ಐಪಿಎಲ್ 2022: ಎಬಿ ಡಿವಿಲಿಯರ್ಸ್ ಸ್ಥಾನ ತುಂಬಬಲ್ಲ 5 ಆಟಗಾರರು

ಮನೋರಂಜನ್ ಕಾ ಬಾಪ್ ಖ್ಯಾತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ಬಿಸಿಸಿಐ ತಯಾರಿ ಮಾಡಿಕೊಳ್ಳುತ್ತಿದೆ. ಸೀಸನ್ ಆರಂಭಕ್ಕೂ ಮುನ್ನ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕು, ಯಾವ ಆಟಗಾರರನ್ನ ಹರಾಜಿಗೆ ಬಿಡಬೇಕು ಎಂದು ಲೆಕ್ಕಾಚಾರ ಹಾಕಿಕೊಳ್ಳುತ್ತಿವೆ.

ಪ್ರತಿ ಫ್ರಾಂಚೈಸಿ ರೀತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೂಡ ಆಟಗಾರರ ರೀಟೇನ್ ಜೊತೆಗೆ ಹೊಸ ಆಟಗಾರರ ಹುಡುಕಾಟದಲ್ಲಿ ತೊಡಗಿದೆ. ಇದರ ಜೊತೆಗೆ ಆರ್‌ಸಿಬಿಗೆ ಹೊಸ ನಾಯಕನ ನೇಮಿಸುವ ಜವಾಬ್ದಾರಿಯು ಹೆಗಲಿಗಿದೆ.

ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ಎಬಿ ಡಿವಿಲಿಯರ್ಸ್‌ ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನ ಘೋಷಿಸಿದ್ದು, ಅವರ ಬದಲಿ ಆಟಗಾರ ಯಾರು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. 2010ರಲ್ಲಿ ಐಪಿಎಲ್‌ಗೆ ಕಾಲಿಟ್ಟ ಎಬಿಡಿ ಡೆಲ್ಲಿ ತಂಡದಿಂದ 2014ರಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡ್ರು. 184 ಪಂದ್ಯಗಳಿಂದ 5,162ರನ್‌ ಕಲೆಹಾಕಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ 151.7 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

ಡೆವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವನ್ನ ತಂದುಕೊಟ್ಟಿದ್ದಾರೆ. ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸಿಕೊಟ್ಟ ಉದಾಹರಣೆಗಳು ಇವೆ. ಆದ್ರೆ ಈಗ ಎಬಿಡಿ ಸ್ಥಾನವನ್ನ ತುಂಬಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆರ್‌ಸಿಬಿಗೆ ಅವಶ್ಯಕತೆಯಿದೆ. ಎಬಿಡಿಯಷ್ಟು ಉತ್ತಮ ಆಟಗಾರರ ಸಿಗದಿದ್ದರು, ಅವರ ಸಮೀಪಕ್ಕೆ ಬ್ಯಾಟ್ ಬೀಸುವ ಸ್ಟ್ರೈಕರ್ ಬೇಕಿದ್ದಾರೆ.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕೆಲವು ಆಯ್ಕೆಗಳು ಈ ಕೆಳಗಿವೆ.

ಜಾಸ್‌ ಬಟ್ಲರ್‌

ಜಾಸ್‌ ಬಟ್ಲರ್‌

ಸದ್ಯ ಕ್ರಿಕೆಟ್‌ ಜಗತ್ತಿನಲ್ಲಿ, ಅದ್ರಲ್ಲೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ಸುಲಭವಾಗಿ, ಸೊಗಸಾಗಿ ಚೆಂಡನ್ನ ದಂಡಿಸಬಲ್ಲ ಆಟಗಾರ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್. ವಿಕೆಟ್ ಕೀಪಿಂಗ್‌ನಲ್ಲಿ ಅಮೋಘ ಪ್ರದರ್ಶನದ ಜೊತೆಗೆ ಸಖತ್ ಬ್ಯಾಟಿಂಗ್ ಮಾಡುವ ಕ್ರಿಕೆಟಿಗ ಈತ.

