ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ vs ತಮಿಳುನಾಡು ರಣಜಿ; ಟೀಮ್ ಇಂಡಿಯಾ ಆಟಗಾರರ ಮಧ್ಯೆ ಕಿತ್ತಾಟ

ಪಂದ್ಯದ ಬಳಿಕ ಕಚ್ಚಾಡಿದ ಕರ್ನಾಟಕ, ತಮಿಳುನಾಡು ರಣಜಿ ಆಟಗಾರರು | Oneindia Kannada

ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಮೊದಲ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆದ್ದು ಬೀಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯಾಟದಲ್ಲಿ ಗೆಲುವಿನ ಅವಕಾಶ ಎರಡೂ ತಂಡಗಳಿಗೂ ಇತ್ತು. ಕಡೇ ಹಂತದಲ್ಲಿ ಮೇಲುಗೈ ಸಾಧಿಸಿದ ಕರ್ನಾಟಕ ರೋಚಕವಾಗಿ ಗೆದ್ದು ಬೀಗಿದೆ. ಆದರೆ ಪಂದ್ಯದ ಬಳಿಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರರ ಮಧ್ಯೆ ನಡೆದ ಗಂಭೀರ ಮಾತಿನ ಚಕಮಕಿ ವಿವಾದದ ಸ್ವರೂಪ ಪಡೆದುಕೊಂಡಿದೆ.

ಚುಟುಕು ಮಾದರಿ, ಏಕದಿನ ಅಥವಾ ಟೆಸ್ಟ್‌ ಯಾವುದೇ ಮಾದರಿಯಿರಲಿ ಕರ್ನಾಟಕ ಮತ್ತು ತಮಿಳುನಾಡಿನ ಪಂದ್ಯ ಅಂದರೆ ಒಂದಷ್ಟು ಜಿದ್ದಾಜಿದ್ದಿನ ಘರ್ಷಣೆಗಳು ಸಾಮಾನ್ಯ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಈ ಘರ್ಷಣೆ ಮಿತಿಮೀರಿಹೋಗುವ ಹಂತ ತಲುಪಿದೆ. ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಜೊತೆ ತಮಿಳುನಾಡು ತಂಡದ ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ಗಂಭೀರ ಮಾತಿನ ಚಕಮಕಿ ನಡೆಸಿದ್ದಾರೆ.

ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ರೋಚಕ ಕದನ ಗೆದ್ದ ಕರ್ನಾಟಕ!ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ರೋಚಕ ಕದನ ಗೆದ್ದ ಕರ್ನಾಟಕ!

ಎರಡನೇ ಇನ್ನಿಂಗ್ಸ್‌ನಲ್ಲಿ ತಮಿಳುನಾಡಿಗೆ ಗೆಲ್ಲಲು 181 ರನ್‌ಗಳ ಸುಲಭ ಸವಾಲನ್ನು ಕರ್ನಾಟಕ ನೀಡಿತ್ತು. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಬಳಿಕ ಹಠಾತ್ ಕುಸಿತ ಕಂಡಿತು. ಈ ಸಂದರ್ಭದಲ್ಲಿ ಕರ್ನಾಟಕ ತಂಡದ ಆಟಗಾರರು ಅತಿಯಾಗಿ ಮನವಿಯನ್ನು ಮಾಡಿರುವುದು ಹಾಗೂ ಅತಿಯಾಗಿ ಮಾತನಾಡಿರುವುದು ದಿನೇಶ್ ಕಾರ್ತಿಕ್ ಆರೋಪವಾಗಿದ್ದು, ಇದೇ ದಿನೇಶ್ ಕಾರ್ತಿಕ್ ಅಸಮಾದಾನಕ್ಕೆ ಕಾರಣವಾಗಿದೆ.

ತಿಳಿಗೊಳಿಸಿದ ಅಂಪೈರ್‌ಗಳು

ತಿಳಿಗೊಳಿಸಿದ ಅಂಪೈರ್‌ಗಳು

ಗೆಲುವಿಗಾಗಿ ತೀವ್ರ ಪೈಪೋಟಿಯನ್ನು ಎರಡೂ ತಂಡಗಳು ತೀವ್ರ ಪೈಪೋಟಿಯನ್ನು ನಡೆಸಿದ್ದವು. ಆದರೆ ಕಡೆಗೆ ಕರ್ನಾಟಕ ಈ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಂಡಿತು. ಪಂದ್ಯ ಮುಕ್ತಾಯದ ಬಳಿಕ ಮುಖಾಮುಖಿಯಾದ ಕರ್ನಾಟಕ ನಾಯಕ ಕರುಣ್ ನಾಯರ್ ಹಾಗೂ ತಮಿಳುನಾಡು ತಂಡದ ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪಂದ್ಯದ ರೆಫ್ರಿ ಹಾಗೂ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.

