ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸಲಿ ಎಂದು ಪಾಕಿಸ್ತಾನ ಬಯಸುತ್ತಿದೆ, ಏಕೆಂದ್ರೆ ಭಾರತ ಬಂದ್ರೆ ತಮಗೆ ಉಳಿಗಾಲವಿಲ್ಲ ಎಂಬ ಅರಿವಿದೆ!

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಸೆಮಿಫೈನಲ್‌ನಲ್ಲಿ ಗೆದ್ದಿರುವ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. 2009ರ ಬಳಿಕ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಪಾಕಿಸ್ತಾನ 13 ವರ್ಷಗಳ ಬಳಿಕ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿದೆ.

ಗುರುವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಎರಡನೇ ಸೆಮಿಫೈನಲ್‌ ಕಾದಾಟಕ್ಕೆ ರೆಡಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದ ಭಾನುವಾರ ಸೂಪರ್ ಸಂಡೇ ಆಗಿ ಪರಿಣಮಿಸಲಿದೆ. ಕ್ರಿಕೆಟ್‌ ಲೋಕದ ಬದ್ಧ ಎದುರಾಳಿಗಳು ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾದ್ರೆ ಆ ಪಂದ್ಯದ ರೋಚಕತೆಯನ್ನು ಅಭಿಮಾನಿಗಳಲ್ಲಿ ಕಾಣಬಹುದಾಗಿದೆ. ವಿಶ್ವದ ಬೆಸ್ಟ್ ಕಾದಾಟವಾಗಲಿರುವ ಈ ಪಂದ್ಯವನ್ನ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಎದುರು ನೋಡುತ್ತಿದೆ. ಆದ್ರೆ ಅದಕ್ಕೂ ಮುನ್ನ ರೋಹಿತ್ ಪಡೆ ಆಂಗ್ಲರನ್ನು ಬಗ್ಗು ಬಡಿಯಬೇಕಿದೆ.

ಚೊಚ್ಚಲ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ-ಪಾಕ್ ಮುಖಾಮುಖಿ

ಚೊಚ್ಚಲ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ-ಪಾಕ್ ಮುಖಾಮುಖಿ

ಐಸಿಸಿ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಕೇವಲ ಒಂದು ಬಾರಿಯಷ್ಟೇ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿವೆ. ಅದೂ ಕೂಡ ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲೇ ಅನ್ನೋದು ವಿಶೇಷ. 2007ರ ಟಿ20 ವಿಶ್ವಕಪ್‌ನಲ್ಲಿ ಯುವ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಟ್ರೋಫಿ ಗೆದ್ದು ಕೊಟ್ಟಿರುವುದು ಇತಿಹಾಸ. ಪಾಕಿಸ್ತಾನ ಗೆಲುವಿನಂಚಿನಲ್ಲಿ ಬಂದು ಎಡವಿದ್ದನ್ನ ಯಾರೂ ಮರೆಯಲು ಸಾಧ್ಯವಿಲ್ಲ.

ಪಾಕ್ ಪರ ಮಿಸ್ಬಾ ಉಲ್‌ ಹೊಡೆದ ಚೆಂಡು ಶ್ರೀಶಾಂತ್ ಕೈ ಸೇರಿದ್ದು, ಕಾಮೆಂಟರಿಯಲ್ಲಿ ರವಿಶಾಸ್ತ್ರಿಯ ಅದ್ಭುತ ಸಂಭಾಷಣೆ, ಇಡೀ ಭಾರತದಾದ್ಯಂತ ಕಳೆಕಟ್ಟಿದ ಸಂಭ್ರಮವನ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಆದ್ರೆ ಅಂತಹದೊಂದು ಮತ್ತೊಂದು ಕ್ಷಣ ಸೃಷ್ಟಿಗೆ ಗುರುವಾರ ಉತ್ತರ ಸಿಗಲಿದೆ. ಭಾರತ ಇಂಗ್ಲೆಂಡ್ ತಂಡವನ್ನ ಮಣಿಸಿದ್ರೆ ಫೈನಲ್ ಪ್ರವೇಶಿಸಲಿದೆ.

''ಗುರುವಾರ ಮಾತ್ರ ಸೈಲೆಂಟಾಗಿರು ವಿರಾಟ್'' : ಇಂಗ್ಲೆಂಡ್ ಮಾಜಿ ಆಟಗಾರನ ಅಚ್ಚರಿಯ ಕಾಮೆಂಟ್!

ಭಾರತ ಫೈನಲ್ ಪ್ರವೇಶಿಸಿದ್ರೆ, ಒತ್ತಡ ಇಮ್ಮಡಿಗೊಳ್ಳಲಿದೆ: ವಾಸಿಂ ಜಾಫರ್

ಭಾರತ ಫೈನಲ್ ಪ್ರವೇಶಿಸಿದ್ರೆ, ಒತ್ತಡ ಇಮ್ಮಡಿಗೊಳ್ಳಲಿದೆ: ವಾಸಿಂ ಜಾಫರ್

ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿ ಹೇಗಿರಲಿದೆ ಎಂಬುದರ ಕುರಿತಾಗಿ ಮಾತನಾಡಿದ್ದಾರೆ. ಉಭಯ ತಂಡಗಳು ವಿಶ್ವಕಪ್ ಫೈನಲ್‌ ಪ್ರವೇಶಿಸಿದ್ರೆ ಒತ್ತಡವು ವಿಭಿನ್ನ ಮಾದರಿಯಲ್ಲಿರಲಿದೆ ಎಂದಿದ್ದಾರೆ. ಜೊತೆಗೆ ಸಾಮಾನ್ಯ ಪಂದ್ಯಕ್ಕಿಂತ ಎರಡು ಪಟ್ಟು ಹೆಚ್ಚು ಒತ್ತಡವಿರಲಿದೆ ಎಂದು ಅಂದಾಜಿಸಿದ್ದಾರೆ.

