ಭಾರತದ ಪ್ಯಾರಾಲಂಪಿಕ್ಸ್ ಅಥ್ಲೀಟ್ಸ್‌ಗೆ ಬೆಂಬಲಿಸಲು ಸಚಿನ್ ತೆಂಡೂಲ್ಕರ್ ಕರೆ

ನನಿಗೆ ಡ್ರೆಸ್ ಸೆನ್ಸ್ ಹೇಳಿಕೊಟ್ಟಿದ್ದೆ ಇವರು! | Oneindia Kannada

ನವದೆಹಲಿ: ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅಥ್ಲೀಟ್‌ಗಳಿಗೆ ಚಿಯರ್ ಮಾಡಿ ಎಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕ್ರೀಡಾ ಪ್ರೇಮಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ಯಾರಾಲಂಪಿಕ್ಸ್ ಅಥ್ಲೀಟ್‌ಗಳಿಗೆ ನಿಮ್ಮ ಬೆಂಬಲ ಬೇಕು, ಅವರಿಗೆ ನೀವು ಚಿಯರ್ ಮಾಡಬೇಕು. ಆಗಲೇ ದೇಶಕ್ಕೆ ಹೆಚ್ಚಿನ ಸಂಖ್ಯೆಯ ಪದಕಗಳು ಬರಲು ಸಾಧ್ಯ, ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ತೆಂಡೂಲ್ಕರ್ ಉದ್ದ ಪತ್ರದ ಮೂಲಕ ಕ್ರೀಡಾಭಿಮಾನಿಗಳನ್ನು ಕೋರಿಕೊಂಡಿದ್ದಾರೆ.

ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!ನೀರಜ್ ಚೋಪ್ರಾ ಮುಂದೆ ಆರ್‌ಜೆ ಮಲಿಷ್ಕಾ ಡ್ಯಾನ್ಸ್: ಭಾರೀ ವಿವಾದ!

ಆಗಸ್ಟ್ 24ರಿಂದ ಜಪಾನ್‌ನ ಟೋಕಿಯೋದಲ್ಲಿ ಪ್ಯಾರಾಲಂಪಿಕ್ಸ್ ಕ್ರೀಡಾಕೂಟ ಆರಂಭಗೊಳ್ಳಲಿದೆ. ಟೋಕಿಯೋ ಒಲಿಂಪಿಕ್ಸ್ ಮುಗಿದು ಎರಡು ವಾರಗಳ ಬಳಿಕ ಪ್ಯಾರಾಲಂಪಿಕ್ಸ್ ಶುರುವಾಗುತ್ತಿದೆ. ಭಾರತದಿಂದ ಒಟ್ಟು 54 ಪ್ಯಾರಾಲಂಪಿಕ್ ಅಥ್ಲೀಟ್‌ಗಳು ಟೋಕಿಯೋಗೆ ತೆರಳಿದ್ದು, ಒಂಭತ್ತು ವಿಭಿನ್ನ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಬೆಂಬಲ ನೀಡಬೇಕೆಂದು ಎಲ್ಲಾ ಭಾರತೀಯರಲ್ಲಿ ಕೋರಿಕೊಳ್ಳುತ್ತಿದ್ದೇನೆ
"ಇದು ಪ್ಯಾರಾಲಂಪಿಕ್ಸ್ ನ ಸಮಯ. ನಮ್ಮ ದೇಶದ 54 ಅಥ್ಲೀಟ್‌ಗಳಿಗೆ ಬೆಂಬಲ ನೀಡಬೇಕೆಂದು ನಾನು ಎಲ್ಲಾ ಭಾರತೀಯರಲ್ಲಿ ಕೋರಿಕೊಳ್ಳುತ್ತಿದ್ದೇನೆ. ಈ ಅಥ್ಲೀಟ್‌ಗಳು ಸಾಮಾನ್ಯ ಸಾಮರ್ಥ್ಯ ಹೊಂದಿದವರಲ್ಲ. ಆದರೂ ಈ ಪುರುಷರ ಮತ್ತು ಮಹಿಳೆಯರುವ ನಿಜ ಬದುಕಿನಲ್ಲಿ ಹೀರೋಗಳಾಗಿರುವ ನಾವು ನೀವೆಲ್ಲರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಒಬ್ಬ ಮನುಷ್ಯ ತನಗೆ ಇಚ್ಛಾಶಕ್ತಿ, ಪರಿಶ್ರಮದ ಮನೋಭಾವ, ಏಕಾಗ್ರತೆ, ಬದ್ಧತೆ, ಅರ್ಪಣಾ ಭಾವವಿದ್ದರೆ ಬದುಕಿನಲ್ಲಿ ಏನೆಲ್ಲಾ ಸಾಧಿಸಬಲ್ಲ ಅನ್ನೋದಕ್ಕೆ ಅವರು ಒಳ್ಳೆಯ ಉದಾಹರಣೆ. ಅಷ್ಟೇ ಅಲ್ಲ, ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ," ಎಂದು ಸಚಿನ್ ತೆಂಡೂಲ್ಕರ್ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್ 2021ರ ಮೊದಲಾರ್ಧದಲ್ಲಿ ಆರ್‌ಸಿಬಿ ಪರ ಮಿಂಚಿದ ಮೂವರು ಮತ್ತು ನೆಲಕಚ್ಚಿದ ಇಬ್ಬರು ಆಟಗಾರರುಐಪಿಎಲ್ 2021ರ ಮೊದಲಾರ್ಧದಲ್ಲಿ ಆರ್‌ಸಿಬಿ ಪರ ಮಿಂಚಿದ ಮೂವರು ಮತ್ತು ನೆಲಕಚ್ಚಿದ ಇಬ್ಬರು ಆಟಗಾರರು