ಟಿ20 ಕ್ರಿಕೆಟ್‌ನಲ್ಲಿ 276 ಇನ್ನಿಂಗ್ಸ್‌ಗಳಲ್ಲಿ 144.2 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಬಟ್ಲರ್ 7135 ರನ್ ಕಲೆಹಾಕಿದ್ದಾರೆ. ಇವರ ಬ್ಯಾಟಿಂಗ್ ಸರಾಸರಿ 32.45ರಷ್ಟಿದೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಬಟ್ಲರ್ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಆದ್ರೆ ರಾಯಲ್ಸ್ ಅವರನ್ನ ಹರಾಜಿಗೆ ಬಿಡುವುದು ಅಸಂಭವವಾಗಿದೆ. ಒಂದು ವೇಳೆ ಆತನನ್ನ ಹರಾಜಿಗೆ ಬಿಟ್ಟಿದ್ದೇ ಆದಲ್ಲಿ, ಎಬಿಡಿ ಸ್ಥಾನಕ್ಕೆ ಆರ್‌ಸಿಬಿ ಆತನನ್ನ ಬೆನ್ನಟ್ಟಿ ಹೋಗಬೇಕು.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ: ಟೀಮ್ ಇಂಡಿಯಾ ಸ್ಕ್ವಾಡ್‌ಗೆ ಸೂರ್ಯಕುಮಾರ್ ಸೇರ್ಪಡೆ: ವರದಿ

ಜಾನಿ ಬೈರ್‌ಸ್ಟೋ

ಜಾನಿ ಬೈರ್‌ಸ್ಟೋ

ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರ ಜಾನಿ ಬೈರ್‌ಸ್ಟೋ ಕೂಡ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುವ ಆಟಗಾರ. ಟಿ20 ಕ್ರಿಕೆಟ್‌ನಲ್ಲಿ 153 ಇನ್ನಿಂಗ್ಸ್‌ನಲ್ಲಿ 3904 ರನ್ ಕಲೆಹಾಕಿದ್ದಾರೆ. ಈತ ಮಧ್ಯಮ ಕ್ರಮಾಂಕದಲ್ಲೂ ಆಡುವ ಸಾಮರ್ಥ್ಯ ಹೊಂದಿದ್ದು, 142ರ ಸ್ಟ್ರೈಕ್‌ರೇಟ್‌ ಬ್ಯಾಟ್‌ ಬೀಸಬಲ್ಲರು.

ಸದ್ಯ ಎಸ್‌ಆರ್‌ಎಚ್ ಪರ ಬೆಂಚ್ ಕಾದಿರುವ ಈ ಆಟಗಾರರನ್ನ ಹರಾಜಿಗೆ ಬಿಡುವ ಸಾಧ್ಯತೆಯಿದ್ದು, ಆರ್‌ಸಿಬಿ ಎಬಿ ಡಿವಿಲಿಯರ್ಸ್ ಸ್ಥಾನಕ್ಕೆ ಈತನ ಬೆನ್ನಿಗೆ ಬೀಳಬಹುದು.

ಲಿಯಾಮ್ ಲಿವಿಂಗ್‌ಸ್ಟೋನ್

ಲಿಯಾಮ್ ಲಿವಿಂಗ್‌ಸ್ಟೋನ್

ಇಂಗ್ಲೆಂಡ್ ಮತ್ತೊಬ್ಬ ಯುವ ಹಾಗೂ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್. ಅತ್ಯಂತ ಚತುರ ಕ್ರಿಕೆಟಿಗಲೊಬ್ಬನಾದ ಈತ ಪಾರ್ಟ್‌ ಟೈಮ್ ಬೌಲರ್‌ ಆಗಿ ಲೆಗ್ ಸ್ಪಿನ್ ಮತ್ತು ಆಫ್‌ ಸ್ಪಿನ್ ಎರಡೂ ಮಾಡಬಲ್ಲ ಬಹುಪ್ರತಿಭೆ.

ಟಿ20 ಕ್ರಿಕೆಟ್‌ನಲ್ಲಿ 144 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಈತ 4038 ರನ್ ಕಲೆಹಾಕಿದ್ದಾರೆ. ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಮೂಲಾಧಾರವಾಗಿರುವ ಈತ ಬಿಬಿಎಲ್‌ ನಂತಹ ಲೀಗ್‌ಗಳನ್ನು ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ 138 ರ ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ 851 ರನ್‌ಗಳೊಂದಿಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಲಿವಿಂಗ್‌ಸ್ಟೋನ್ ಯುಎಇನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಅವರು ಬ್ಯಾಟ್‌ನಲ್ಲಿ ಎಷ್ಟು ಪ್ರತಿಭಾವಂತರು ಎಂಬುದನ್ನು ಪ್ರದರ್ಶಿಸಿದ್ದಾರೆ. ಎಬಿ ಡಿವಿಲಿಯರ್ಸ್ ಬದಲಿಗೆ ಲಿವಿಂಗ್‌ಸ್ಟೋನ್ ಆರ್‌ಸಿಬಿಯ ಆಯ್ಕೆಯಾಗಬಹುದು.