ಭಾರತವನ್ನ ಫೈನಲ್‌ನಲ್ಲಿ ಎದುರಿಸುವುದರ ಬದಲು ಇಂಗ್ಲೆಂಡ್ ತಂಡವನ್ನು ಎದುರಿಸಲು ಪಾಕಿಸ್ತಾನ ಇಷ್ಟಪಡುತ್ತದೆ. ಏಕೆಂದರೆ ಭಾರತಕ್ಕಿಂತ ಹೆಚ್ಚಿನ ಒತ್ತಡವು ಪಾಕಿಸ್ತಾನ ತಂಡದ ಮೇಲಿರಲಿದೆ ಎಂದು ವಾಸಿಂ ಜಾಫರ್ ಅಭಿಪ್ರಾಯ ಪಟ್ಟಿದ್ದಾರೆ.

'' ಉಭಯ ತಂಡಗಳ ಮುಖಾಮುಖಿಯಲ್ಲಿ ಬೇರೆ ರೀತಿಯಾದ ಒತ್ತಡವಿರುತ್ತದೆ. ಅದ್ರಲ್ಲೂ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಎದುರಾದ್ರೆ ಒತ್ತಡದ ಹಂತವು ಮತ್ತೊಂದು ರೀತಿಯಲ್ಲಿರುತ್ತದೆ. ಏಕೆಂದರೆ ಸೂಪರ್ 12 ಹಂತದಲ್ಲಿ ಎಂಸಿಜಿಯಲ್ಲಿ ಫೈನಲ್‌ ರೀತಿಯ ಒತ್ತಡವನ್ನ ಕಂಡಿದ್ದೇವೆ. ಹೀಗಾಗಿ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದ್ರೆ ಒತ್ತಡ ಎರಡು ಪಟ್ಟು ಹೆಚ್ಚಿರಲಿದೆ. ಪಾಕಿಸ್ತಾನ ಆಲೋಚನೆ ನೋಡುವುದಾದ್ರೆ, ಅವರು ಭಾರತಕ್ಕಿಂತ ಇಂಗ್ಲೆಂಡ್ ತಂಡವನ್ನು ಫೈನಲ್‌ನಲ್ಲಿ ನೋಡಲು ಬಯಸುತ್ತಾರೆ. ಆದ್ರೆ ಭಾರತ-ಪಾಕಿಸ್ತಾನ ಫೈನಲ್‌ ಮುಂದೆ ಮತ್ಯಾವುದು ಇಲ್ಲ'' ಎಂದು ಕ್ರಿಕ್‌ ಕ್ರ್ಯಾಕರ್‌ನ ರನ್‌ ಕೀ ರಣನೀತಿ ಕಾರ್ಯಕ್ರಮಕ್ಕೆ ವಾಸಿಂ ಜಾಫರ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌: ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಕೇನ್ ವಿಲಿಯಮ್ಸನ್

ಭಾರತ ಮೊದಲು ಇಂಗ್ಲೆಂಡ್ ವಿರುದ್ಧ ಗೆಲ್ಲಲಿ!

ಭಾರತ ಮೊದಲು ಇಂಗ್ಲೆಂಡ್ ವಿರುದ್ಧ ಗೆಲ್ಲಲಿ!

ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನ ಎದುರಿಸಲು ಯಾವುದೇ ತಂಡ ಯೋಚನೆ ಮಾಡಲೇಬೇಕಾಗುತ್ತದೆ. ಆದ್ರೆ ಅದಕ್ಕೂ ಮುನ್ನ ಭಾರತವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲು ಜಯಿಸಬೇಕು. ಇಂಗ್ಲೆಂಡ್ ತುಂಬಾ ಸಮತೋಲನದಿಂದ ಕೂಡಿರುವ ತಂಡವಾಗಿದ್ದು, ಭಾರತವು ತುಂಬಾ ಮುಂದಾಲೋಚನೆ ಮಾಡದೆ ಮೊದಲು ಇಂಗ್ಲೆಂಡ್ ತಂಡವನ್ನ ಮಣಿಸಬೇಕಿದೆ. ಆನಂತರವಷ್ಟೇ 13ನೇ ದಿನಾಂಕ(ಫೈನಲ್) ಕುರಿತು ಯೋಚಿಸಬೇಕು'' ವಾಸಿಂ ಜಾಫರ್ ತಿಳಿಸಿದ್ದಾರೆ.

ಗುರುವಾರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ -ಇಂಗ್ಲೆಂಡ್ ಮುಖಾಮುಖಿಯಾಗಿದ್ದು, ಅಡಿಲೇಡ್ ಓವಲ್‌ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 10, 2022, 12:16 [IST]
Other articles published on Nov 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X