ಲೆಜೆಂಡ್ಸ್ ಲೀಗ್ 2022: ದಿಗ್ಗಜರ ಸೆಣೆಸಾಟಕ್ಕೆ ಅಖಾಡ ಸಿದ್ಧ: ಭಾಗವಹಿಸುವ ನಾಲ್ಕು ತಂಡಗಳು ಹಾಗೂ ನಾಯಕರು

ಒಂದೆಡೆ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಮೂಲಕ ದಿಗ್ಗಜ ಕ್ರಿಕೆಟಿಗರು ಸೆಣಸಾಟವನ್ನು ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಂದು ಮಾಜಿ ಕ್ರಿಕೆಟಿಗರ ಕ್ರಿಕೆಟ್ ಲೀಗ್ ಶರಂಬವಾಗುತ್ತಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿ ಶನಿವಾರದಿಂದ ಆರಂಭವಾಗುತ್ತಿದೆ. ಈ ಬಾರಿ ನಾಲ್ಕು ತಂಡಗಳು ಈ ಟೂರ್ನಿಯಲ್ಲಿ ಸೆಣೆಸಾಟವನ್ನು ನಡೆಸಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಶುಕ್ರವಾರ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಒಂದು ವಿಶೇಷ ಪಂದ್ಯ ನಡೆದಿದ್ದು ಇದರಲ್ಲಿ ಇಂಡಿಯಾ ಮಾಹರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಸೆಣೆಸಾಡಿದೆ. ಸ್ವಾತಂತ್ರ್ಯೋತ್ಸವದ 75 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಈ ವಿಶೇಷ ಪಂದ್ಯವನ್ನು ಆಯೋಜನೆ ಮಾಡಲಾಗಿದ್ದು ಇದರಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಗೆಲುವು ಸಾಧಿಸಿತ್ತು. ಇಂದಿನಿಂದ ಅಂದರೆ ಶನಿವಾರದಿಂದ ಈ ಟೂರ್ನಿಯ ಮುಖ್ಯ ಪಂದ್ಯಗಳು ನಡೆಯಲಿದೆ.

ಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದ ಎರಡು ಅತಿ ದೊಡ್ಡ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿಭಾರತ vs ಆಸ್ಟ್ರೇಲಿಯಾ: ವೃತ್ತಿ ಜೀವನದ ಎರಡು ಅತಿ ದೊಡ್ಡ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ

ಆರು ತಾಣಗಳಲ್ಲಿ ಪಂದ್ಯ

ಆರು ತಾಣಗಳಲ್ಲಿ ಪಂದ್ಯ

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗವಹಿಸುತ್ತಿದ್ದು ಟ್ರೋಫಿಗಾಗಿ ಸೆಣೆಸಾಟ ನಡೆಸಲಿದೆ. ಕೊಲ್ಕತ್ತಾ, ಲಕ್ನೋ, ನವದೆಹಲಿ, ಕಟಕ್ ಹಾಗೂ ಜೋದ್‌ಪುರದಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು ಎಲಿಮಿನೇಟರ್ ಹಾಗೂ ಪ್ಲೇಆಫ್ ಪಂದ್ಯಗಳು ಡೆಹ್ರಾಡೂನ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ತಂಡಗಳು ಹಾಗೂ ನಾಯಕರ ವಿವರ

ತಂಡಗಳು ಹಾಗೂ ನಾಯಕರ ವಿವರ

ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಈ ಬಾರಿ ನಾಲ್ಕು ತಂಡಗಳು ಭಾಗವಹಿಸಲಿದೆ. ಬಿಲ್ವಾರಾ ಕಿಂಗ್ಸ್, ಇಂಡಿಯಾ ಕ್ಯಾಪಿಟಲ್ಸ್, ಮಣಿಪಾಲ್ ಟೈಗರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಇರ್ಫಾನ್ ಪಠಾಣ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಕ್ರಮವಾಗಿ ಈ ತಂಡಗಳನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 5ರಂದು ಈ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಟಿ20 ವಿಶ್ವಕಪ್: ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವನ್ನು ಬೊಟ್ಟು ಮಾಡಿದ ಆಸಿಸ್ ಸ್ಟಾರ್!

ಭಿಲ್ವಾರಾ ಕಿಂಗ್ಸ್ ಸ್ಕ್ವಾಡ್ ಹೀಗಿದೆ

ಭಿಲ್ವಾರಾ ಕಿಂಗ್ಸ್ ಸ್ಕ್ವಾಡ್ ಹೀಗಿದೆ

ಇರ್ಫಾನ್ ಪಠಾಣ್ (ನಾಯಕ), ಯೂಸುಫ್ ಪಠಾಣ್, ಮಾಂಟಿ ಪನೇಸರ್, ನಮನ್ ಓಜಾ, ವಿಲಿಯಂ ಪೋರ್ಟರ್‌ಫೀಲ್ಡ್, ಸಮಿತ್ ಪಟೇಲ್, ಫಿಡೆಲ್ ಎಡ್ವರ್ಡ್ಸ್, ಮ್ಯಾಟ್ ಪ್ರಯರ್, ನಿಕ್ ಕಾಂಪ್ಟನ್, ಶ್ರೀಶಾಂತ್, ಟಿಮ್ ಬ್ರೆಸ್ನನ್, ಓವೈಸ್ ಶಾ, ಟಿನೋ ಬೆಸ್ಟ್, ಸುದೀಪ್ ತ್ಯಾಗಿ.

