ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌: ಹಿತಾಸಕ್ತ ಸಂಘರ್ಷಕ್ಕೆ ಉತ್ತರಿಸಿದ ಸಚಿನ್‌ ತೆಂಡೂಲ್ಕರ್‌

Tendulkar explains MI mentor role to BCCI Ombudsman

ಮುಂಬೈ, ಏಪ್ರಿಲ್‌ 28: ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ಸದಸ್ಯನಾಗಿರುವುದರ ಜೊತೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್‌ ಆಗುವ ಮೂಲಕ ಹಿತಾಸಕ್ತಿ ಸಂಘರ್ಷ ಎದುರಿಸುತ್ತಿರುವ ಕುರಿತು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಬಿಸಿಸಿಐನ ಒಂಬುಡ್ಸ್‌ಮನ್‌ ಡಿ.ಕೆ ಜೈನ್‌ಗೆ ಉತ್ತರ ನೀಡಿದ್ದಾರೆ.

 ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು! ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು!

ನಿವೃತ್ತ ನ್ಯಾಯಮೂರ್ತಿ ಆಗಿರುವ ಒಂಬುಡ್ಸ್‌ಮನ್‌ ಡಿ.ಕೆ ಜೈನ್‌ ಅವರಿಗೆ ಭಾನುವಾರ ಉತ್ತರ ನೀಡಿರುವ ಸಚಿನ್‌, ತಾವು ತಾವುದೇ ರೀತಿಯ ಹಿತಾಸಕ್ತಿ ಸಂಘರ್ಷಕ್ಕೆ ಒಳಪಟ್ಟಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ಮಾಸ್ಟರ್‌ ಬ್ಲಾಸ್ಟರ್‌, ತಮ್ಮ ವಕೀಲರೊಂದಿಗೆ ಜೈನ್‌ ಅವರನ್ನು ಭೇಟಿಯಾಗಲು ಕೂಡ ಒಪ್ಪಿದ್ದಾರೆ.

"ಮುಂಬಯಿ ಇಂಡಿಯನ್ಸ್‌ ತಂಡದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಯಾವುದೇ ಅಧಿಕೃತ ಸ್ಥಾನ ಹೊಂದಿಲ್ಲ. ಜತೆಗೆ ಮುಂಬೈ ಇಂಡಿಯನ್ಸ್‌ ತಂಡವು ಸಚಿನ್‌ ಅವರಿಗೆ ಯಾವುದೇ ರೀತಿಯ ಸಂಭಾವನೆಯನ್ನೂ ನೀಡುತ್ತಿಲ್ಲ. ತಂಡದ ಆಯ್ಕೆ ವಿಚಾರದಲ್ಲೂ ಸಚಿನ್‌ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಹಿತಾಸಕ್ತಿ ಸಂಘರ್ಷದ ಮಾತೇ ಇಲ್ಲ,'' ಎಂದು ಸಚಿನ್‌ ತೆಂಡೂಲ್ಕರ್‌ ಪರ ವಕೀಲರು ಒಂಬುಡ್ಸ್‌ಮನ್‌ಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

 ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ! ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ!

ಇದೇ ವೇಳೆ ಬಿಸಿಸಿಐನ ಒಂಬುಡ್ಸ್‌ಮನ್‌ ಮತ್ತು ಕ್ರಿಕೆಟ್ ಆಟಗಾರರ ನಡುವಣ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನಿಯೋಜಿತ ಆಡಳಿತ ಮಂಡಳಿ(ಸಿಒಎ)ಯು ತಲೆಹಾಕುವುದಿಲ್ಲ ಎಂದು ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

Story first published: Sunday, April 28, 2019, 18:21 [IST]
Other articles published on Apr 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X