ಮತ್ತೊಮ್ಮೆ ಕಿತ್ತಾಡಿಕೊಂಡ ಆಟಗಾರರು;

ಮತ್ತೊಮ್ಮೆ ಕಿತ್ತಾಡಿಕೊಂಡ ಆಟಗಾರರು;

ಇಷ್ಟಕ್ಕೇ ಇದು ಮುಗಿದು ಹೋಗಲಿಲ್ಲ. ಆ ಬಳಿಕ ಡ್ರೆಸ್ಸಿಂಗ್ ರೂಮ್ ಬಳಿ ಮತ್ತೊಮ್ಮೆ ಎರಡೂ ತಂಡಗಳ ಪ್ರಮುಖ ಆಟಗಾರರಾದ ಕರುಣ್ ನಾಯರ್ ಮತ್ತು ದಿನೇಶ್ ಕಾರ್ತಿಕ್ ಮುಖಾಮುಖಿಯಾದಾಗ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದೆ.ಕರ್ನಾಟಕ ತಂಡದ ಕೋಚ್‌ಗಳಾದ ಎಸ್ ಅರವಿಂದ್ ಮತ್ತು ಯೆರೇಗೌಡ ಇಬ್ಬರೂ ಆಟಗಾರರನ್ನು ಸಮಾದಾನ ಪಡಿಸಿದ್ದಾರೆ.

ಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋ

ಇದೆಲ್ಲಾ ಸಾಮಾನ್ಯ ಎಂದ ತಮಿಳುನಾಡು ನಾಯಕ

ಇದೆಲ್ಲಾ ಸಾಮಾನ್ಯ ಎಂದ ತಮಿಳುನಾಡು ನಾಯಕ

ಬಳಿಕ ಮಾತನಾಡಿದ ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್ " ಕರ್ನಾಟಕ ಮತ್ತು ತಮಿಳನಾಡು ನಡುವಿನ ಪಂದ್ಯಗಳಲ್ಲಿ ಈ ರೀತಿ ಪೈಪೋಟಿಗಳು ನಡೆಯುತ್ತಲೇ ಇರುತ್ತದೆ. ಹೀಗಾಗದಿದ್ದಗಲೇ ನಮಗೆ ಆಶ್ಚರ್ಯವಾಗುತ್ತದೆ" ಎಂದು ಹೇಳುವ ಮೂಲಕ ಇದೊಂದು ತೀರಾ ಸಾಮಾನ್ಯ ಘಟನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಕ್ರಮ ಕೈಗೊಳ್ಳುವ ಸಾಧ್ಯತೆ

ಕ್ರಮ ಕೈಗೊಳ್ಳುವ ಸಾಧ್ಯತೆ

ತೀವ್ರ ಪೈಪೋಟಿಯ ಪಂದ್ಯದ ಸಂದರ್ಭದಲ್ಲಿ ಮಾತಿನ ಚಕಮಕಿಗಳು ನಡೆಯುವುದು ಸಾಮಾನ್ಯ. ಇದು ಮಿತಿಮೀರಿದಾಗ ಅದಕ್ಕಾಗ ದಂಡವನ್ನೂ ತೆರಬೇಕಾಗುತ್ತದೆ. ಇದೇ ಪಂದ್ಯದಲ್ಲಿ ಮುರಳಿ ವಿಜಯ್ ಅವರು ಅಶಿಸ್ತಿನ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ 10 ಶೇಕಡ ದಂಡಕ್ಕೆ ಒಳಗಾಗಿದ್ದಾರೆ. ಈ ಮಾತಿನ ಚಕಮಕಿಗಳನ್ನು ಮೈದಾನದಾಚೆ ಕೊಂಡೊಯ್ಯಲು ಕ್ರೀಡಾಳುಗಳು ಮುಂದಾಗುವುದು ತೀರಾ ಕಡಿಮೆ. ನಿನ್ನೆಯ ಪಂದ್ಯದಲ್ಲಿ ಇದು ನಡೆದುಹೋಗಿದೆ. ಇದಕ್ಕಾಗಿ ಆಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೂ ಅಚ್ಚರಿಯಿಲ್ಲ.

Story first published: Friday, December 13, 2019, 13:36 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X