ಇಂಡಿಯಾ ಕ್ಯಾಪಿಟಲ್ಸ್ ಸಂಪೂರ್ಣ ತಂಡ

ಇಂಡಿಯಾ ಕ್ಯಾಪಿಟಲ್ಸ್ ಸಂಪೂರ್ಣ ತಂಡ

ಗೌತಮ್ ಗಂಭೀರ್(ನಾಯಕ), ರವಿ ಬೋಪಾರ, ಪ್ರವೀಣ್ ತಾಂಬೆ, ದಿನೇಶ್ ರಾಮ್ದಿನ್, ಅಶ್ಗರ್ ಅಫ್ಘಾನ್, ಮಿಚೆಲ್ ಜಾನ್ಸನ್, ಲಿಯಾಮ್ ಪ್ಲಂಕೆಟ್, ರಜತ್ ಭಾಟಿಯಾ, ಹ್ಯಾಮಿಲ್ಟನ್ ಮಸಕಾಜ್ಡಾ, ಮಶ್ರಫೆ ಮೊರ್ತಜಾ, ಜಾನ್ ಮೂನಿ, ಪ್ರಾಸ್ಪರ್ ಉತ್ಸೇಯಾ, ರಾಸ್ ಟೇಲರ್, ಜಾಕ್ವೆಸ್ ಕಾಲಿಸ್, ಫರ್ವೀಜ್ ಮಹರೂಫ್, ಪಂಕಜ್ ಸಿಂಗ್.

ಇವರೇ ನೋಡಿ ಈವರೆಗಿನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರು

ಮಣಿಪಾಲ್ ಟೈಗರ್ಸ್ ಸ್ಕ್ವಾಡ್

ಮಣಿಪಾಲ್ ಟೈಗರ್ಸ್ ಸ್ಕ್ವಾಡ್

ಹರ್ಭಜನ್ ಸಿಂಗ್ (ನಾಯಕ), ಬ್ರೆಟ್ ಲೀ, ಮುತ್ತಯ್ಯ ಮುರಳೀಧರನ್, ಫಿಲ್ ಮಸ್ಟರ್ಡ್, ಮೊಹಮ್ಮದ್ ಕೈಫ್, ರಿಯಾನ್ ಸೈಡ್‌ಬಾಟಮ್, ಲ್ಯಾನ್ಸ್ ಕ್ಲೂಸೆನರ್, ಡಿಮಿಟ್ರಿ ಮಸ್ಕರೇನ್ಹಸ್, ರೋಮೇಶ್ ಕಲುವಿತಾರಣ, ಡೇರೆನ್ ಸಾಮಿ, ಕೋರಿ ಆಂಡರ್ಸನ್, ಇಮ್ರಾನ್ ತಾಹಿರ್, ರೀತೀಂದರ್ ಸೋಧಿ, ಪರ್ವಿಂದರ್ ಅವಾನಾ, ವಿಆರ್‌ವಿ ಸಿಂಗ್.

ಗುಜರಾತ್ ಜೈಂಟ್ಸ್ ಸ್ಕ್ವಾಡ್ ಹೀಗಿದೆ

ಗುಜರಾತ್ ಜೈಂಟ್ಸ್ ಸ್ಕ್ವಾಡ್ ಹೀಗಿದೆ

ವೀರೇಂದ್ರ ಸೆಹ್ವಾಗ್ (ನಾಯಕ), ಕ್ರಿಸ್ ಗೇಲ್, ಪಾರ್ಥಿವ್ ಪಟೇಲ್, ಅಜಂತಾ ಮೆಂಡಿಸ್, ಮನ್ವಿಂದರ್ ಬಿಸ್ಲಾ, ಲೆಂಡ್ಲ್ ಸಿಮನ್ಸ್, ಮಿಚೆಲ್ ಮೆಕ್‌ಕ್ಲೆನಾಘನ್, ಸ್ಟುವರ್ಟ್ ಬಿನ್ನಿ, ಕೆವಿನ್ ಒ'ಬ್ರೇನ್, ಡೇನಿಯಲ್ ವೆಟ್ಟೋರಿ, ಅಶೋಕ್ ದಿಂಡಾ, ಜೋಗಿಂದರ್ ಶರ್ಮಾ, ಗ್ರೇಮ್ ಸ್ವಾನ್, ರಿಚರ್ಡ್ ಲೆವಿ, ಕ್ರಿಸ್ ಟ್ರೆಮ್‌ಲೆಟ್, ಎಲ್‌ಟನ್ ಚಿಗುಲೆಟ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 17, 2022, 11:24 [IST]
Other articles published on Sep 17, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X