ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ ಟೆಸ್ಟ್ ಸರಣಿ ಆಯೋಜನೆಗೆ ವಿಂಡೀಸ್ ಮಂಡಳಿ ಆಹ್ವಾನ

West Indies Cricket Offers To Host England-Pakistan Test Series In Caribbean Due To Coronavirus

ಕೊರೊನಾ ಭೀತಿಯಿಂದ ವಿಶ್ವದ ಎಲ್ಲಾ ಕ್ರೀಡಾ ಚಟುವಟಿಗೆಗಳು ಸ್ಥಗಿತವಾಗಿದೆ. ವಿಶ್ವ ಯಾವಾಗ ಮತ್ತೆ ಸಹಜ ಸ್ಥಿತಿಗೆ ಮರಳಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಹೀಗಾಗಿ ಮುಂದೂಡಲ್ಪಟ್ಟ ಕ್ರೀಡಾಕೂಟಗಳು ಇನ್ನೂ ತೂಗುಯ್ಯಾಲೆಯಲ್ಲೇ ಇದೆ.

ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಿನ ಸರಣಿಯ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಗೊಂದಲದಲ್ಲಿದೆ. ಸದ್ಯ ಈ ಟೂರ್ನಿಯ ಆಯೋಜನೆ ಮಾಡಲು ಇಸಿಬಿ ಎರಡು ಮಾರ್ಗಗಳನ್ನು ಕಂಡುಕೊಂಡಿದೆ.

ಇಸಿಬಿ ತನ್ನ ಮುಂದೆ ಎರಡು ಆಯ್ಕೆಯನ್ನುಟ್ಟುಕೊಂಡು ಕುಳಿತಿದೆ. ಮೊದಲನೇ ಆಯ್ಕೆ ಜೂನ್ ನಾಲ್ಕರಿಂದ ಆರಂಭವಾಗಬೇಕಿದ್ದ ಈ ಸರಣಿಯನ್ನು ಮುಂದೂಡುವುದು. ಸಪ್ಟೆಂಬರ್ ತಿಂಗಳಲ್ಲಿ ಆಯೋಜನೆ ಮಾಡುವುದು ಮತ್ತೊಂದು ಆಯ್ಕೆ ಕೆರೇಬಿಯನ್ ದೇಶದಲ್ಲಿ ಸರಣಿಯಲ್ಲಿ ಆಯೋಜನೆ ಮಾಡುವುದಾಗಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೆ ಇಸಿಬಿ ಕ್ರಿಕೆಟ್ ವೆಸ್ಟ್‌ಇಂಡೀಸ್ ಜೊತೆಗೆ ಮಾತುಕತೆಯನ್ನು ನಡೆಸಿದೆ ಎನ್ನಲಾಗ್ತಿದೆ. ಈ ಬೆಳವಣಿಗೆಯಲ್ಲಿ ಕ್ರಿಕೆಟ್ ವೆಸ್ಟ್ ಇಂಡೀಸ್ ಇಂಗ್ಲೆಂಡ್&ವೇಲ್ಸ್ ಕ್ರಿಕೆಟ್ ಮಂಡಳಿಗೆ ಕ್ರಿಕೆಟ್ ಅನ್ನು ಆಯೋಜನೆ ಗೊಳಿಸಲು ಆಹ್ವಾನವನ್ನು ನೀಡಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಕೆರೆಬಿಯನ್ ರಾಷ್ಟ್ರಗಳಲ್ಲೂ ಕೊರೊನಾ ಹಾವಳಿ ಅಲ್ಪ ಪ್ರಮಾಣದಲ್ಲಿ ಕಂಡುಬಂದಿದೆ. ಆದರೆ ಯು.ಕೆಗೆ ಹೋಲಿಸಿದರೆ ಕೆರೆಬಿಯನ್ ರಾಷ್ಟ್ರಗಳಲ್ಲಿ ಸಾಕಷ್ಟು ನಿಯಂತ್ರಣದಲ್ಲಿದೆ. ಕೆರೆಬಿಯನ್ ರಾಷ್ಟ್ರಗಳಾದ ಬಾರ್ಬಡಾಸ್ ಮತ್ತು ಸೈಂಟ್ ಲೂಸಿಯಾದಲ್ಲಿ ಈವರೆಗೆ ಕೇವಲ ತಲಾ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ ಆಂಟಿಗುವಾದಲ್ಲಿ ಒಂದು ಕೊರೊನಾ ಪ್ರಕರಣ ಧೃಡಪಟ್ಟಿದೆ. ಆದರೆ ಬ್ರಿಟನ್‌ನಲ್ಲಿ 2662 ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದ್ದು ಇದರಲ್ಲಿ ಸುಮಾರು 71 ಜನ ಮೃತಪಟ್ಟಿದ್ದಾರೆ.

Story first published: Thursday, March 19, 2020, 17:50 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X