ದ್ರಾವಿಡ್ ಮಾತನ್ನು ಕೇಳಲೇಬಾರದು ಎಂದು ಮುರಳೀಧರನ್ ಬಳಿ ನೋವು ಹಂಚಿಕೊಂಡಿದ್ದ ಸೆಹ್ವಾಗ್!

ಶಾಂತಮೂರ್ತಿ ದ್ರಾವಿಡ್ ಬಗ್ಗೆ ಆಕ್ರೋಶಗೊಂಡು ಸೆಹ್ವಾಗ್ ಹೀಗೆ ಹೇಳಬಾರ್ದಿತ್ತು | Oneindia Kannada

ರಾಹುಲ್ ದ್ರಾವಿಡ್ 'ದಿ ಗ್ರೇಟ್ ವಾಲ್ ಆಫ್ ಇಂಡಿಯಾ' ಎಂದೇ ಖ್ಯಾತಿಯನ್ನು ಪಡೆದಿರುವ ದಿಗ್ಗಜ ಕ್ರಿಕೆಟಿಗ. ತನ್ನ ಇಡೀ ಕ್ರಿಕೆಟ್ ಜೀವನದಲ್ಲಿಯೇ ಯಾವುದೇ ರೀತಿಯ ಕಪ್ಪು ಚುಕ್ಕೆಯನ್ನು ಹೊಂದಿಲ್ಲದ ರಾಹುಲ್ ದ್ರಾವಿಡ್ ಹಲವಾರು ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ. ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೇ, ಎಲ್ಲರಿಂದಲೂ ಪ್ರೀತಿ ಮತ್ತು ಗೌರವವನ್ನು ಪಡೆದುಕೊಳ್ಳುವಂತಹ ಅತ್ಯುತ್ತಮ ಕ್ರಿಕೆಟರ್ ಆಗಬೇಕು ಎಂದು ಗುರಿ ಇಟ್ಟುಕೊಂಡವರು ಕಡ್ಡಾಯವಾಗಿ ರಾಹುಲ್ ದ್ರಾವಿಡ್ ಜೀವನ ಶೈಲಿಯನ್ನು ಅನುಸರಿಸಲೇಬೇಕು ಎಂದರೆ ತಪ್ಪಾಗಲಾರದು. ಮೈದಾನದಲ್ಲಿ ಆಗಲಿ ಅಥವಾ ಹೊರಗಿನ ಬದುಕಿನಲ್ಲಾಗಲಿ ರಾಹುಲ್ ದ್ರಾವಿಡ್ ಯಾವುದೇ ವಿವಾದವನ್ನು ಮಾಡಿಕೊಳ್ಳದೆ ತಾವಾಯಿತು ತಮ್ಮ ಆಟವಾಯಿತು ಎಂದು ಇದ್ದಂತಹ ವ್ಯಕ್ತಿ. ಈಗಲೂ ಟೀಂ ಇಂಡಿಯಾ ಬಿ ಮತ್ತು ಅಂಡರ್ 19 ಭಾರತ ತಂಡಗಳಿಗೆ ತರಬೇತುದಾರನಾಗಿ ಸೇವೆ ಸಲ್ಲಿಸುತ್ತಿರುವ ರಾಹುಲ್ ದ್ರಾವಿಡ್ ಕುರಿತು ಯುವ ಕ್ರಿಕೆಟಿಗರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಈ ತರಹದ ಅತ್ಯುತ್ತಮ ಸಲಹೆಗಾರ ಮತ್ತು ಶಾಂತ ಸ್ವರೂಪಿ ಕ್ರಿಕೆಟಿಗನನ್ನು ನೀವು ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ ಎಂಬ ಮಾತುಗಳನ್ನು ದ್ರಾವಿಡ್ ತರಬೇತಿಯಡಿಯಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿರುವ ಯುವ ಆಟಗಾರರು ಹೇಳುತ್ತಾರೆ.

ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!

