ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆಗಾಗಿ ಕೊಹ್ಲಿ ಜೊತೆ ಸೇರಿದ ಪಾಕ್ ಕ್ರಿಕೆಟರ್ ಬಾಬರ್ ಅಝಾಮ್

Pakistan’s Babar Azam surpasses Javed Miandad to achieve huge ODI milestone

ರಾಚಿ, ಸೆಪ್ಟೆಂಬರ್ 30: ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಗಡಿ ದಾಟಿದ ಮೊದಲ ಪಾಕಿಸ್ತಾನ ಆಟಗಾರನಾಗಿ ಬಾಬರ್ ಅಝಾಮ್ ಗುರುತಿಸಿಕೊಂಡಿದ್ದಾರೆ. ಸೋಮವಾರ (ಸೆಪ್ಟೆಂಬರ್ 30) ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮೆರೆದಿದ್ದಾರೆ.

ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!

ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಅಝಾಮ್ 105 ಎಸೆತಗಳಿಗೆ 115 ರನ್ ಬಾರಿಸಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ ವೇಗದಲ್ಲಿ 1,000 ರನ್ ದಾಖಲೆ ನಿರ್ಮಿಸಿದ್ದ ಪಾಕ್‌ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಸಾಧನೆಯನ್ನು ಬಾಬರ್ ಮೀರಿಸಿದ್ದಾರೆ.

ಶ್ರೀಲಂಕಾ vs ಪಾಕ್‌, 2ನೇ ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್

1
46780

ಜಾವೆದ್ ಮಿಯಾಂದಾದ್ 1987ರಲ್ಲಿ ಏಕದಿನ 1,000 ರನ್ ಪೂರೈಸಲು 21 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ಆದರೆ ಬಾಬರ್ ಇದೇ ಸಾಧನೆಗೆ 19 ಇನ್ನಿಂಗ್ಸ್‌ ಬಳಸಿಕೊಂಡಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ಬಾಬರ್ ತನ್ನ 11ನೇ ಏಕದಿನ ಶತಕ ಪೂರೈಸಿಕೊಂಡಂತಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ಅಂದ್ರೆ ಶ್ರೀಶಾಂತ್‌ಗೆ ಭಯಂಕರ ದ್ವೇಷವಂತೆ!ಚೆನ್ನೈ ಸೂಪರ್ ಕಿಂಗ್ಸ್‌ ಅಂದ್ರೆ ಶ್ರೀಶಾಂತ್‌ಗೆ ಭಯಂಕರ ದ್ವೇಷವಂತೆ!

2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಬಾರಿಸಿದ ಇನ್ನುಳಿದ ಕ್ರಿಕೆಟರ್‌ಗಳಲ್ಲಿ ಭಾರತದ ವಿರಾಟ್ ಕೊಹ್ಲಿ (1,288 ರನ್), ರೋಹಿತ್ ಶರ್ಮಾ (1,232), ಆಸ್ಟ್ರೇಲಿಯಾದ ಆ್ಯರನ್ ಫಿಂಚ್ (1,141) ಮತ್ತು ಉಸ್ಮಾನ್ ಖವಾಜಾ (1,141) ಇದ್ದಾರೆ. ಬಾಬರ್ ಶತಕ, ಫಖರ್ ಝಮಾನ್ ಅರ್ಧ ಶತಕದೊಂದಿಗೆ (54 ರನ್‌) ಪಾಕಿಸ್ಥಾನ 50 ಓವರ್‌ಗೆ 7 ವಿಕೆಟ್‌ ಕಳೆದು 305 ರನ್ ಮಾಡಿತ್ತು.

Story first published: Monday, September 30, 2019, 22:11 [IST]
Other articles published on Sep 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X