡಿತು.

98 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ 18, ತಿಲಕ್ ವರ್ಮಾ ಅಜೇಯ 34, ಹೃತಿಕ್ 18, ಟಿಮ್ ಡೇವಿಡ್ ಅಜೇಯ 16 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಿಎಸ್‌ಕೆ ತಂಡ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಅತ್ಯಂತ ಕಡಿಮೆ ಸ್ಕೋರ್ ಮಾಡಿದೆ. ಅದೇ ವಾಂಖೆಡೆ ಮೈದಾನದಲ್ಲಿ ನಡೆದದ್ದು. 2013ರಲ್ಲಿ 79 ಹಾಗೂ 2019ರಲ್ಲಿ 109 ರನ್ ಗಳಿಸಿದ್ದರು. ಕಳೆದ ಪಂದ್ಯದಲ್ಲಿ ಧೋನಿ ಮಾತ್ರ 36 ರನ್ ಗಳಿಸದಿದ್ದರೆ 97 ರನ್ ಕೂಡ ಬರುತ್ತಿರಲಿಲ್ಲ.

ಈ ಸಂದರ್ಭದಲ್ಲಿ ಸಿಎಸ್‌ಕೆ ಸೋಲಿನ ಬಗ್ಗೆ ಮಾಜಿ ಆಟಗಾರರಾದ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಮಾತನಾಡಿದ್ದಾರೆ. ಪಂದ್ಯದ ದಿನ ರಾತ್ರಿ ಇಬ್ಬರೂ ಒಟ್ಟಿಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಹೋಗಿದ್ದರು. ಈ ವೇಳೆ ರೈನಾಗೆ ಯುವಿ ಪ್ರಶ್ನೆ ಕೇಳಿದ್ದು ಸಿಎಸ್‌ಕೆ 97 ರನ್‌ಗೆ ಔಟಾಗಿದೆ, ಏನು ಹೇಳಲು ಬಯಸುತ್ತೀರಿ? ಎಂದು ಯುವಿ ಗೇಲಿ ಮಾಡಿದ್ದಾರೆ.

ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸುರೇಶ್ ರೈನಾ, ಆ ಪಂದ್ಯದಲ್ಲಿ ನಾನೇನೂ ಇರಲಿಲ್ಲ, ಏಕೆ ಉತ್ತರಿಸಬೇಕು ಎಂದರು. ರೈನಾ ಅವರ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಿಎಸ್‌ಕೆಗೆ ಟಾಂಗ್ ಕೊಟ್ಟಂತಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಧೋನಿ ತೆಗೆದುಕೊಂಡ ಕೆಟ್ಟ ನಿರ್ಧಾರದಿಂದ ಚೆನ್ನೈಗೆ ಇಂಥಾ ಪರಿಸ್ಥಿತಿ ಬಂತು!! | Oneindia Kannada

ಐಪಿಎಲ್ ಇತಿಹಾಸದಲ್ಲಿ 12 ಸೀಸನ್‌ಗಳಲ್ಲಿ ಚೆನ್ನೈ ಎರಡು ಬಾರಿ ಮಾತ್ರ ಲೀಗ್‌ನಿಂದ ಹೊರಬಿದ್ದಿದೆ. ಆ ಎರಡೂ ಸೀಸನ್‌ಗಳಲ್ಲಿ ಸುರೇಶ್ ರೈನಾ ಸಿಎಸ್‌ಕೆಯಲ್ಲಿ ಇರಲಿಲ್ಲ. ಇನ್ನುಳಿದ 10 ಸೀಸನ್ ಗಳಿಗೆ ಚೆನ್ನೈ ಪ್ಲೇ ಆಫ್ ಸುತ್ತಿಗೆ ಮುನ್ನಡೆಯಲು ಸುರೇಶ್ ರೈನಾ ಪ್ರಮುಖ ಕಾರಣ ಎಂಬುದು ಗಮನಾರ್ಹ.

Story first published: Saturday, May 14, 2022, 9:12 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X