
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಮರ್ಥ್ಯ
ಆರ್‌ಸಿಬಿ ಸಾಕಷ್ಟು ಯೋಗ್ಯ ಟಿ20 ತಂಡವಾಗಿದೆ. ತಂಡದಲ್ಲಿ ಅನುಭವಿಗಳು ಮತ್ತು ಯುವಕರ ಸಂಯೋಜನೆ ಉತ್ತಮವಾಗಿದೆ. ಉತ್ತಮ ಸ್ಪಿನ್ನರ್, ಆಲ್‌ರೌಂಡರ್, ವೇಗಿಗಳಿದ್ದಾರೆ. ಬ್ಯಾಟಿಂಗ್ ಡೆಪ್ತ್ ಉತ್ತಮವಾಗಿದೆ. ವನಿಂದು ಹಸರಂಗ, ಹರ್ಷಲ್ ಪಟೇಲ್, ಶಹಬಾಜ್ ಅಹಮದ್ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್ ಮತ್ತು ಹರ್ಷಲ್ ಪಟೇಲ್ ಉತ್ತಮ ಬೌಲರ್ ಆಗಿದ್ದಾರೆ. ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ ಮತ್ತು ಸಿದ್ಧಾರ್ಥ್ ಕೌಲ್ ಕೂಡ ಉತ್ತಮ ಬ್ಯಾಕಪ್ ಬೌಲರ್ ಆಗಿದ್ದಾರೆ. ವನಿಂದು ಹಸರಂಗಾ, ಶಹಬಾಜ್ ಅಹ್ಮದ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಸ್ಪಿನ್-ಬೌಲಿಂಗ್ ಸಂಘಟಿಸಲಿದ್ದಾರೆ. ಕರಣ್ ಶರ್ಮಾ ಕೂಡ ಸ್ಪಿನ್ ಬೌಲಿಂಗ್‌ನಲ್ಲಿದ್ದಾರೆ.
IPL Auction 2023: ಕೆಲಸ ಹುಡುಕಲು ಕೆನಡಾಗೆ ಹೊರಟಿದ್ದ ಅವಿನಾಶ್ ಸಿಂಗ್ ಆರ್‌ಸಿಬಿ ಸೇರಿದ್ದು ಹೇಗೆ?

ಸ್ಫೋಟಕ ಆರಂಭಿಕ ಬ್ಯಾಟರ್ ಬೇಕು
ಆರ್‌ಸಿಬಿ ತಂಡದ ಪ್ರಮುಖ ಸಮಸ್ಯೆ ಎಂದರೆ ಆರಂಭದಲ್ಲಿ ಸ್ಫೋಟಕ ಆಟಗಾರ ಇಲ್ಲದೇ ಇರುವುದು. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಬೌಂಡರಿ ಹೊಡೆಯುವ ಆಟಗಾರರಲ್ಲ. ಇವರಿಬ್ಬರೂ ಕೆಲವು ಎಸೆತಗಳನ್ನು ಎದುರಿಸಿದ ನಂತರ ಬೌಂಡರಿ ಗಳಿಸಲು ಆರಂಭಿಸುತ್ತಾರೆ.
ದಿನೇಶ್ ಕಾರ್ತಿಕ್ ಕಳೆದ ಸೀಸನ್‌ನಲ್ಲಿ ಪ್ರದರ್ಶನ ನೀಡಿದಂತೆ ಬ್ಯಾಟ್ ಮಾಡಿದರೆ ತಂಡಕ್ಕೆ ಹೆಚ್ಚಿನ ಬಲ ಬರಲಿದೆ. ಆದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಫಲವಾಗಿರುವುದು ಚಿಂತೆಗೆ ಕಾರಣವಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ ತಂಡದ ಬೌಲಿಂಗ್ ಸಾಮರ್ಥ್ಯ ಏನೆಂದು ಇನ್ನೂ ತಿಳಿದಿಲ್ಲ. ವನಿಂದು ಹಸರಂಗ ವಿಕೆಟ್ ಪಡೆಯದಿದ್ದರೆ ತಂಡಕ್ಕೆ ಕಷ್ಟವಾಗಲಿದೆ. ಯುಜುವೇಂದ್ರ ಚಾಹಲ್ ಅನುಪಸ್ಥಿತಿ ಕಾಡುತ್ತದೆ.

ಕೊಹ್ಲಿ ಫಾರ್ಮ್ ನಿರ್ಣಾಯಕ
2022 ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಹೊಂದಿದ್ದರು. ಆದರೆ, ಏಷ್ಯಾಕಪ್ ನಂತರ ಅವರು ತಮ್ಮ ಫಾರ್ಮ್ ಕಂಡುಕೊಂಡರು. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅವರು ಅಜೇಯ 82 ರನ್ ಗಳಿಸುವ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ್ದರು. 16 ಟಿ20 ಪಂದ್ಯಗಳಲ್ಲಿ ಅವರು 70 ಸರಾಸರಿ ಮತ್ತು 142 ಸ್ಟ್ರೈಕ್‌ರೇಟ್‌ನಲ್ಲಿ 700 ರನ್ ಗಳಿಸಿದ್ದಾರೆ.
2023ರ ಐಪಿಎಲ್‌ನಲ್ಲಿ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಫಾರ್ಮ್ ಅತ್ಯಂತ ನಿರ್ಣಾಯಕವಾಗಿರುತ್ತದೆ, ಅವರು ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನವನ್ನು ಐಪಿಎಲ್‌ನಲ್ಲಿ ಮುಂದುವರೆಸಿದರೆ ಭಾರತಕ್ಕೆ ಗೆಲುವು ಸುಲಭವಾಗಲಿದೆ.
ರಜತ್ ಪಾಟಿದಾರ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು. ಎಲಿಮೇನಟರ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಮಿಂಚಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪಟಿದಾರ್ ಅದನ್ನು ಐಪಿಎಲ್‌ನಲ್ಲಿ ಮುಂದುವರೆಸಬೇಕಿದೆ.

ತಂಡವನ್ನು ಕಾಡುತ್ತಿದೆ ಗಾಯದ ಸಮಸ್ಯೆ
ಮೊಣಕಾಲು ಗಾಯಕ್ಕೆ ತುತ್ತಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಅವರು ಕಾಲಿಗೆ ಗಾಯಮಾಡಿಕೊಂಡ ನಂತರ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ.
ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗಾ ಅವರು ಅಂತರರಾಷ್ಟ್ರೀಯ ಬದ್ಧತೆಗಳಿಂದಾಗಿ ಮೊದಲ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರು ಅವರ ಮುಖ್ಯ ಸ್ಪಿನ್-ಬೌಲಿಂಗ್ ಆಯ್ಕೆಯಾಗಿದ್ದಾರೆ ಮತ್ತು ಅವರ ಅನುಪಸ್ಥಿತಿಯು ಖಂಡಿತವಾಗಿಯೂ ತಂಡವನ್ನು ಕಾಡಲಿದೆ.