ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ವಿಶ್ವದ ಅತ್ಯುತ್ತಮ ಬೌಲರ್, ಭಾರತ ತಂಡದ ಆಸ್ತಿ: ಯುವ ವೇಗಿಯನ್ನು ಹೊಗಳಿದ ಲಕ್ಷ್ಮಣ್

VVS Laxman praises Mohammed Siraj said he is one of the worlds best at the moment

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾಗಿದ್ದು ಇದೀಗ ಭಾರತ ಮತ್ತೊಂಉ ಪ್ರವಾಸಕ್ಕೆ ಸಜ್ಜಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗಿಯಾಗಲಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕನೇ ಅಲೆಯ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಹೊಸ ರೂಪಾಂತರಿ ಒಮೈಕ್ರಾನ್ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಣಿಯನ್ನು ಮುಂದೂಡಲಾಗಿದೆ. ವೇಳಾಪಟ್ಟಿಯನ್ನು ಕೂಡ ಪರಿಷ್ಕರಿಸಿ ಪ್ರಕಟಿಸಿದೆ ದಕ್ಷಿಣ ಆಫ್ರಿಕಾ.

ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಯುವ ವೇಗಿಯ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೊಹಮ್ಮದ್ ಸಿರಾಜ್ ವಿಶ್ವದ ಶ್ರೇಷ್ಠ ವೇಗಿಗಳ ಪೈಕಿ ಒಬ್ಬರು ಎಂದಿರುವ ಲಕ್ಷ್ಮಣ್ ಆತ ಭಾರತ ತಂಡದ ಆಸ್ತಿ ಎಂದು ಬಣ್ಣಿಸಿದ್ದಾರೆ.

ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆಯದಿದ್ದ ಸಿರಾಜ್ ಎರಡನೇ ಟೆಸ್ಟ್‌ಗೂ ಮುನ್ನ ಇಶಾಂತ್ ಶರ್ಮಾ ಗಾಯಗೊಂಡ ಕಾರಣದಿಂದಾಗಿ ಸಿರಾಜ್ ಆಡುವ ಅವಕಾಶ ಪಡೆದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನ ಆರಂಭಿಕ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಸಿರಾಜ್ ಭಾರೀ ಆಘಾತವನ್ನು ನೀಡಿದರು. ಇದರಿಂದ ಚೇತರಿಸಿಕೊಳ್ಳದ ಕಿವೀಸ್ ಪಡೆ ನಂತರ ಕೇವಲ 62 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವೊಂದು ಗಳಸಿಇದ ಕನಿಷ್ಠ ಸ್ಕೋರ್ ಆಗಿದೆ. ನಾಯಕ ಟಾಮ್ ಲಾಥಮ್, ವಿಲ್ ಯಂಗ್ ಹಾಗೂ ರಾಸ್ ಟೇಲರ್ ವಿಕೆಟ್ ಸಿರಾಜ್ ಪಾಲಾದವು.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್, ಏಕದಿನ ಸರಣಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್, ಏಕದಿನ ಸರಣಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

"ಆತನ ಬಳಿ ಶಾರ್ಟ್ ಪಿಚ್ ಎಸೆತಗಳನ್ನು ಎಸೆಯುವ ಅದ್ಭುತವಾದ ಯೋಜನೆಯಿತ್ತು. ಹೀಗಾಗಿ ಆತ ನಾಯಕ ಲಾಥಮ್ ವಿಕೆಟ್ ಪಡೆಯಲು ಸಾಧ್ಯವಾಯಿತು. ನಾನು ಆತನಲ್ಲಿರುವ ಸಾಮರ್ಥ್ಯ ಹಾಗೂ ತೀವ್ರತೆಯನ್ನು ಆನಂದಿಸುತ್ತೇನೆ. ಆತ ವೇಗವಾಗಿ ಕ್ರೀಸ್‌ನತ್ತ ಓಡುತ್ತಾರೆ. ಇದು ಆತನಲ್ಲಿರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತದೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್. ಸ್ಟಾರ್ ಸ್ಪೋರ್ಟ್ಸ್‌ನ ಸಂವಾದದಲ್ಲಿ ಭಾಗಿಯಾದ್ದದ್ದ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿರಾಜ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೀಮ್ ಇಂಡಿಯಾದ ಪ್ರಥಮ ಆಯ್ಕೆಯ ವೇಗಿಗಳಾದ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಗಾಯಗೊಂಡು ಹೊರಗುಳಿದಿದ್ದ ಕಾರಣ ಭಾರತ ತಂಡದ ಪ್ರಮುಖ ಭಾಗವಾಗಿದ್ದರು ಸಿರಾಜ್. ಈ ಸಂದರ್ಭದಲ್ಲಿ ಅಮೋಗ ಪ್ರದರ್ಶನ ನೀಡಿದ ಅವರು ಆಸ್ಟ್ರೇಲಿಯಾ ನೆಲದಲಲ್ಇ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮೈದಾನದಲ್ಲಿ ಅಂಪೈರ್ ಗೆ ಗೇಲಿ ಮಾಡಿದ ವಿರಾಟ್ | Oneindia Kannada

"ಟೆಸ್ಟ್ ಬೌಲರ್ ಆಗಿ ಆತನ ಬೆಳವಣಿಗೆ ಹಾಗೂ ಪ್ರಗತಿ ನಿಜಕ್ಕೂ ಅದ್ಭುತವಾಗಿದೆ. ಆಸ್ಟ್ರೇಲಿಯಾದಲ್ಲಿ, ಬೂಮ್ರಾ ಶಮಿ ಹಾಗೂ ಇಶಾಂತ್ ಅಲಭ್ಯತೆಯಲ್ಲಿ ಆತ ಯಾಔ ರೀತಿಯಲ್ಲಿ ಪ್ರದರ್ಶನ ನೀಡಿದರು ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಇಂಗ್ಲೆಂಡ್‌ನಲ್ಲಿಯೂ ಅವರು ಗಮನಾರ್ಹ ಪ್ರದರ್ಶನ ನೀಡಿ ಮಿಂಚಿದ್ದಾರೆ" ಎಂದು ವಿವಿಎಸ್ ಲಕ್ಷ್ಮಣ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Story first published: Tuesday, December 7, 2021, 9:27 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X