ಟೋಕಿಯೋ ಪದಕ ವಿಜೇತರಂತೆ, ಕ್ರಿಕೆಟರ್‌ಗಳಂತೆ ಸಂಭ್ರಮಾಚರಿಸಿ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹೀರೋಗಳನ್ನು ಮತ್ತು ಕ್ರಿಕೆಟರ್‌ಗಳನ್ನು ನಾವು ಸಂಭ್ರಮಿಸಿದಂತೆ ನಮ್ಮ ದೇಶ ಪ್ರತಿನಿಧಿಸಿ ಪದಕ ಗೆದ್ದ ಅಥವಾ ಗೆಲ್ಲಲು ಪ್ರಯತ್ನಿಸುವ ಪ್ಯಾರಾಲಂಪಿಕ್ಸ್ ಅಥ್ಲೀಟ್‌ಗಳನ್ನೂ ನಾವು ಸಂಭ್ರಮಿಸಿದರೆ ನಮ್ಮ ಸಮಾಜ ಇನ್ನೂ ಉತ್ತಮಗೊಳ್ಳುತ್ತದೆ. ಪ್ಯಾರಾಲಂಪಿಕ್ಸ್‌ನಲ್ಲಿ ಪದಕ ಗೆಲ್ಲೋದು ಸುಲಭವಿಲ್ಲ. ಅಲ್ಲಿ ಪಾಲ್ಗೊಳ್ಳುವ ಎಲ್ಲಾ 54 ಮಂದಿಗೂ ಪದಕ ಸಿಗುತ್ತೆ ಎನ್ನಲಾಗದು. ಆದರೂ ಅವರೆಲ್ಲರನ್ನೂ ಬೆಂಬಲಿಸೋದು ನಮ್ಮ ಕರ್ತವ್ಯ. ನಾವು ಆಡಂಬರದಿಂದ ಸಂಭ್ರಮಿಸೋದಲ್ಲ. ನಮ್ಮ ಬೆಂಬಲದಿಂದ ಅವರಿಗೆ ನಿಜವಾದ ಹುರುಪು ಸಿಗಬೇಕು. ಆಗ ಮಾತ್ರ ನಾವು ನಮ್ಮ ಸಮಾಜದಲ್ಲಿ ಹೊಸ ಬದಲಾವಣೆ ತರಲು ಸಾಧ್ಯ. ಆಗ ಮಾತ್ರ ನಮ್ಮ ಕ್ರೀಡೆಯಲ್ಲಿ ಬದಲಾವಣೆ ಮೂಡಲು ಸಾಧ್ಯ," ಎಂದು 48ರ ಹರೆಯದ ಸಚಿನ್ ಹೇಳಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಬಹಳಷ್ಟು ದಾಖಲೆಗಳು ಸಚಿನ್ ಹೆಸರಿನಲ್ಲಿವೆ. ಶತಕದ ಶತಕ ವಿಶ್ವದಾಖಲೆ ಇರುವ ವಿಶ್ವದ ಏಕಮಾತ್ರ ವ್ಯಕ್ತಿ ಸಚಿನ್.

ಒಂದೇ ಇನ್ನಿಂಗ್ಸ್‌ನಲ್ಲಿ ಭಾರತದ ತ್ರಿಮೂರ್ತಿಗಳು ಶತಕ ಬಾರಿಸಿದ್ದ ವಿಶೇಷ ದಿನವಿದು!ಒಂದೇ ಇನ್ನಿಂಗ್ಸ್‌ನಲ್ಲಿ ಭಾರತದ ತ್ರಿಮೂರ್ತಿಗಳು ಶತಕ ಬಾರಿಸಿದ್ದ ವಿಶೇಷ ದಿನವಿದು!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹೊಸ ದಾಖಲೆ
ಆಗಸ್ಟ್ 8ರಂದಷ್ಟೇ ಮುಕ್ತಾಯಗೊಂಡಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಒಟ್ಟು 127 ಮಂದಿ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಇದರಲ್ಲಿ ಒಟ್ಟು 7 ಪದಕಗಳು ಭಾರತದ ಪಾಲಾಗಿದ್ದವು. ಒಲಿಂಪಿಕ್ಸ್‌ ಇತಿಹಾಸದಲ್ಲೇ 7 ಪದಕಗಳು ಭಾರತಕ್ಕೆ ಸಿಕ್ಕಿದ್ದು ಇದೇ ಮೊದಲು. ಅದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಕ್ಕ 6 ಪದಕಗಳೇ ಹೆಚ್ಚು. ಈ ಬಾರಿ 4 ಕಂಚು, 2 ಬೆಳ್ಳಿ ಮತ್ತು ಒಂದು ಬಂಗಾರದ ಪದಕ ಭಾರತದ ಪಾಲಾಗಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧುಗೆ ಕಂಚಿನ ಪದಕ, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್‌ಗೆ ಕಂಚು, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚು, ಪುರುಷರ ಹಾಕಿಯಲ್ಲಿ ಭಾರತೀಯ ತಂಡಕ್ಕೆ ಕಂಚು ಮತ್ತು ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾಗೆ ಬಂಗಾರದ ಪದಕ ಸಿಕ್ಕಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 23, 2021, 17:07 [IST]
Other articles published on Aug 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X