ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರ್ನಾಟಕ- ತಮಿಳುನಾಡು ಕದನಕ್ಕೆ ವಾಂಖೆಡೆ ಸಜ್ಜು

By Mahesh

ಮುಂಬೈ, ಮಾ.5: ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ ತಮಿಳು ನಾಡು ನಡುವಿನ ರಣಜಿ ಕದನಕ್ಕೆ ವಾಂಖೆಡೆ ಸ್ಟೇಡಿಯಂ ಸಜ್ಜಾಗಿದೆ. ಉಭಯ ತಂಡಗಳು ಘೋಷಣೆಯಾಗಿದ್ದು, ತೀವ್ರ ತಯಾರಿ ನಡೆಸುತ್ತಿವೆ. ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಿಎಂ ಗೌತಮ್ ಗಾಯದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಸೇರ್ಪಡೆಗೊಂಡಿರುವ ಸುದ್ದಿ ಈಗಷ್ಟೇ ಬಂದಿದೆ.

ಪ್ರಸಕ್ತ ರಣಜಿ ಋತುವನ್ನು ತಮಿಳುನಾಡಿನ ವಿರುದ್ಧ ಆಡುವ ಮೂಲಕ ಆರಂಭಿಸಿದ ಕರ್ನಾಟಕ ಈಗ ಅಂತಿಮ ಪಂದ್ಯದಲ್ಲಿ ತಮಿಳುನಾಡನ್ನೇ ಎದುರಿಸುತ್ತಿರುವುದು ವಿಶೇಷ. ಡಿ.7, 2014ರಂದು ಆರಂಭವಾದ ಕರ್ನಾಟಕದ ರಣಜಿ ಸೀಸನ್ ಗೆಲುವಿನ ನಾಗಲೋಟಕ್ಕೆ ನಾಂದಿ ಹಾಡಿತು. ತಮಿಳುನಾಡಿನ ವಿರುದ್ಧ 285 ರನ್ ಬೃಹತ್ ಜಯ ದಾಖಲಿಸಿದ ವಿನಯ್ ಪಡೆ ಈಗ ಫೈನಲ್ ಗೆ ಸಜ್ಜಾಗಿದೆ. [ಮುಂಬೈ ಮಣಿಸಿದ ಕರ್ನಾಟಕ ಫೈನಲ್ ಗೆ]

Ranji Trophy final Tamil Nadu against Karnataka Wankhede Stadium

ಫೈನಲ್ ಹಾದಿ: ಕರ್ನಾಟಕದ ಫಲಿತಾಂಶ
* ತಮಿಳುನಾಡು ವಿರುದ್ಧ 285ರನ್ ಗಳ ಅಂತರದ ಜಯ, ಬೆಂಗಳೂರು
* ಬೆಂಗಾಳ ವಿರುದ್ಧ 9 ವಿಕೆಟ್ ಗಳ ಜಯ, ಕೋಲ್ಕತ್ತಾ
* ರೈಲ್ವೆಸ್ ವಿರುದ್ಧ 136 ರನ್ ಜಯ, ದೆಹಲಿ
* ಜಮ್ಮು ಮತ್ತು ಕಾಶ್ಮೀರ ವಿರುದ್ಧ ಇನ್ನಿಂಗ್ಸ್ ಹಾಗೂ 30 ರನ್ ಜಯ, ಹುಬ್ಬಳ್ಳಿ
* ಮಧ್ಯಪ್ರದೇಶ ವಿರುದ್ಧ ಡ್ರಾ, ಇಂದೋರ್
* ಬರೋಡಾ ವಿರುದ್ಧ ಡ್ರಾ, ಮೈಸೂರು
* ಉತ್ತರಪ್ರದೇಶ ವಿರುದ್ಧ ಡ್ರಾ, ಬೆಂಗಳೂರು
* ಮುಂಬೈ ವಿರುದ್ಧ ಡ್ರಾ, ಮುಂಬೈ
* ಅಸ್ಸಾಂ ವಿರುದ್ಧ ಡ್ರಾ, ಇಂದೋರ್(ಕ್ವಾರ್ಟರ್ ಫೈನಲ್)
* ಮುಂಬೈ ವಿರುದ್ಧ 112ರನ್ ಗಳ ಜಯ, ಬೆಂಗಳೂರು(ಸೆಮಿಫೈನಲ್)

