ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರು

MS DHONI

ಐಪಿಎಲ್‌ 15ನೇ ಸೀಸನ್‌ನಲ್ಲಿ ಉತ್ತಮ ತಂಡವನ್ನ ಹೊಂದಿದ್ದರೂ ಸಹ, ಚೆನ್ನೈ ಸೂಪರ್ ಕಿಂಗ್ಸ್‌ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿ ಕೊನೆಗೊಂಡು ಟೂರ್ನಿಯಿಂದ ಹೊರನಡೆಯಿತು. ನಾಯಕತ್ವ ಬದಲಾವಣೆ ಮತ್ತು ಪ್ರಮುಖ ಬೌಲರ್ ದೀಪಕ್ ಚಹಾರ್ ಗಾಯಗೊಂಡಿದ್ದು ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ.

ಆದ್ರೆ ಮುಂದಿನ ಐಪಿಎಲ್ ಸರಣಿಗೆ ಸಿದ್ಧವಾಗಲು ಸಿಎಸ್‌ಕೆ ಈಗಾಗಲೇ ಕಸರತ್ತು ನಡೆಸುತ್ತಿದೆ. ಸಿಎಸ್‌ಕೆ ಈ ಋತುವಿನಲ್ಲಿದ್ದ ಕೆಲವು ಆಟಗಾರರನ್ನು ಕೈ ಬಿಡುವ ಜೊತೆಗೆ ಬದಲಿ ನಾಯಕರನ್ನೂ ಸಹ ಹುಡುಕುವ ಸಾಹಸಕ್ಕೆ ಕೈ ಹಾಕಬೇಕಿದೆ. ಏಕೆಂದರೆ ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ನಾಯಕತ್ವವನ್ನ ರವೀಂದ್ರ ಜಡೇಜಾಗೆ ನೀಡಿ ಕೈ ಸುಟ್ಟುಕೊಂಡರು. ಹೀಗಾಗಿ ಮುಂದಿನ ಸೀಸನ್‌ನಲ್ಲಿ ಧೋನಿಯೇ ತಂಡವನ್ನ ಮುನ್ನಡೆಸುತ್ತಾರೆ ಎಂಬ ಸಾಧ್ಯತೆಗಳು ಕಡಿಮೆ ಇವೆ.

ಒಂದು ವೇಳೆ 41 ವರ್ಷ ವಯಸ್ಸಿನ ಧೋನಿ ನಾಯಕನಾಗಿ ಮುಂದುವರೆಯದೇ ಇದ್ದರೆ, ಬದಲಿ ನಾಯಕನನ್ನು ಸಿಎಸ್‌ಕೆ ಫ್ರಾಂಚೈಸಿ ಹುಡುಕಿಕೊಳ್ಳಬೇಕು. ಸಿಎಸ್‌ಕೆ ನಾಯಕ ಧೋನಿ ಸ್ಥಾನವನ್ನ ತುಂಬಬಲ್ಲ ಐವರು ಆಟಗಾರರನ್ನ ಈ ಕೆಳಗೆ ಕಾಣಬಹುದು.

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ನಾಯಕತ್ವದ ದಾಖಲೆಗಳನ್ನ ನೋಡಿದ್ರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಸಿಎಸ್‌ಕೆ ನಾಯಕತ್ವ ವಹಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದ್ದಾರೆ. ಕೆಲವು ಸೀಸನ್‌ಗಳಲ್ಲಿ ರಾಜಸ್ತಾನ್ ರಾಯಲ್ಸ್ ತಂಡವನ್ನ ಮುನ್ನಡೆಸಿರುವ ಸ್ಟೀವ್ ಸ್ಮಿತ್, 2017ರ ಸೀಸನ್‌ನಲ್ಲಿ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಫೈನಲ್‌ವರೆಗೆ ತೆಗೆದುಕೊಂಡು ಹೋಗಿದ್ದರು.

