ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Azhar Ali : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಪಾಕಿಸ್ತಾನದ ಮಾಜಿ ನಾಯಕ ಅಜರ್ ಅಲಿ

Pakistan cricketer Azhar Ali announces retirement from international cricket

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯವೇ ತನ್ನ ಅಂತಾರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ ಎಂದು ಅಜರ್ ಅಲಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕರಾಚಿಯಲ್ಲಿ ಶನಿವಾರದಿಂದ ಆರಂಭವಾಗಲಿದೆ.

37ರ ಹರೆಯದ ಅಜರ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಇದು ಅತ್ಯಂತ ಸೂಕ್ತವಾದ ಸಮಯ, ಯುವ ಆಟಗಾರರಿಗೆ ಇದರಿಂದಾಗಿ ಅವಕಾಶ ದೊರೆಯಲಿದೆ ಎಂದಿದ್ದಾರೆ. ಅಜರ್ ಅಲಿ ಏಕದಿನ ಕ್ರಿಕೆಟ್ ಮಾದರಿಯಿಂದ 2018ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. 2016ರಿಂದ 2020ರ ಅವಧಿಯಲ್ಲಿ ಅಜರ್ ಅಲಿ 9 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿIPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಪಾಕ್ ಪರ ಅಲಿ ಅತ್ಯುತ್ತಮ ಸಾಧನೆ

ಪಾಕ್ ಪರ ಅಲಿ ಅತ್ಯುತ್ತಮ ಸಾಧನೆ

ಈವರೆಗೆ 96 ಪಂದ್ಯಗಳ ಪಾಕಿಸ್ತಾನ ತಂಡವನ್ನು ಅಜರ್ ಅಲಿ ಪ್ರತಿನಿಧಿಸಿದ್ದು 42.49 ರ ಸರಾಸರಿಯಲ್ಲಿ 7,097 ರನ್ ಗಳಿಸಿದ್ದಾರೆ. ಈ ಮೂಲಕ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಯೂನಿಸ್ ಖಾನ್ (10,099), ಜಾವೇದ್ ಮಿಯಾಂದಾದ್ (8,832), ಇಂಜಮಾಮ್-ಉಲ್-ಹಕ್ (8,829) ಮತ್ತು ಮೊಹಮ್ಮದ್ ಯೂಸುಫ್ (7,530) ನಂತರ ಪಾಕಿಸ್ತಾನದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.

Flashback 2022: ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್‌ಗಳು

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಅಜರ್

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಅಜರ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಜರ್ ಅಲಿ 67 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಗೆದ್ದುಕೊಂಡಿತ್ತು. ಆದರೆ ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಜರ್ ಅಲಿ ಅವಕಾಶ ಕಳೆದುಕೊಂಡಿದ್ದರು. ಈ ಪಂದ್ಯದಲ್ಲಿಯೂ ಸೋಲು ಅನುಭವಿಸಿದ ಪಾಕಿಸ್ತಾನ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರವಾಸಿಗರಿಗೆ ಬಿಟ್ಟುಕೊಟ್ಟಿದೆ. ಇದೀಗ ಸರಣಿಯ ಅಂತಿಮ ಪಂದ್ಯದಲ್ಲಿ ವೈಟ್‌ವಾಶ್ ಮುಖಭಂಗದಿಂದ ಹೊರಬರುವ ಪ್ರಯತ್ನ ನಡೆಸಲಿದೆ.

IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಇದು ಶ್ರೇಷ್ಠ ಗೌರವ ಎಂದ ಪಾಕ್ ಕ್ರಿಕೆಟಿಗ

ಇದು ಶ್ರೇಷ್ಠ ಗೌರವ ಎಂದ ಪಾಕ್ ಕ್ರಿಕೆಟಿಗ

"ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ದೊರೆತ ಅವಕಾಶ ನನಗೆ ದೊಡ್ಡ ಗೌರವವಾಗಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಠಿಣವಾಗಿರುತ್ತದೆ. ಸಾಕಷ್ಟು ಆಲೋಚಿಸಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಇದು ಸೂಕ್ತ ಸಂದರ್ಭ ಎಂದು ನಾನು ನಿರ್ಧಿರಿಸಿದ್ದೇನೆ" ಎಂದು ಅಜರ್ ಅಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದು ಅಜರ್ ಅಲಿ "ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅಂದುಕೊಂಡಿದ್ದ ಬಹುತೇಕ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ಅನೇಕ ಕ್ರಿಕೆಟಿಗರಿಗೆ ತಮ್ಮ ದೇಶಗಳನ್ನು ಮುನ್ನಡೆಸುವ ಅವಕಾಶ ದೊರೆಯುವುದಿಲ್ಲ. ಇಂಥಾ ಸಂದರ್ಭದಲ್ಲಿ ನನಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಿತು. ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಬಾಲ್ಯದಲ್ಲಿ ಲೆಗ್ ಸ್ಪಿನ್ನರ್ ಆಗಿ ಕ್ರಿಕೆಟ್ ಆರಂಭಿಸಿದ ನಾನು ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿ ಅವಕಾಶ ಪಡೆದುಕೊಂಡೆ. ನಾನು ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಗಳಿಸಿದ್ದೇನೆ. ಇದನ್ನು ಎಂದಿಗೂ ಸ್ಮರಿಸಿಕೊಳ್ಳುತ್ತೇನೆ" ಎಂದಿದ್ದಾರೆ.

Story first published: Friday, December 16, 2022, 15:41 [IST]
Other articles published on Dec 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X