ಹೀಗೆ ಯಾವುದೇ ವಿವಾದಗಳನ್ನು ಹೊಂದಿಲ್ಲದ ರಾಹುಲ್ ದ್ರಾವಿಡ್ ಕುರಿತು ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಈ ಹಿಂದೆ ಹೇಳಿದ್ದ ಮಾತುಗಳನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಇನ್ನು ಮುಂದೆ ಯಾವತ್ತೂ ಕೂಡ ರಾಹುಲ್ ದ್ರಾವಿಡ್ ಮಾತನ್ನು ಕೇಳಲೇಬಾರದು ಎಂದು ಮುತ್ತಯ್ಯ ಮುರಳೀಧರನ್ ಬಳಿ ವಿರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದರಂತೆ. ಹೌದು ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಕುರಿತು ಈ ರೀತಿ ತನ್ನ ಬಳಿ ಮಾತನಾಡಿದ್ದರು ಎಂದು ಸ್ವತಃ ಮುತ್ತಯ್ಯ ಮುರಳೀಧರನ್ ಹೇಳಿಕೊಂಡಿದ್ದಾರೆ.

ಐಪಿಎಲ್ 2021: ಆರ್‌ಸಿಬಿಗೆ ಆಘಾತ; ತಂಡದ ಪ್ರಮುಖ ಆಟಗಾರ ಟೂರ್ನಿಯಿಂದಲೇ ಔಟ್!ಐಪಿಎಲ್ 2021: ಆರ್‌ಸಿಬಿಗೆ ಆಘಾತ; ತಂಡದ ಪ್ರಮುಖ ಆಟಗಾರ ಟೂರ್ನಿಯಿಂದಲೇ ಔಟ್!

ಈ ಹಿಂದೆ ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ 293 ರನ್ ಗಳಿಸಿದ್ದ ವಿರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸುವಲ್ಲಿ ವಿಫಲರಾಗುವ ಮೂಲಕ ಟೆಸ್ಟ್ ಇತಿಹಾಸದಲ್ಲಿಯೇ ಅತಿಹೆಚ್ಚು ( 3 ) ತ್ರಿಶತಕಗಳನ್ನು ಬಾರಿಸಿರುವ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದರಲ್ಲಿ ಕೊನೆ ಹಂತದಲ್ಲಿ ಎಡವಿದ್ದರು. ಹೀಗೆ ಮಹತ್ತರವಾದ ದಾಖಲೆಯೊಂದನ್ನು ಮಾಡುವುದರಲ್ಲಿ ವಿಫಲರಾದಾಗ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಮಾತನ್ನು ಕೇಳಲೇಬಾರದಿತ್ತು ಎಂದು ಮುತ್ತಯ್ಯ ಮುರಳೀಧರನ್ ಬಳಿ ಹಂಚಿಕೊಂಡಿದ್ದರಂತೆ.

ಲಾರ್ಡ್ಸ್ ಪಂದ್ಯಕ್ಕೆ ಸಜ್ಜಾಗಿದ್ದ ತನ್ನನ್ನು ತಂಡದಿಂದ ಹೊರಹಾಕಿದ್ದರ ಹಿಂದಿನ ಸತ್ಯ ಬಿಚ್ಚಿಟ್ಟ ಅಶ್ವಿನ್ಲಾರ್ಡ್ಸ್ ಪಂದ್ಯಕ್ಕೆ ಸಜ್ಜಾಗಿದ್ದ ತನ್ನನ್ನು ತಂಡದಿಂದ ಹೊರಹಾಕಿದ್ದರ ಹಿಂದಿನ ಸತ್ಯ ಬಿಚ್ಚಿಟ್ಟ ಅಶ್ವಿನ್

ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಕುರಿತು ಈ ರೀತಿಯಾಗಿ ಮುತ್ತಯ್ಯ ಮುರಳೀಧರನ್ ಬಳಿ ಹೇಳಲು ಕಾರಣವೇನು ಎಂಬ ಮಾಹಿತಿ ಮುಂದೆ ಇದೆ ಓದಿ..

ಸೆಹ್ವಾಗ್ ಬೇಸರಕ್ಕೆ ಕಾರಣವಿದು..

ಸೆಹ್ವಾಗ್ ಬೇಸರಕ್ಕೆ ಕಾರಣವಿದು..