ಇದರ ಜೊತೆಗೆ ಆಸ್ಟ್ರೇಲಿಯಾ ತಂಡವನ್ನ ಮೂರು ಫಾರ್ಮೆಟ್‌ನಲ್ಲಿ ಮೂರು ವರ್ಷ ಮುನ್ನಡೆಸಿರುವ ಅನುಭವವನ್ನು ಸ್ಮಿತ್ ಹೊಂದಿದ್ದಾರೆ. ಅಲ್ಲದೆ ಇವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಬಲಿಷ್ಠ ತಂಡವಾಗಿ ರೂಪುಗೊಂಡಿತ್ತು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿರುವ ಸ್ಮಿತ್ ಬ್ಯಾಟಿಂಗ್ ವಿಭಾಗದಲ್ಲೂ ಉತ್ತಮ ಬಲ ತುಂಬಲಿದ್ದಾರೆ. ಕ್ರಿಕೆಟ್‌ನ ಚಾಂಪಿಯನ್ ಆಟಗಾರರಲ್ಲಿ ಒಬ್ಬರಾಗಿರುವ ಸ್ಮಿತ್ ತಂಡವನ್ನ ಬ್ಯಾಲೆನ್ಸ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಸ್ಮಿತ್ ಇದುವರೆಗೆ ಆಸ್ಟ್ರೇಲಿಯಾದ ನಾಯಕನಾಗಿ 35 ಟೆಸ್ಟ್, 51 ಏಕದಿನ ಮತ್ತು 8 ಟಿ20 ಪಂದ್ಯಗಳನ್ನು ಮುನ್ನಡೆಸಿದ್ದು, ಕ್ರಮವಾಗಿ 19, 25 ಮತ್ತು 4 ಪಂದ್ಯಗಳಲ್ಲಿ ಜಯಸಿದ್ದಾರೆ

43 ಐಪಿಎಲ್‌ ಪಂದ್ಯಗಳಲ್ಲಿ ನಾಯಕನಾಗಿರುವ ಸ್ಮಿತ್ 25 ಬಾರಿ ತಂಡವನ್ನ ಗೆಲುವಿನ ಗೆರೆ ದಾಟಿಸಿದ್ದಾರೆ. ಜೊತೆಗೆ 59.52ರ ಅದ್ಭುತ ಗೆಲುವಿನ ಸರಾಸರಿಯನ್ನ ಸಹ ಹೊಂದಿದ್ದಾರೆ.

ಇಯಾನ್ ಮಾರ್ಗನ್

ಇಯಾನ್ ಮಾರ್ಗನ್

ಇಂಗ್ಲೆಂಡ್ ಕ್ರಿಕೆಟ್‌ ತಂಡದ ಲಿಮಿಟೆಡ್ ಓವರ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೂಡ ಸಿಎಸ್‌ಕೆ ತಂಡವು ನಾಯಕನಾಗಿ ಪರಿಗಣಿಸಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕೆಕೆಆರ್ ತಂಡದ ನಾಯಕನಾಗಿ ತಂಡವನ್ನ ಫೈನಲ್‌ಗೇರಿಸಿರುವ ಕೀರ್ತಿಯು ಇವರಿಗಿದೆ.

2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಪರಿಗಣಿಸಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇಂಗ್ಲೆಂಡ್ ಈಗಾಗಲೇ ಇವರ ನಾಯಕತ್ವದಲ್ಲಿ ಅಮೋಘ ಸರಣಿ ಮತ್ತು ಟ್ರೋಫಿಗಳನ್ನ ಜಯಿಸಿದೆ.

ಜೊತೆಗೆ ಈಗಾಗಲೇ ಅಂಬಟಿ ರಾಯುಡು ಐಪಿಎಲ್‌ನಿಂದ ನಿವೃತ್ತಿ ಹೊಂದುವ ಮನಸ್ಸು ಮಾಡಿದ್ದು, ಮುಂದಿನ ಸೀಸನ್‌ನಲ್ಲಿ ಆಡದೇ ಇದ್ದಲ್ಲಿ ಐಪಿಎಲ್ 2022ರ ಸೀಸನ್‌ನಲ್ಲಿ ಅನ್‌ಸೋಲ್ಡ್ ಆಗಿದ್ದ ಇಯಾನ್ ಮಾರ್ಗನ್ ಆಯ್ಕೆ ಕೂಡ ಉತ್ತಮವಾಗಿದೆ.

48,390 ಕೋಟಿಗೆ ಹರಾಜು: ವಿಶ್ವದ 2ನೇ ಶ್ರೀಮಂತ ಲೀಗ್ ಆಗಿ ಹೊರಹೊಮ್ಮಿದ ಐಪಿಎಲ್

ರುತುರಾಜ್ ಗಾಯಕ್ವಾಡ್

ರುತುರಾಜ್ ಗಾಯಕ್ವಾಡ್

ಸಿಎಸ್‌ಕೆ ತಂಡದ ಯಂಗ್ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ತಂಡದ ಪರ ಉತ್ತಮ ಆಸ್ತಿಯಾಗಿದ್ದಾರೆ. 2021ರ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್ ಗಾಯಕ್ವಾಡ್‌ ಕಳೆದ ಸೀಸನ್‌ನಲ್ಲಿ ಫಾರ್ಮ್‌ಗೆ ಮರಳಲು ಕೆಲವು ಪಂದ್ಯಗಳನ್ನೇ ತೆಗೆದುಕೊಂಡರು.

