ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 Auction: ಪ್ರಪ್ರಥಮ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದ ಸಿಕಂದರ್ ರಾಜಾ

IPL 2023 Auction: Sikandar Raza Sold Out To Punjab Kings For Base price

ಅದ್ಭುತ ಫಾರ್ಮ್‌ನಲ್ಲಿರುವ ಜಿಂಬಾಬ್ವೆ ತಂಡದ ಅನುಭವಿ ಆಲ್‌ರೌಂಡರ್ ಸಿಕಂದರ್ ರಾಜಾ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶ ಗಳಿಸಿಕೊಂಡಿದ್ದಾರೆ. ರಾಜಾ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಹರಾಜಾಗಿದ್ದು ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮೂಲಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.

ಈ ಮೂಲಕ ಜಿಂಬಾಬ್ವೆ ದೇಶದಿಂದ ಐಪಿಎಲ್‌ನಲ್ಲಿ ಭಾಗಿಯಾಗುತ್ತಿರುವ ಕೇವಲ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರೇ ಪ್ರಿನ್ಸ್, ತೈತೆಂದ ತೈಬು ಹಾಗೂ ಬ್ರೆಂಡನ್ ಟೇಲರ್ ಮಾತ್ರವೇ ಐಪಿಎಲ್‌ನಲ್ಲಿ ಆಡಿದ ಜಿಂಬಾಬ್ವೆಯ ಆಟಗಾರರಾಗಿದ್ದಾರೆ.

ಮುಂದಿನ ವರ್ಷವಾದರೂ ಸಮರ್ಥ ನಾಯಕನನ್ನು ಹುಡುಕಿಕೊಳ್ಳಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ!ಮುಂದಿನ ವರ್ಷವಾದರೂ ಸಮರ್ಥ ನಾಯಕನನ್ನು ಹುಡುಕಿಕೊಳ್ಳಿ: ಆರ್‌ಸಿಬಿಗೆ ಆಕಾಶ್ ಚೋಪ್ರ ಸಲಹೆ!

2022ರ ವಿಶ್ವಕಪ್‌ನಲ್ಲಿ ಸಿಕಂದರ್ ರಾಜಾ ಜಿಂಬಾಬ್ವೆ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರಾಜಾ ಬ್ಯಾಟಿಂಗ್‌ನಲ್ಲಿಯೂ ಕೆಲ ಮಹತ್ವದ ಇನ್ನಿಂಗ್ಸ್‌ಗಳನ್ನು ನೀಡಿದ್ದರು. ಈ ಪ್ರದರ್ಶನದಿಂದಾಗಿ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಕೆಲ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಪಾಕಿಸ್ತಾನದಂತಾ ಪ್ರಮುಖ ತಂಡಕ್ಕೆ ಸೋಲುಣಿಸುವಲ್ಲಿಯೂ ಜಿಂಬಾಬ್ವೆ ಯಶಸ್ವಿಯಾಗಿತ್ತು.

ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ರಾಜಾ 20.98 ಸರಾಸರಿಯಲ್ಲಿ ಬೌಲಿಂಗ್ ನಡೆಸಿದ್ದು ಬ್ಯಾಟಿಂಗ್‌ನಲ್ಲಿ 128.86 ಸ್ಟ್ರೈಕ್ ರೇಟ್‌ನೊಂದಿಗೆ ರನ್‌ಗಳಿಸಿದ್ದಾರೆ. ಅವರು 7.18 ಎಕಾನಮಿ ದರದಲ್ಲಿ 38 ವಿಕೆಟ್‌ಗಳನ್ನು ಪಡೆದುಕೊಂಡಿರುವುದು ಗಮನಾರ್ಹ ಸಾಧನೆ. ಆದರೆ ಈ ಕ್ಯಾಲೆಂಡರ್ ವರ್ಷದಲ್ಲಿ ಸಿಕಂದರ್ ರಾಜಾ ಅವರ ಅಮೋಘ ಪ್ರದರ್ಶನ ನೀಡಿದ್ದು 8 ಪಂದ್ಯಗಳಲ್ಲಿ 219 ರನ್ ಗಳಿಸಿದ್ದರೆ 10 ವಿಕೆಟ್‌ಳನ್ನು ಕೂಡ ಪಡೆದುಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಸಾಕಷ್ಟು ಭಿನ್ನತೆಯನ್ನು ಹೊಂದಿರುವ ರಾಜಾ ಎದುರಾಳಿ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿ ಮಿಂಚಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಸಿಕಂದರ್ ರಾಜಾ ಮೇಲೆ ನಿರೀಕ್ಷೆ ಇದ್ದೇ ಇದೆ.

Story first published: Friday, December 23, 2022, 18:30 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X