ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉತ್ತಮ ಜೊತೆಗಾರ ಮತ್ತು ಉತ್ತಮ ನಾಯಕನನ್ನು ಹೆಸರಿಸಿದ ಶಿಖರ್ ಧವನ್

Shikhar Dhawan Picks His Best Batting Prtner And Best Captain

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಇರ್ಫಾನ್ ಪಠಾಣ್ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೇರ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧವನ್ ತಮ್ಮ ನೆಚ್ಚಿನ ನಾಯಕ ಮತ್ತು ಜೊತೆಗಾರ ಯಾರು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಲವು ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಧವನ್ ಉತ್ತರಿಸಿದರು.

ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಜೊತೆಗೆ ಆರಂಭಿಕನಾಗಿ ಅನುಭವವನ್ನು ಶಿಖರ್ ಹಂಚಿಕೊಂಡರು. ಕಳೆದ ಏಳೆಂಟು ವರ್ಷಗಳಿಂದ ನಾವಿಬ್ಬರೂ ಟೀಮ್ ಇಂಡಿಯಾ ಪರವಾಗಿ ಇನ್ನಿಂಗ್ಸ್‌ ಆರಂಭಿಸುತ್ತಿದ್ದೇವೆ. ನಾವು ಒಬ್ಬರಿಗೊಬ್ಬರು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಒಬ್ಬರನ್ನೊಬ್ಬರು ಪ್ರಶಂಸಿಸಿಕೊಳ್ಳುತ್ತೇವೆ ಎಂದು ಧವನ್ ಹೇಳಿದ್ದಾರೆ.

ಧವನ್‌ಗೆ ತಲೆ ನೋವಾಯ್ತು ಕೆಎಲ್ ರಾಹುಲ್ ಪ್ರದರ್ಶನ: ಸ್ಪರ್ಧೆಯ ಬಗ್ಗೆ ತುಟಿ ಬಿಚ್ಚಿದ ಶಿಖರ್ಧವನ್‌ಗೆ ತಲೆ ನೋವಾಯ್ತು ಕೆಎಲ್ ರಾಹುಲ್ ಪ್ರದರ್ಶನ: ಸ್ಪರ್ಧೆಯ ಬಗ್ಗೆ ತುಟಿ ಬಿಚ್ಚಿದ ಶಿಖರ್

ಇದೇ ಸಂದರ್ಭದಲ್ಲಿ ಅತ್ಯುತ್ತಮ ನಾಯಕ ಯಾರು ಎಂಬ ಪ್ರಶ್ನೆಯನ್ನು ಪಠಾಣ್ ಮುಂದಿಟ್ಟರು. ಇದಕ್ಕೆ ಶಿಖರ್ ಧವನ್ ನಾನು ವಿರಾಟ್ ಕೊಹ್ಲಿ ಮತ್ತು ಧೋನಿ ಅವರ ನಾಯಕತ್ವದಲ್ಲಿ ಮಾತ್ರವೇ ಆಡಿದ್ದೇನೆ. ಹೀಗಾಗಿ ನಾನು ಯಾರನ್ನಾದರೂ ಒಬ್ಬರನ್ನೇ ಆಯ್ಕೆ ಮಾಡಬೇಕು ಎಂಬುದಾದರೆ ನಾನು ಮಾಹಿ ಭಾಯ್‌ಯನ್ನೇ ಆಯ್ಕೆ ಮಾಡುಕೊಳ್ಳುತ್ತೇನೆ ಎಂದು ಧವನ್ ಉತ್ತರಿಸಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ವಾರ್ನರ್ ಹೇಳಿದ್ದ ವಿಚಾರವೊಂದನ್ನು ಶಿಖರ್ ಮುಂದಿಟ್ಟರು. ಟೀಮ್ ಇಂಡಿಯಾ ಆಟಗಾರರು ವೇಗದ ಬೌಲರ್‌ಗಳನ್ನು ಎದುರಿಸಲು ಹಿಂದೇಟು ಹಾಕುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಲು ಬಯಸುತ್ತೀರಾ ಎಂದು ಧವನ್‌ಗೆ ಪಠಾಣ್ ಕೇಳಿದರು.

ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್

ಇದಕ್ಕೆ ಧವನ್, ನಾನೋರ್ವ ಆರಂಭಿಕ ಆಟಗಾರನಾಗಿ ನಾನು ವೇಗಿಗಳನ್ನು ಎದುರಿಸಲೇ ಬೇಕು, ಪ್ರತಿಯೊಬ್ಬರಿಗೂ ಅವರದ್ದೇ ಆದ ಯೋಚನೆ ಮಾಡುವ ರೀತಿಯಿರುತ್ತದೆ. ಕಳೆದ 8 ವರ್ಷಗಳಿಂದ ಆರಂಭಿಕನಾಗಿದ್ದು ವೇಗದ ಬೌಲರ್‌ಗಳನ್ನು ಎದುರಿಸಿದ್ದೇನೆ. ಮೂರೂ ಮಾದರಿಯಲ್ಲೂ ಟೀಮ್ ಇಂಡಿಯಾದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದೇನೆ, ವೇಗದ ಪಿಚ್‌ನಲ್ಲಿ ಖಂಡಿತಾ ವೇಗಿಗಳನ್ನು ಎದುರಿಸುವುದು ಕಠಿಣವಾಗಿರುತ್ತದೆ ಎಂದಿದ್ದಾರೆ.

Story first published: Thursday, May 14, 2020, 15:29 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X