ಕಳೆದ ಕೆಲ ಸೀಸನ್‌ನಿಂದ ಸಿಎಸ್‌ಕೆ ತಂಡದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಆಟಗಾರ ಇವರಾಗಿದ್ದಾರೆ. 2021ರ ಸೀಸನ್‌ನಲ್ಲಿ ಸಿಎಸ್‌ಕೆ ಕಪ್ ಗೆಲ್ಲಲು ಈತನ ಪಾತ್ರ ಪ್ರಮುಖವಾಗಿತ್ತು.

2021ರ ವಿಜಯ್ ಹಜಾರೆ ಟ್ರೋಫಿಗೂ ಮುನ್ನ ಈತನನ್ನು ಮಹಾರಾಷ್ಟ್ರ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈತನ ಅಡಿಯಲ್ಲಿ ಮಹಾರಾಷ್ಟ್ರ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಆದ್ರೆ ಐಪಿಎಲ್ ವಿಚಾರಕ್ಕೆ ಬಂದ್ರೆ ಅನುಭವದ ಪಾತ್ರ ವಿಭಿನ್ನವಾಗಿರುತ್ತದೆ.

25 ವರ್ಷ ವಯಸ್ಸಿನ ಆಟಗಾರ ಅತ್ಯಂತ ಭರವಸೆಯ ಕ್ರಿಕೆಟಿಗ ಮತ್ತು ನಾಯಕತ್ವ ವಹಿಸಿಕೊಂಡ ಬಳಿಕ ಮತ್ತಷ್ಟು ಉತ್ತಮ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಯಕರಾದ ನಂತರ, ಅವರ ಮೊದಲ ಐದು ಸ್ಕೋರ್‌ಗಳು 168, 21, 124, 154*, ಮತ್ತು 136 ರನ್ ಆಗಿದೆ. ಹೀಗಾಗಿ ಗಾಯಕ್ವಾಡ್ ಅವರು CSK ಗೆ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ನೀಡಿದ ಸಮಯದಿಂದಲೂ ರನ್ ಮಶಿನ್ ಆಗಿ ಬದಲಾಗಿದ್ದಾರೆ.

ಒಂದೆರಡು ಪಂದ್ಯ ಚೆನ್ನಾಗಿ ಆಡ್ತಾನೆ ನಂತರ ಫ್ಲಾಪ್ ಆಗ್ತಾನೆ; ಇದೇ ಭಾರತದ ದೊಡ್ಡ ಸಮಸ್ಯೆ: ಕಪಿಲ್ ದೇವ್!

ಬೆನ್ ಸ್ಟೋಕ್ಸ್‌

ಬೆನ್ ಸ್ಟೋಕ್ಸ್‌

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಮೊದಲ ಸರಣಿಯಲ್ಲೇ ನ್ಯೂಜಿಲೆಂಡ್ ವಿರುದ್ಧ ಗೆದ್ದಿರುವ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ ಸಿಎಸ್‌ಕೆ ನಾಯಕತ್ವದ ರೇಸ್‌ನಲ್ಲಿರುವ ಮತ್ತೊಬ್ಬ ಆಟಗಾರನಾಗಿದ್ದಾರೆ.

ಪ್ರಸ್ತುತ ಕ್ರಿಕೆಟ್‌ ಜಗತ್ತಿನಲ್ಲಿ ಮೂರು ಫಾರ್ಮೆಟ್‌ನಲ್ಲಿ ಬೆನ್ ಸ್ಟೋಕ್ಸ್‌ ಓರ್ವ ಬೆಸ್ಟ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸ್ಟೋಕ್ಸ್ ಪಾತ್ರ ಬಹಳ ದೊಡ್ಡದು.

ಜೋ ರೂಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಇಂಗ್ಲೆಂಡ್‌ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಈತನ ಲಾರ್ಡ್ಸ್ ಹಾಗೂ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನ ಗೆಲುವಿನ ದಡ ತಲುಪಿಸಿದ್ದಾರೆ.