SMAT 2021 ಫೈನಲ್: ತಮಿಳುನಾಡು ಮುಡಿಗೆ ಟ್ರೋಫಿ, ಕರ್ನಾಟಕಕ್ಕೆ ವಿರೋಚಿತ ಸೋಲು

ಏಡೆನ್ ಮಕ್ರಾಮ್

ಏಡೆನ್ ಮಕ್ರಾಮ್

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಏಡೆನ್ ಮಕ್ರಾಮ್ ಉನ್ನತ ಫಾರ್ಮ್‌ನಲ್ಲಿದ್ದಾರೆ. ಕ್ಲಾಸಿ ಮತ್ತು ಸಂಯೋಜಿತ ಆಟಗಾರನಾದ ಏಡನ್ ಮಕ್ರಾಮ್, ಹರಿಣಗಳ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು. 65 ಇನ್ನಿಂಗ್ಸ್‌ಗಳಲ್ಲಿ 128ರ ಸ್ಟ್ರೈಕ್‌ರೇಟ್‌ನಲ್ಲಿ 1732 ರನ್‌ಗಳಿಸಿದ್ದಾರೆ. ಇನ್ನು ಈತ ಪಾರ್ಟ್ ಟೈಮ್ ಸ್ಪಿನ್ನರ್ ಆಗಿದ್ದು, ಆಫ್ ಸ್ಪಿನ್ ಮೂಲಕ ತಂಡಕ್ಕೆ ನೆರವಾಗಬಲ್ಲರು.

ಯುಎಇನಲ್ಲಿ ನಡೆದ ಕಳೆದ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಆರು ಪಂದ್ಯಗಳಲ್ಲಿ 119 ರನ್ ಕಲೆಹಾಕಿರುವ ಈತ ಆರ್‌ಸಿಬಿಗೆ ಒಳ್ಳೆಯ ಆಯ್ಕೆಯಾಗಿದೆ.

ವಿರಾಟ್ ಕೊಹ್ಲಿಯ ಈ 5 ದಾಖಲೆಗಳನ್ನು ಬಾಬರ್ ಅಜಂ ಮುರಿಯುವುದು ಸುಲಭದ ಮಾತಲ್ಲ!

RCB ಪರ ಮುಂದಿನ IPLನಲ್ಲಿ ABD ಜಾಗವನ್ನು ತುಂಬುವವರು ಯಾರು | Oneindia Kannada
ಶಿಮ್ರಾನ್ ಹೆಟ್ಮೆಯರ್

ಶಿಮ್ರಾನ್ ಹೆಟ್ಮೆಯರ್

ವೆಸ್ಟ್ ಇಂಡೀಸ್‌ನ ರೈಸಿಂಗ್ ಕ್ರಿಕೆಟರ್ ಶಿಮ್ರಾನ್ ಹೆಟ್ಮೆಯರ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್‌ ಬೀಸುತ್ತಿದ್ದು, ಆರ್‌ಸಿಬಿ ಪರವು ಒಂದು ಸೀಸನ್ ಆಡಿದ್ದಾರೆ. ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ಉತ್ತಮವಾಗಿ ಬ್ಯಾಟ್‌ ಬೀಸಬಲ್ಲ ಈತ 2016ರ ಅಂಡರ್19 ವಿಜೇತ ತಂಡದ ಸದಸ್ಯ ಕೂಡ.

ಟಿ20 ಕ್ರಿಕೆಟ್‌ನಲ್ಲಿ 111 ಇನ್ನಿಂಗ್ಸ್‌ಗಳಲ್ಲಿ 2339ರನ್ ಕಲೆಹಾಕಿರುವ ಹೆಟ್ಮೆಯರ್ 131.10 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. 2021 ರ ಐಪಿಎಲ್ ಆವೃತ್ತಿಯಲ್ಲಿ ದೆಹಲಿ ಪರ ಆಡುತ್ತಿರುವ ಹೆಟ್ಮೆಯರ್ ಸೀಸನ್‌ನ ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು ಡೆತ್ ಓವರ್‌ಗಳಲ್ಲಿ 193 ಸ್ಟ್ರೈಕ್ ರೇಟ್ ಅನ್ನು ಸಹ ಹೊಂದಿದ್ದಾರೆ. ಹೀಗಿರುವಾಗ ಎಬಿಡಿ ನಿರ್ಗಮವಾದ ಸ್ಥಳಕ್ಕೆ ಹೆಟ್ಮೆಯರ್ ಕೂಡ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, November 22, 2021, 19:02 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X