ಪ್ರಮುಖ ಬ್ಯಾಟ್ಸ್ ಮನ್
* ರಾಬಿನ್ ಉತ್ತಪ್ಪ 10 ಪಂದ್ಯಗಳಲ್ಲಿ 912ರನ್ ಗರಿಷ್ಠ 156, ಸರಾಸರಿ 53.64, 2 ಸೆಂಚುರಿ, 5 ಅರ್ಧಶತಕ.
* ಶ್ರೇಯಸ್ ಗೋಪಾಲ್ 10 ಪಂದ್ಯಗಳಲ್ಲಿ 652 ರನ್ ಗರಿಷ್ಠ 145, ಸರಾಸರಿ 59.27, 2 ಸೆಂಚುರಿ, 3 ಅರ್ಧಶತಕ.
* ಕೆಎಲ್ ರಾಹುಲ್ 4 ಪಂದ್ಯಗಳಲ್ಲಿ 650ರನ್ ಗರಿಷ್ಠ 337, ಸರಾಸರಿ 81.25, 1 ಸೆಂಚುರಿ, 3 ಅರ್ಧಶತಕ. [ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]

ಪ್ರಮುಖ ಬೌಲರ್ಸ್
* ವಿನಯ್ ಕುಮಾರ್ 10 ಪಂದ್ಯಗಳಲ್ಲಿ 41 ವಿಕೆಟ್, ಶ್ರೇಷ್ಠ ಪ್ರದರ್ಶನ 20ಕ್ಕೆ6.
* ಎಸ್.ಅರವಿಂದ್ 10 ಪಂದ್ಯಗಳಲ್ಲಿ 39 ವಿಕೆಟ್, ಶ್ರೇಷ್ಠ ಪ್ರದರ್ಶನ 9ಕ್ಕೆ4.
* ಅಭಿಮನ್ಯು ಮಿಥುನ್ 09 ಪಂದ್ಯಗಳಲ್ಲಿ 36 ವಿಕೆಟ್, ಶ್ರೇಷ್ಠ ಪ್ರದರ್ಶನ 31 ಕ್ಕೆ 5.

KL Rahul


ಫೆ.28ರಂದು ಮಹಾರಾಷ್ಟ್ರ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಲೀಡ್ ಆಧಾರದ ಮೇಲೆ ಫೈನಲ್ ತಲುಪಿರುವ ತಮಿಳುನಾಡು ತಂಡಕ್ಕೆ ಅಭಿನವ್ ಮುಕುಂದ್ ನಾಯಕರಾಗಿದ್ದಾರೆ. 12ನೇ ಬಾರಿಗೆ ಫೈನಲ್ ತಲುಪಿರುವ ತಮಿಳುನಾಡು, ಹಾಲಿ ಚಾಂಪಿಯನ್ ಸೋಲಿಸುವ ಉತ್ಸಾಹದಲ್ಲಿದೆ.

ಮಾ.8ರಿಂದ 12ರ ತನಕ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುವ ರಣಜಿ ಫೈನಲ್ ನಲ್ಲಿ ಆಡಲಿರುವ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಕೆಳಗಿನಂತಿದೆ: [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]

ಕರ್ನಾಟಕ: ವಿನಯ್ ಕುಮಾರ್ (ನಾಯಕ), ಮನೀಶ್ ಪಾಂಡೆ(ಉಪ ನಾಯಕ), ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್, ಸಮರ್ಥ್ ಆರ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಶಿಶಿರ್ ಭವಾನೆ, ಮಿಥುನ್ ಎ, ಅರವಿಂದ್ ಎಸ್, ಶರತ್ ಎಚ್ ಎಸ್, ಸುಚಿತ್ ಜೆ, ಅವಿನಾಶ್ ಕೆಸಿ, ಅಭಿಷೇಕ್ ರೆಡ್ಡಿ, ಸಿಎಂ ಗೌತಮ್.

ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಮ್ಯಾನೇಜರ್: ಬಿ ಸಿದ್ದರಾಮು

ತಮಿಳುನಾಡು: ಅಭಿನವ್ ಮುಕುಂದ್(ನಾಯಕ), ಮುರಳಿ ವಿಜಯ್, ಸುಶೀಲ್, ಬಾಬಾ ಅಪರಾಜಿತ್, ದಿನೇಶ್ ಕಾರ್ತಿಕ್, ಬಾಬಾ ಇಂದ್ರಜಿತ್, ಆರ್ ಪ್ರಸನ್ನ, ಲಕ್ಷ್ಮಿಪತಿ ಬಾಲಾಜಿ, ವಿಜಯ್ ಶಂಕರ್, ಎಂ ರಂಗರಾಜನ್, ರಾಹಿಲ್ ಎಸ್ ಶಾ, ಆರ್ ಎ ಶ್ರೀನಿವಾಸ್, ಎಂ ಶಾರುಖ್ ಖಾನ್, ಎ ಅಶ್ವಿನ್, ಎಲ್ ವಿಘ್ನೇಶ್, ಪ್ರಸನ್ನ ಪರಮೇಶ್ವರನ್

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X