ಐಪಿಎಲ್ 2022ರ ಸೀಸನ್‌ನಲ್ಲಿ ಈ ಚಾಂಪಿಯನ್ ಆಲ್‌ರೌಂಡರ್ ಯಾವುದೇ ತಂಡದ ಪರ ಆಡಲಿಲ್ಲ. ಮೆಗಾ ಹರಾಜಿನಲ್ಲಿ ಭಾಗಿಯಾಗದಿರುವ ಕುರಿತು ನಿರ್ಧರಿಸಿದ್ದರು. ಆದ್ರೆ ಐಪಿಎಲ್ 2023ರ ಸೀಸನ್‌ನಲ್ಲಿ ಬೆನ್‌ ಸ್ಟೋಕ್ಸ್‌ ಆಡುವ ಸಾಧ್ಯತೆ ಇದ್ದು, ಹರಾಜಿನಲ್ಲಿ ಸಿಎಸ್‌ಕೆ ತಂಡವು ಆತನ ಮೇಲೆ ಬಿಡ್ ಮಾಡುವ ಸಾಧ್ಯತೆ ಹೆಚ್ಚಿದೆ.

ಐಪಿಎಲ್ 2017ರ ಸೀಸನ್‌ನಲ್ಲಿ ಎಂ.ಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಬೆನ್‌ ಸ್ಟೋಕ್ಸ್‌ ಆಡಿದ್ದರು. ಆ ಸೀಸನ್‌ನಲ್ಲಿ ಪುಣೆ ತಂಡವು ಫೈನಲ್‌ಗೇರಿತ್ತು.

IND vs SA: ಗಂಭೀರ್ ದಾಖಲೆ ಮುರಿದ ಕಿಶನ್; ಕೊಹ್ಲಿ ದಾಖಲೆ ಜಸ್ಟ್ ಮಿಸ್, ರಾಹುಲ್ ಇಂದಿಗೂ ನಂಬರ್ 1!

ಮನೀಶ್ ಪಾಂಡೆ

ಮನೀಶ್ ಪಾಂಡೆ

ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಳ್ಳಬಲ್ಲ ಎರಡನೇ ಭಾರತೀಯ ಆಟಗಾರನೆಂದ್ರೆ ಅದು ಕರ್ನಾಟಕ ತಂಡದ ಮನೀಶ್ ಪಾಂಡೆ. ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸುತ್ತಿರುವ ಮನೀಶ್ ಪಾಂಡೆ ಐಪಿಎಲ್‌ನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಮನೀಷ್‌ ಪಾಂಡೆ ಸದ್ಯ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೂ , ಉತ್ತಮ ನಾಯಕತ್ವ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಪ್ರಸ್ತುತ ಐಪಿಎಲ್ ಟ್ರೆಂಡ್ ಪ್ರಕಾರ ತಂಡಗಳು ವಿದೇಶಿ ನಾಯಕನಿಗಿಂತ ಸ್ವದೇಶಿ ಆಟಗಾರನಿಗೆ ನಾಯಕತ್ವ ಪಟ್ಟ ಕಟ್ಟುವುದರಲ್ಲಿ ಹೆಚ್ಚು ಗಮನಹರಿಸಿವೆ. ಸಿಎಸ್‌ಕೆ ಕೂಡ ಅಂತಹದ್ದೇ ನಿರ್ಧಾರ ಮಾಡಿದ್ದಲ್ಲಿ ಮನೀಶ್ ಪಾಂಡೆ ಕೂಡ ನಾಯಕತ್ವ ವಹಿಸಿಕೊಳ್ಳಬಲ್ಲ ಆಟಗಾರರಾಗಿದ್ದಾರೆ.

ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಕೆಲವು ಪಂದ್ಯಗಳನ್ನ ಆಡಿದ ಬಳಿಕ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಕಳೆದುಕೊಂಡ ಮನೀಶ್ ಪಾಂಡೆಯನ್ನು ಸಿಎಸ್‌ಕೆ ಮುಂದಿನ ಸೀಸನ್‌ಗೆ ಪರಿಗಣಿಸಬಹುದು.

32 ವರ್ಷದ ಮನೀಶ್ ಪಾಂಡೆ ಒಂದು ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದಾರೆ. 2019ರಲ್ಲಿ ಕರ್ನಾಟಕ ತಂಡವನ್ನು 16 ಟಿ20 ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ತಂಡವನ್ನ ಮುನ್ನಡೆಸುತ್ತಿರುವ ಪಾಂಡೆ ಐಪಿಎಲ್‌ನಲ್ಲೂ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಈತ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಕೂಡ ಆಗಿದ್ದಾರೆ.

Story first published: Wednesday, June 15, 2022, 14:01 [IST]
Other articles published on Jun 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X