ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿರಿಯ ಮಹಿಳಾ ಟಿ20 ಚಾಲೆಂಜರ್ ಟ್ರೋಫಿ 2022: ವೇಳಾಪಟ್ಟಿ ಮತ್ತು ತಂಡಗಳು ಪ್ರಕಟ

India women Team

ಹಿರಿಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ 2022ರ ಕುರಿತಾಗಿ ಆಲ್‌ ಇಂಡಿಯಾ ಮಹಿಳಾ ಸೆಲೆಕ್ಷನ್ ಕಮಿಟಿಯು, ವೇಳಾಪಟ್ಟಿ ಜೊತೆಗೆ ತಂಡಗಳನ್ನು ಗುರುವಾರ (ನ.17) ಘೋಷಣೆ ಮಾಡಿದೆ. ನವೆಂಬರ್ 20ರಿಂದ ಪ್ರಾರಂಭಗೊಳ್ಳಲಿರುವ ಟೂರ್ನಮೆಂಟ್ ನವೆಂಬರ್ 26ರಂದು ಶನಿವಾರ ಅಂತ್ಯಗೊಳ್ಳಲಿದೆ.

ಈ ಟಿ20 ಟೂರ್ನಮೆಂಟ್‌ನಲ್ಲಿ ಒಟ್ಟು ನಾಲ್ಕು ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು A, B, C, D ಎಂದು ವಿಂಗಡಿಸಲಾಗಿದೆ. 2019ರ ಉದ್ಘಾಟನಾ ಆವೃತ್ತಿಯಲ್ಲಿ ಮೂರು ತಂಡಗಳಿಂದ ಪ್ರಾರಂಭಗೊಂಡ ಟೂರ್ನಿಯು 2021-22ರಲ್ಲಿ ನಾಲ್ಕು ತಂಡಗಳಿಗೆ ಏರಿಕೆ ಮಾಡಲಾಯಿತು.

ವಿಜಯ್ ಹಜಾರೆ ಟ್ರೋಫಿ 2022: ಡೆಲ್ಲಿ ವಿರುದ್ಧ ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಗೆಲುವುವಿಜಯ್ ಹಜಾರೆ ಟ್ರೋಫಿ 2022: ಡೆಲ್ಲಿ ವಿರುದ್ಧ ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಗೆಲುವು

ಕಳೆದ ವರ್ಷದ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿದ ರೈಲ್ವೇಸ್ ವನಿತೆಯರು ಮತ್ತೊಮ್ಮೆ ಟೈಟಲ್‌ ಗೆಲ್ಲುವ ಮೂಲಕ ಅಬ್ಬರಿಸಿದ್ದರು. ಸೃತಿ ಮಂದಾನ ನಾಯಕತ್ವದ ಮಹಾರಾಷ್ಟ್ರ ವಿರುದ್ಧ ರೈಲ್ವೇಸ್ ವನಿತೆಯರು ಜಯ ಸಾಧಿಸಿದ್ದರು.

ಈ ಬಾರಿ ನಾಲ್ಕು ತಂಡಗಳ ನಡುವಿನ ಸ್ಪರ್ಧೆಯು ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಲ್ಕು ತಂಡಗಳು ರೌಂಡ್ ರಾಬಿನ್‌ ಮಾದರಿಯಲ್ಲಿ ಪ್ರತಿ ತಂಡವನ್ನು ಎದುರಿಸಲಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಗಳಿಸಿದ ಎರಡು ತಂಡಗಳು ನವೆಂಬರ್ 26ರಂದು ನಡೆಯಲಿರುವ ಫೈನಲ್‌ನಲ್ಲಿ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಈ ಟಿ20 ಟೂರ್ನಮೆಂಟ್‌ನಲ್ಲಿ ಭಾಗಹಿಸುತ್ತಿರುವ ನಾಲ್ಕು ತಂಡಗಳು ಮತ್ತು ವೇಳಾಪಟ್ಟಿ ಈ ಕೆಳಗಿದೆ.

ಹಿರಿಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ 2022 ತಂಡಗಳು:
ಭಾರತ A : ಪೂನಮ್ ಯಾದವ್ (ನಾಯಕಿ), ಮುಸ್ಕಾನ್ ಮಲಿಕ್, ಹರ್ಲೀನ್ ಡಿಯೋಲ್, ಸಜನಾ ಎಸ್, ಅಮಂಜೋತ್ ಕೌರ್, ದಿಶಾ ಕಸತ್, ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಮೇಘನಾ ಸಿಂಗ್, ಕೆ ಅಂಜಲಿ ಸರ್ವಾಣಿ, ಸಹನಾ ಪವಾರ್, ನುಝತ್ ಪರ್ವೀನ್ (ವಿಕೆಟ್ ಕೀಪರ್), ಶಿವಾಲಿ ಶಿಂಧೆ (ವಿಕೆಟ್ ಕೀಪರ್), ಎಸ್. ಅನುಷಾ

ಭಾರತ B: ದೀಪ್ತಿ ಶರ್ಮಾ (ನಾಯಕಿ), ಶಫಾಲಿ ವರ್ಮಾ (ಉಪನಾಯಕಿ), ಧಾರಾ ಗುಜ್ಜರ್, ಯುವಶ್ರೀ, ಅರುಂಧತಿ ರೆಡ್ಡಿ, ನಿಶು ಚೌಧರಿ, ಹುಮೈರಾ ಕಾಜಿ, ದೇವಿಕಾ ವೈದ್ಯ, ಸೋನಾಲ್ ಕಲಾಲ್, ಮೋನಿಕಾ ಪಟೇಲ್, ಸುಮನ್ ಮೀನಾ, ಸಿಮ್ರಾನ್ ದಿಲ್ ಬಹದ್ದೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್) , ಲಕ್ಷ್ಮಿ ಯಾದವ್ (ವಿಕೆಟ್ ಕೀಪರ್)

ಭಾರತ C: ಪೂಜಾ ವಸ್ತ್ರಾಕರ್ (ನಾಯಕಿ), ಎಸ್ ಮೇಘನಾ (ಉಪನಾಯಕಿ), ಪ್ರಿಯಾ ಪುನಿಯಾ, ಸಿಮ್ರಾನ್ ಶೇಖ್, ತರನ್ನುನ್ ಪಠಾಣ್, ಕಿರಣ್ ನವಗಿರೆ, ಅಂಜಲಿ ಸಿಂಗ್, ರಾಶಿ ಕನೋಜಿಯಾ, ಶರಣ್ಯಾ ಗದ್ವಾಲ್, ಕೀರ್ತಿ ಜೇಮ್ಸ್, ಕೋಮಲ್ ಝಂಝಾದ್, ಅಜಿಮಾ ಸಂಗ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್) , ಮಡಿವಾಳ ಮಮತಾ (ವಿಕೆಟ್ ಕೀಪರ್)

ಭಾರತ D: ಸ್ನೇಹ ರಾಣಾ (ನಾಯಕಿ), ಜೆಮಿಮಾ ರೋಡ್ರಿಗಸ್ (ಉಪನಾಯಕಿ), ಜಸಿಯಾ ಅಖ್ತರ್, ಅಶ್ವನಿ ಕುಮಾರಿ, ದಯಾಲನ್ ಹೇಮಲತಾ, ಕನಿಕಾ ಅಹುಜಾ, ಯಾಸ್ತಿಕಾ ಭಾಟಿಯಾ, ಪ್ರಿಯಾಂಕಾ ಪ್ರಿಯದರ್ಶಿನಿ, ಶಿಖಾ ಪಾಂಡೆ, ಶ್ರದ್ಧಾ ಪೋಖರ್ಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್ ,ಅಪರ್ಣಾ ಮೊಂಡಾಲ್ (ವಿಕೆಟ್ ಕೀಪರ್), ಸುಷ್ಮಾ ವರ್ಮಾ(WK)

ಹಿರಿಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ 2022 ವೇಳಾಪಟ್ಟಿ:

20/11/2022:

ಭಾರತ A vs ಭಾರತ C : 11 AM
ಭಾರತ B vs ಭಾರತ D : 4.30PM

22/11/2022:

ಭಾರತ A vs ಭಾರತ B: 11 AM
ಭಾರತ C vs ಭಾರತ D: 4.30PM

24/11/2022:

ಭಾರತ A vs ಭಾರತ D: 11 AM
ಭಾರತ B vs ಭಾರತ C: 4.30PM

26/11/2022:

ಫೈನಲ್ ಪಂದ್ಯ: 4.30PM

Story first published: Thursday, November 17, 2022, 21:38 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X