ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ತವರಿನಲ್ಲಿ ವೈಟ್‌ವಾಶ್ ಬಳಿದ ಪಾಕಿಸ್ತಾನ

T20 series: Pakistan won the series by 3-0 against bangladesh after last ball victory in last macth

ಟಿ20 ವಿಶ್ವಕಪ್‌ನ ನಂತರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದೆ. ಈ ಮೂರು ಪಂದ್ಯಗಳಲ್ಲಿ ಮೂರನ್ನು ಕೂಡ ಪ್ರವಾಸಿ ಪಾಕಿಸ್ತಾನ ಗೆದ್ದು ಬೀಗಿದೆ. ಈ ಮೂಲಕ ತವರಿನಲ್ಲಿ ಬಾಂಗ್ಲಾದೇಶ ತಂಡಕ್ಕೆ ವೈಟ್‌ವಾಶ್ ಬಳಿದಿದೆ. ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಬಾಂಗ್ಲಾದೇಶ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಹೀಗಾಗಿ ಪಾಕಿಸ್ತಾನದ ವಿರುದ್ಧಧ ಸರಣಿ ಕೂಡ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಈ ಸರಣಿಯಲ್ಲಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ತೀವ್ರ ಪೈಪೋಟಿ ನೀಡಿತ್ತು.

ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ರೋಚಕವಾಗಿ ಗೆದ್ದುಕೊಳ್ಳುವ ಮೂಲಕ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 124/7 ರನ್‌ಗಳಿಸಿತ್ತು. ಇದನ್ನು ಬೆನ್ನಟ್ಟಿದ ಪಾಕಿಸ್ತಾನ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಐದು ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ.

ದ್ರಾವಿಡ್‌ರಿಂದ ಅಂತಾದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ರವಿ ಶಾಸ್ತ್ರಿ ಕೋಚ್ ಅವಧಿಯ ಬಗ್ಗೆ ಗಂಭೀರ್ ಮಾತುದ್ರಾವಿಡ್‌ರಿಂದ ಅಂತಾದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ರವಿ ಶಾಸ್ತ್ರಿ ಕೋಚ್ ಅವಧಿಯ ಬಗ್ಗೆ ಗಂಭೀರ್ ಮಾತು

ಬಾಂಗ್ಲಾದೇಶದ ಪರವಾಗಿ ಆರಂಭಿಕ ಆಟಗಾರ ನಯೀಮ್ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 50 ಎಸೆತಗಳಲ್ಲಿ 47 ರನ್‌ಗಳಿಸಿದ್ದರು ನಯೀಮ್. ಉಳಿದಂತೆ ಎಲ್ಲಾ ಆಟಗಾರರು ಕೂಡ ವೈಫಲ್ಯವನ್ನು ಅನುಭವಿಸಿದ್ದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಬಾಂಗ್ಲಾದೇಶ 124 ರನ್‌ಗಳಿಸಿತು.

ಇದನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಸಾಧಾರಣ ಆರಂಭ ದೊರೆಯಿತು. ಬಾಬರ್ ಅಜಂ ಈ ಪಂದ್ಯದಲ್ಲಿಯೂ 19 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಎರಡನೇ ವಿಕೆಟ್‌ಗೆ ಮೊಹಮ್ಮದ್ ರಿಜ್ವಾನ್ ಹಾಗೂ ಹೈದರ್ ಅಲಿ ಉತ್ತಮ ಜೊತೆಯಾಟ ನೀಡಿದರು. ಅರ್ಧ ಶತಕದ ಜೊತೆಯಾಟ ನಿಡಿದ ಈ ಜೋಡಿಯನ್ನು ಶಹೀದುಲ್ ಇಸ್ಲಾಮ್ ರಿಜ್ವಾನ್ ವಿಕೆಟ್ ಪಡೆಯುವ ಮೂಲಕ ಬೇರ್ಪಡಿಸಿದರು.

ಅಂತಿಮ ಓವರ್‌ನಲ್ಲಿ ರೋಚಕ ಘಟ್ಟ ತಲುಪಿದ ಪಂದ್ಯ: ಅಂತಿಮ ಓವರ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 8 ರನ್‌ಗಳ ಅಗತ್ಯವಿತ್ತು. ಮಹ್ಮದುಲ್ಲಾ ಎಸೆದ ಈ ಓವರ್ ಇತ್ತಂಡಗಳ ಆಟಗಾರರು ಹಾಗೂ ಅಭಿಮಾನಿಗಳನ್ನು ಅಕ್ಷರಶಃ ಉಸಿರು ಬಿಗಿಹಿಡಿದುನೋಡುವಂತೆ ಮಾಡಿತ್ತು. ಮೊದಲ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಸರ್ಫರಾಜ್ ಯಾವುದೇ ರನ್‌ಗಳಿಸಲು ವಿಫಲವಾದರು. ಅದಾದ ಬಳಿಕ ಮುಂದಿನ ಎರಡು ಎಸೆತಗಳಲ್ಲಿ ಮಹ್ಮದುಲ್ಲ ಎರಡು ವಿಕೆಟ್ ಕಬಳಿಸಿದರು. ಸರ್ಫರಾಜ್ ಹಾಗೂ ಹೈದರ್ ಅಲಿ ಇಬ್ಬರು ಕೂಡ ಔಟ್ ಆಗಿ ಫೆವಿಲಿಯಮ್ ಸೇರಿದರು. ಪಾಕಿಸ್ತಾನ ತಂಡಕ್ಕೆ ಅಂತಿಮ 3 ಎಸೆತಗಳಲ್ಲಿ 8 ರನ್‌ಗಳಿಸುವ ಸವಾಲಿತ್ತು.

ಭಾರತ vs ನ್ಯೂಜಿಲೆಂಡ್‌: ಟಿ20 ಸರಣಿ ವೈಟ್‌ವಾಷ್ ಮಾಡಿ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್‌: ಟಿ20 ಸರಣಿ ವೈಟ್‌ವಾಷ್ ಮಾಡಿ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ

ಕ್ರೀಸ್‌ಗೆ ಬಂದ ಇಫ್ತಿಕಾರ್ ಅಹ್ಮದ್ ಮಹ್ಮದುಲ್ಲಾ ಎಸೆತವನ್ನು ನೇರವಾಗಿ ಸಿಕ್ಸರ್‌ಗೆ ಅಟ್ಟಿದರು. ಅಂತಿಮ ಎರಡು ಎಸೆತಗಳಲ್ಲಿ ಎರಡು ರನ್‌ಗಳಿಸುವ ಗುರಿ ಪಾಕ್ ಮುಂದಿತ್ತು. ಮುಂದಿನ ಎಸೆತದಲ್ಲಿ ಇಫ್ತಿಕಾರ್ ವಿಕೆಟ್ ಕಳೆದುಕೊಂಡರು. ಕೊನೆಯ ಎಸೆತದಲ್ಲಿ ಎರಡು ರನ್‌ಗಳಿಸುವ ಸವಾಲು ಪಾಕ್ ಮುಂದಿತ್ತು. ಈ ಎಸೆತದಲ್ಲಿ ಮಹಮ್ಮದ್ ನವಾಜ್ ಬೌಂಡರಿ ಗಳಿಸುವ ಮೂಲಕ ಪಾಕಿಸ್ತಾನ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಮೂಲಕ ಪಾಕಿಸ್ತಾನ ರೋಚಕ ಪಂದ್ಯವನ್ನು ಗೆದ್ದು ಬೀಗಿತ್ತು.

ಮೂರು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಗೆಲುವು ಪಡೆದಿದ್ದ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಭಾರೀ ಗೆಲುವು ಪಡೆದಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ರೋಚಕ ಗೆಲುವು ಸಾಧಿಸಿದೆ.

Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!Video: ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ!

ಬಾಂಗ್ಲಾದೇಶ ಪ್ಲೇಯಿಂಗ್ XI: ಮೊಹಮ್ಮದ್ ನಯಿಮ್, ಶಮೀಮ್ ಹೊಸೈನ್, ನಜ್ಮುಲ್ ಹೊಸೈನ್ ಶಾಂಟೊ, ಅಫೀಫ್ ಹೊಸೈನ್, ಮಹಮ್ಮದುಲ್ಲಾ (ನಾಯಕ), ನೂರುಲ್ ಹಸನ್ (ವಿಕೆಟ್ ಕೀಪರ್), ಮಹೇದಿ ಹಸನ್, ಅಮಿನುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶಾಹಿದುಲ್ ಇಸ್ಲಾಂ, ನಸುಮ್ ಅಹ್ಮದ್
ಬೆಂಚ್: ಶೋಫುಲ್ ಇಸ್ಲಾಂ, ಪರ್ವೇಜ್ ಹೊಸೈನ್ ಎಮನ್, ಕಮರುಲ್ ಇಸ್ಲಾಂ, ಯಾಸಿರ್ ಅಲಿ, ಅಕ್ಬರ್ ಅಲಿ

ಪಾಕಿಸ್ತಾನ ಪ್ಲೇಯಿಂಗ್ XI: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಹೈದರ್ ಅಲಿ, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ
ಬೆಂಚ್: ಫಖರ್ ಜಮಾನ್, ಶೋಯೆಬ್ ಮಲಿಕ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಇಮಾದ್ ವಾಸಿಂ, ಆಸಿಫ್ ಅಲಿ

ಅತೀ ವೇಗದ ಬೌಲರ್ ಪರಿಸ್ಥಿತಿ ನೋಡಿ? | Oneindia Kannada

Story first published: Tuesday, November 23, 2021, 10:20 [IST]
Other articles published on Nov 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X