
ಸೂರ್ಯಕುಮಾರ್ ಯಾದವ್‌ಗೆ ಕಠಿಣ ಸ್ಪರ್ಧೆ
ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಅದ್ಭುತ ಆಟಗಾರ, ಆದರೆ ಅವರು ಅದೇ ಪ್ರದರ್ಶನವನ್ನು ಏಕದಿನ ಕ್ರಿಕೆಟ್‌ನಲ್ಲಿ ನೀಡುವಲ್ಲಿ ವಿಫಲರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದರು.
ವಿರಾಟ್, ಗಿಲ್ ಶತಕದ ಅಬ್ಬರದ ನಡುವೆ ಉಳಿದ ಬ್ಯಾಟರ್ ಗಳಿಗೆ ಆಡಲು ಹೆಚ್ಚಿನ ಅವಕಾಶವೇ ಸಿಗಲಿಲ್ಲ. 6ನೇ ಕ್ರಮಾಂಕದಲ್ಲಿ ಇನ್ನು ಕೇವಲ ಎರಡು ಓವರ್ ಇರುವಾಗ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಕೇವಲ 4 ರನ್ ಗಳಿಸಿ ಔಟಾದರು.
ಭಾರತ ಏಕದಿನ ತಂಡದಲ್ಲಿ ಈಗಾಗಲೇ ಬಹುತೇಕ ಸ್ಥಾನಗಳಿಗೆ ಆಟಗಾರರು ಫಿಕ್ಸ್ ಆಗಿದ್ದಾರೆ. ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿ ಆಡುವುದರಿಂದ ಸೂರ್ಯಕುಮಾರ್ ಅವಕಾಶ ಕಳೆದುಕೊಳ್ಳಬಹುದು. ಮುಂದಿನ ಬಾರಿ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಏಕದಿನ ತಂಡದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ.
ವಿರಾಟ್ ಕೊಹ್ಲಿಗೆ 'ಬ್ಯಾಟಿಂಗ್‌ನ ಬಾಸ್' ಎಂದು ಕರೆದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ನಿರೀಕ್ಷಿತ ಪ್ರದರ್ಶನ ನೀಡದ ಶಮಿ
2019ರ ಬಳಿಕ ಮೊಹಮ್ಮದ್ ಶಮಿ ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. 2022ರ ಆರಂಭದಿಂದ ಅವರು 6 ಏಕದಿನ ಪಂದ್ಯಗಳನ್ನಾಡಿದ್ದು, 7 ವಿಕೆಟ್ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಶಮಿ ಫಿಟ್ನೆಸ್ ಸಮಸ್ಯೆಯನ್ನು ಹೊಂದಿರುವುದು ಕೂಡ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಶ್ರೀಲಂಕಾ ವಿರುದ್ಧ 3 ಏಕದಿನ ಪಂದ್ಯಗಳನ್ನಾಡಿದ ಅವರು ಕೇವಲ 3 ವಿಕೆಟ್ ಮಾತ್ರ ಪಡೆದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಶಮಿ ಫಾರ್ಮ್ ಕಂಡುಕೊಳ್ಳದಿದ್ದರೆ, ತಂಡದಿಂದ ಹೊರಗುಳಿಯಬೇಕಾಗುತ್ತದೆ.

ಚಹಾಲ್ ಸ್ಥಾನ ಕೂಡ ಅಪಾಯದಲ್ಲಿ
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುಜುವೇಂದ್ರ ಚಹಾಲ್ ಫಾರ್ಮ್ ಬಗ್ಗೆ ಟೀಕೆ ಕೇಳಿ ಬರುತ್ತಲೇ ಇದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಮೊದಲನೇ ಪಂದ್ಯದಲ್ಲಿ ಆಡಿದ ಚಹಾಲ್ ಒಂದು ವಿಕೆಟ್ ಪಡೆದರು. ಎರಡನೇ ಪಂದ್ಯಕ್ಕೆ ಅವರನ್ನು ತಂಡದಿಂದ ಕೈಬಿಡಲಾಯಿತು.
ಸರಣಿಯ ಎರಡನೇ ಪಂದ್ಯದಲ್ಲಿ ಅವಕಾಶ ಪಡೆದ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ಮೂರನೇ ಪಂದ್ಯದಲ್ಲಿ ಕೂಡ ಎರಡು ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಚಹಾಲ್ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಷ್ಟವಾಗಲಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಚಹಾಲ್‌ಗೆ ಏನಾದರೂ ಅವಕಾಶ ಸಿಕ್ಕರೆ ಅದು ಅವರ ಅದೃಷ್ಟವೇ ಸರಿ.