2009ರಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸವನ್ನು ಕೈಗೊಂಡಿದ್ದಾಗ ಮುಂಬೈನ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರನಾಗಿ ಬಂದಿದ್ದ ವಿರೇಂದ್ರ ಸೆಹ್ವಾಗ್ ಅಬ್ಬರದ ಬ್ಯಾಟಿಂಗ್ ನಡೆಸಿ 293 ರನ್ ಗಳಿಸಿದ್ದರು. ಈ ಸಂದರ್ಭದಲ್ಲಿ ವಿರೇಂದ್ರ ಸೆಹ್ವಾಗ್ ಜತೆ ರಾಹುಲ್ ದ್ರಾವಿಡ್ ಕೂಡ ಕಣದಲ್ಲಿದ್ದರು. ಇನ್ನೇನು ಕೆಲ ಸಮಯದಲ್ಲಿಯೇ ದಿನದಾಟ ಅಂತ್ಯಗೊಳ್ಳಲಿರುವ ಕಾರಣ ವಿರೇಂದ್ರ ಸೆಹ್ವಾಗ್ ಆ ದಿನವೇ 300 ರನ್ ಬಾರಿಸುವ ಯತ್ನದಲ್ಲಿದ್ದರು. ಆದರೆ ವಿರೇಂದ್ರ ಸೆಹ್ವಾಗ್ ಬಳಿ ಬಂದ ರಾಹುಲ್ ದ್ರಾವಿಡ್ 'ದಿನದಾಟ ಮುಗಿಯುವ ಹಂತದಲ್ಲಿದೆ, ಹೀಗಾಗಿ ಸದ್ಯಕ್ಕೆ ಕಷ್ಟದ ಕೆಲಸಕ್ಕೆ ಕೈ ಹಾಕುವುದು ಬೇಡ ಮರುದಿನ ತ್ರಿಶತಕ ಬಾರಿಸಲು ಪ್ರಯತ್ನಿಸು' ಎಂದು ಸೆಹ್ವಾಗ್‌ಗೆ ಸಲಹೆ ನೀಡಿದ್ದರಂತೆ. ರಾಹುಲ್ ದ್ರಾವಿಡ್ ಮಾತಿನಂತೆ ಆ ದಿನದಂದು ತ್ರಿಶತಕ ಬಾರಿಸಲು ಪ್ರಯತ್ನಿಸದೇ ದಿನದಾಟವನ್ನು ಮುಗಿಸಿದ ವಿರೇಂದ್ರ ಸೆಹ್ವಾಗ್ ಮರುದಿನ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುತ್ತಯ್ಯ ಮುರಳೀಧರನ್ ಎಸೆತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ 7 ರನ್ ಅಂತರದಲ್ಲಿ ತ್ರಿಶತಕವನ್ನು ಕೈ ತಪ್ಪಿಸಿಕೊಂಡು ವಿಶ್ವದಾಖಲೆ ಮಾಡುವಲ್ಲಿ ವಿರೇಂದ್ರ ಸೆಹ್ವಾಗ್ ಎಡವಿದ್ದರು. 'ಹೀಗೆ ಹಿಂದಿನ ದಿನ ರಾಹುಲ್ ದ್ರಾವಿಡ್ ಮಾತನ್ನು ಕೇಳಿ ತಪ್ಪು ಮಾಡಿದೆ, ನಿನ್ನೆಯೇ ನಾನು ತ್ರಿಶತಕವನ್ನು ಬಾರಿಸಬೇಕಿತ್ತು. ಯಾವುದೇ ಕಾರಣಕ್ಕೂ ಇನ್ನು ಮುಂದೆ ರಾಹುಲ್ ದ್ರಾವಿಡ್ ಮಾತನ್ನು ಕೇಳಲೇಬಾರದು' ಎಂದು ವಿರೇಂದ್ರ ಸೆಹ್ವಾಗ್ ಮುತ್ತಯ್ಯ ಮುರಳೀಧರನ್ ಜೊತೆ ತಮ್ಮ ಬೇಸರವನ್ನು ತೋಡಿಕೊಂಡಿದ್ದರಂತೆ. ಹೀಗೆ ಈ ಹಿಂದೆ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಮಾತು ಕೇಳಿ ವಿಶ್ವದಾಖಲೆಯೊಂದನ್ನು ಕೈ ತಪ್ಪಿಸಿಕೊಂಡಿದ್ದರ ಕುರಿತು ಮುತ್ತಯ್ಯ ಮುರಳೀಧರನ್ ಮಾತನಾಡಿದ್ದಾರೆ.

