
ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಮುಖೇಶ್ ಕುಮಾರ್
ಕ್ಯಾಬ್ ಚಾಲಕನ ಮಗ ಮುಕೇಶ್ ಕುಮಾರ್ ಐಪಿಎಲ್ ಮಿನಿ ಹರಾಜಿನಲ್ಲಿ 5.5 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದರು. ಬಿಹಾರ ಮೂಲದವರಾದ ಮುಕೇಶ್ ನಂತರ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ತೆರಳಿದರು. ತಂದೆ ಕ್ಯಾಬ್ ಚಾಲಕನಾಗಿದ್ದರು, ಕಷ್ಟದಲ್ಲಿಯೂ ಕ್ರಿಕೆಟ್ ಮೇಲಿನ ಒಲವು ಕಡಿಮೆಯಾಗಲಿಲ್ಲ, ಕಠಿಣ ಅಭ್ಯಾಸ ನಡೆಸಿದ ಮುಖೇಶ್‌ರನ್ನು ಅದೃಷ್ಟ ಕೈಹಿಡಿದಿದೆ.
2015 ರಲ್ಲಿ ದೇಶೀಯ ಕ್ರಿಕೆಟ್ ಆಡಲು ಆರಂಭಿಸಿದ ಮುಕೇಶ್ ಕುಮಾರ್, ಅತ್ಯುತ್ತಮ ಪ್ರದರ್ಶನ ನೀಡಿದರು. ಇದುವರೆಗೂ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, 21.49ರ ಸರಾಸರಿಯಲ್ಲಿ 123 ವಿಕೆಟ್ ಪಡೆದಿದ್ದಾರೆ. ದೇಶೀಯವಾಗಿ 23 ಟಿ20 ಪಂದ್ಯಗಳನ್ನು ಆಡಿರುವ ಅವರು 23.68 ಸರಾಸರಿಯಲ್ಲಿ 25 ವಿಕೆಟ್ ಪಡೆದಿದ್ದಾರೆ.
IPL 2023: ಈ ಕನ್ನಡಿಗರನ್ನು ತಂಡದಿಂದ ಕೈಬಿಟ್ಟ ಕ್ರಮವನ್ನು ಟೀಕಿಸಿದ ಮಾಜಿ ಕ್ರಿಕೆಟಿಗ

ಎಡಗೈ ಬ್ಯಾಟರ್ ವಿವ್ರಾಂತ್ ಶರ್ಮಾ
ಜಮ್ಮು ಮತ್ತು ಕಾಶ್ಮೀರದ ಪ್ರತಿಭೆ ವಿವ್ರಾಂತ್ ಶರ್ಮಾ ಐಪಿಎಲ್ ಮಿನಿಹರಾಜಿನಲ್ಲಿ 2.6 ಕೋಟಿ ರುಪಾಯಿ ಮೊತ್ತಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರಿದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 145.45 ಸ್ಟ್ರೈಕ್ ರೇಟ್‌ನಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 128 ರನ್ ಗಳಿಸುವ ಮೂಲಕ ಅವರು ಫ್ರಾಂಚೈಸಿಗಳ ಗಮನ ಸೆಳೆದಿದ್ದರು.
ವಿವ್ರಾಂತ್ ಶರ್ಮಾ ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಇನ್ನಿಂಗ್ಸ್‌ಗಳಲ್ಲಿ 56.42 ಸರಾಸರಿ ಮತ್ತು 94.72 ಸ್ಟ್ರೈಕ್ ರೇಟ್‌ನಲ್ಲಿ 395 ರನ್ ಗಳಿಸಿದ್ದಾರೆ. ಲೆಗ್ ಸ್ಪಿನ್ನರ್ ಆಗಿರುವ ಅವರು 5 ವಿಕೆಟ್ ಕೂಡ ಪಡೆದಿದ್ದಾರೆ. 20 ಲಕ್ಷ ಮೂಲಬೆಲೆ ಹೊಂದಿದ್ದ ಅವರು 2.60 ಕೋಟಿ ರುಪಾಯಿ ಪಡೆಯಲಿದ್ದಾರೆ.

ಆಲ್‌ರೌಂಡರ್ ಮಯಾಂಕ್ ದಾಗರ್
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಹಿಮಾಚಲ ಪ್ರದೇಶದ ಆಲ್‌ರೌಂಡರ್ ಐಪಿಎಲ್ ಮಿನಿ ಹರಾಜಿನಲ್ಲಿ 1.8 ಕೋಟಿ ರುಪಾಯಿಗೆ ಹರಾಜಾದರು. ಸನ್‌ರೈಸರ್ಸ್ ಹೈದರಾಬಾದ್ ತಂಡ ಇವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
29 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಮಯಾಂಕ್ ದಾಗರ್ 87 ವಿಕೆಟ್ ಪಡೆದಿದ್ದಾರೆ. ಮೂರು ಅರ್ಧಶತಕ ಸೇರಿದಂತೆ 732 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ಮಾದರಿಯಲ್ಲಿ ಅವರು 44 ವಿಕೆಟ್ ಪಡೆದಿದ್ದಾರೆ. ಅಲ್ಲದೆ 6.17ರ ಅತ್ಯುತ್ತಮ ಎಕಾನಮಿ ದರವನ್ನು ಹೊಂದಿದ್ದಾರೆ.
2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಹಿಮಾಚಲ ಪ್ರದೇಶ ತಂಡದಲ್ಲಿ ಆಡಿದ್ದರು. 5.22 ರ ಆರ್ಥಿಕತೆಯಲ್ಲಿ ಏಳು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದರು. ಇವರು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಂಬಂಧಿ. 2018 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು.