'ಎಲ್ಲರೂ ಆತನ ಕರಿಯರ್ ಮುಗೀತು ಎಂದುಕೊಂಡಿದ್ದರು'; ಆರ್‌ಸಿಬಿ ಬ್ಯಾಟರ್ ಬಗ್ಗೆ ರಿಕಿ ಪಾಂಟಿಂಗ್ ಶ್ಲಾಘನೆ

ಭಾನುವಾರ (ಅಕ್ಟೋಬರ್ 23)ರಂದು ನಡೆಯುವ ಮೆಲ್ಬೋರ್ನ್‌ನಲ್ಲಿ ನಡೆಯುವ 2022ರ ಟಿ20 ವಿಶ್ವಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದೇ ವೇಳೆ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ವೃತ್ತಿಜೀವನ ಬೆಳವಣಿಗೆಯಿಂದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಭಾವಿತರಾಗಿದ್ದಾರೆ. ಕೆಲವು ತಿಂಗಳ ಹಿಂದೆ ಅಂದರೆ, 2022ರ ಐಪಿಎಲ್‌ಗೆ ಮುಂಚಿತವಾಗಿ, ದಿನೇಶ್ ಕಾರ್ತಿಕ್ ಅವರು ಭಾರತದ ಟಿ20 ತಂಡದ ಆಯ್ಕೆಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.

ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಲು ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಲೆಜೆಂಡ್ ಕ್ರಿಕೆಟಿಗಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಲು ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ಲೆಜೆಂಡ್ ಕ್ರಿಕೆಟಿಗ

ಅಕ್ಟೋಬರ್ 2022ಕ್ಕೆ ಬಂದರೆ, ಅವರು ತಮ್ಮ 2ನೇ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಹೋಗುವ ಭಾರತೀಯ ತಂಡದ ಭಾಗವಾಗಿದ್ದಾರೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮುಂಚಿತವಾಗಿ, ಭಾರತ ಆಡುವ 11ರ ಬಳಗದಿಂದ ಈಗ ಅವರನ್ನು ಕೈಬಿಡುವುದು ಕಷ್ಟ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ವೃತ್ತಿಜೀವನ ಮುಗಿದಿದೆ ಎಂದು ತಾನು ಭಾವಿಸಿದ್ದೆ

ವೃತ್ತಿಜೀವನ ಮುಗಿದಿದೆ ಎಂದು ತಾನು ಭಾವಿಸಿದ್ದೆ

ರಿಕಿ ಪಾಂಟಿಂಗ್ ಐಸಿಸಿಯೊಂದಿಗೆ ಮಾತನಾಡುತ್ತಾ, "ದಿನೇಶ್ ಕಾರ್ತಿಕ್ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಹೋರಾಡುವುದನ್ನು ನೋಡಿದ ಕಾರಣ ಅವರ ವೃತ್ತಿಜೀವನ ಮುಗಿದಿದೆ ಎಂದು ತಾನು ಭಾವಿಸಿದ್ದೆ ಎಂದು ಒಪ್ಪಿಕೊಂಡರು. ಈ ರೀತಿಯ ಪುನರಾಗಮನವನ್ನು ಮಾಡಲು ದೊಡ್ಡ ಇಚ್ಛೆ ಮತ್ತು ಸಮರ್ಪಣೆ ಅಗತ್ಯವಿರುತ್ತದೆ. ಇದು ಅಷ್ಟು ಸುಲಭವಲ್ಲ," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.

ವೃತ್ತಿಜೀವನವನ್ನು ತಿರುಗಿಸಿದ ರೀತಿ ನನಗೆ ಸಂತೋಷವಾಗಿದೆ

ವೃತ್ತಿಜೀವನವನ್ನು ತಿರುಗಿಸಿದ ರೀತಿ ನನಗೆ ಸಂತೋಷವಾಗಿದೆ

"ಬಹುಶಃ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಭಾರತೀಯ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರ ವೃತ್ತಿಜೀವನ ಮುಗಿದಂತೆ ತೋರುತ್ತಿತ್ತು. ಅವರು ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕಾಗಿ ರಿಟೇನ್ ಆದ ಆಟಗಾರನಾಗಿರಲಿಲ್ಲ. ಆದರೆ ಅವರು ಇಂದು ಟಿ20 ಪಂದ್ಯದಲ್ಲಿ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿದ್ದಾರೆ. ನಾನು ಯೋಚಿಸಿದ್ದೆ, ಅವನ ಆಟದ ದಿನಗಳು ಮುಗಿದವು ಮತ್ತು ಅವನು ಕಾಮೆಂಟರಿ ಬಾಕ್ಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಿದ್ದನು. ಬಹುಶಃ ಅವರು ನಿಜವಾಗಿಯೂ ಯೋಚಿಸಿರಲಿಲ್ಲ, ಕಳೆದೆರಡು ತಿಂಗಳುಗಳಲ್ಲಿ ಅವನು ತನ್ನ ವೃತ್ತಿಜೀವನವನ್ನು ತಿರುಗಿಸಿದ ರೀತಿ ನನಗೆ ಸಂತೋಷವಾಗಿದೆ ಮತ್ತು ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿದೆ," ಎಂದು ರಿಕಿ ಪಾಂಟಿಂಗ್ ಹೇಳಿದರು.

ಪಾಕಿಸ್ತಾನ ವಿರುದ್ಧ ದಿನೇಶ್ ಕಾರ್ತಿಕ್ ಆಡುವ ಸಾಧ್ಯತೆ ಹೆಚ್ಚಿದೆ

ಪಾಕಿಸ್ತಾನ ವಿರುದ್ಧ ದಿನೇಶ್ ಕಾರ್ತಿಕ್ ಆಡುವ ಸಾಧ್ಯತೆ ಹೆಚ್ಚಿದೆ

"2022ರ ಟಿ20 ವಿಶ್ವಕಪ್‌ನ ಭಾರತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ದಿನೇಶ್ ಕಾರ್ತಿಕ್ ಆಡುವ ಸಾಧ್ಯತೆ ಹೆಚ್ಚಿದೆ. ಕಾರ್ತಿಕ್ ಭಾರತದ ಫಿನಿಶರ್ ಎಂದು ಬಿಂಬಿಸಲಾಗಿದೆ ಮತ್ತು ಆಟದ ಪರಿಸ್ಥಿತಿಗೆ ಅನುಗುಣವಾಗಿ 6 ​​ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. 37ರ ಹರೆಯದವರಿಗೆ ಇದು ಸುಲಭದ ಪುನರಾಗಮನವಲ್ಲ," ಎಂದು ರಿಕಿ ಪಾಂಟಿಂಗ್ ಶ್ಲಾಘಿಸಿದರು.

"ಆ ವಯಸ್ಸಿನಲ್ಲಿ ಪುನರಾಗಮನ ಮಾಡುವುದು ಸುಲಭದ ಕೆಲಸವಲ್ಲ ಭಾರತೀಯ ಆಟಗಾರರ ಬಗ್ಗೆ ನನಗೆ ತಿಳಿದಿರುವ ಒಂದು ವಿಷಯವೆಂದರೆ ಅವರು ಎಂದಿಗೂ ಬಿಟ್ಟುಕೊಡುವುದಿಲ್ಲ," ಎಂದು ಆಸ್ಟ್ರೇಲಿಯ ಮಾಜಿ ಕ್ರಿಕೆಟಿಗ ರಿಕಿ ಪಾಂಡಿಂಗ್ ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Friday, October 21, 2022, 22:31 [IST]
Other articles published on Oct 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X