ವಿರೇಂದ್ರ ಸೆಹ್ವಾಗ್ ಬೇರೆ ಬ್ಯಾಟ್ಸ್‌ಮನ್‌ಗಳ ರೀತಿ ಅಲ್ಲ

ವಿರೇಂದ್ರ ಸೆಹ್ವಾಗ್ ಬೇರೆ ಬ್ಯಾಟ್ಸ್‌ಮನ್‌ಗಳ ರೀತಿ ಅಲ್ಲ

ಇನ್ನೂ ಮುಂದುವರೆದು ವಿರೇಂದ್ರ ಸೆಹ್ವಾಗ್ ಕುರಿತು ಮಾತನಾಡಿರುವ ಮುತ್ತಯ್ಯ ಮುರಳೀಧರನ್ 'ಸೆಹ್ವಾಗ್ ಇತರ ಆಟಗಾರರ ರೀತಿ ಅಲ್ಲ, ಬೇರೆ ಆಟಗಾರರು 98 ಅಥವಾ 99 ರನ್ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕದೇ ಮೊದಲು ಶತಕವನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ವೀರೇಂದ್ರ ಸೆಹ್ವಾಗ್ ಹಾಗಲ್ಲ 99 ರನ್ ಬಾರಿಸಿದ್ದರೂ ಸಹ ಒಂದು ರನ್ ಓಡುವ ಪ್ರಯತ್ನ ಮಾಡದೇ ಬೌಂಡರಿ ಬಾರಿಸುವ ಯತ್ನವನ್ನು ನಡೆಸುತ್ತಿದ್ದರು' ಎಂದು ಹೇಳಿಕೊಂಡಿದ್ದಾರೆ.

ಎರಡು ಟೆಸ್ಟ್ ತ್ರಿಶತಕ ಬಾರಿಸಿದ್ದಾರೆ ಸೆಹ್ವಾಗ್

ಎರಡು ಟೆಸ್ಟ್ ತ್ರಿಶತಕ ಬಾರಿಸಿದ್ದಾರೆ ಸೆಹ್ವಾಗ್

ಈ ಹಿಂದೆ ಹೇಳಿದಂತೆ ಟೆಸ್ಟ್ ಕ್ರಿಕೆಟ್‍ನಲ್ಲಿ ತಮ್ಮ ಮೂರನೇ ತ್ರಿಶತಕವನ್ನು 7 ರನ್‌ಗಳ ಅಂತರದಲ್ಲಿ ಕೈ ತಪ್ಪಿಸಿಕೊಂಡಿದ್ದ ವಿರೇಂದ್ರ ಸೆಹ್ವಾಗ್ ಅದಕ್ಕೂ ಮುನ್ನ ಪಾಕಿಸ್ತಾನ ಮತ್ತು ಸೌತ್ ಆಫ್ರಿಕಾ ತಂಡಗಳ ವಿರುದ್ಧ ತ್ರಿಶತಕ ಬಾರಿಸಿ ಮಿಂಚಿದ್ದರು. 2004ರಲ್ಲಿ ಪಾಕಿಸ್ತಾನದ ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ವಿರೇಂದ್ರ ಸೆಹ್ವಾಗ್ 375 ಎಸೆತಗಳಲ್ಲಿ 309 ರನ್ ಚಚ್ಚಿದ್ದರು. ಹಾಗೂ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ವಿರೇಂದ್ರ ಸೆಹ್ವಾಗ್ 304 ಎಸೆತಗಳಲ್ಲಿ 319 ರನ್ ಬಾರಿಸಿ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ತ್ರಿಶತಕವನ್ನು ಪೂರೈಸಿಕೊಂಡಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 21:28 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X