ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್ ಕೇವಲ 48 ಗಂಟೆಗಳು ಮಾತ್ರ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಆಗಿದ್ದು ಹೇಗೆ?

Suryakumar yadav

ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್‌ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಎಕ್ಸ್ ಫ್ಯಾಕ್ಟರ್‌ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುವ ಸೂರ್ಯ ಎದುರಾಳಿ ಬೌಲರ್‌ಗಳಿಗೆ ಸ್ವಲ್ಪವೂ ಕರುಣೆ ತೋರದೆ ಚೆಂಡನ್ನ ಬೌಂಡರಿ ಗೆರೆದಾಟಿಸುವಲ್ಲಿ ನಿಸ್ಸೀಮ.

ಕಳೆದೊಂದು ವರ್ಷದಲ್ಲಿ ಟಿ20 ಫಾರ್ಮೆಟ್‌ನಲ್ಲಿ ಸೂರ್ಯಕುಮಾರ್ ಆಟ, ವಿಶ್ವದ ಶ್ರೇಷ್ಟ ಬ್ಯಾಟರ್‌ಗೆ ಹೋಲಿಸವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾರೆ. ಭಾರತದ 360 ಡಿಗ್ರಿ ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಕಳೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು.

ನಂಬರ್ 1 ಟಿ20 ಬ್ಯಾಟರ್ ಆಗಿದ್ದ ಸೂರ್ಯ ಎರಡೇ ದಿನಕ್ಕೆ ಕುಸಿತ

ನಂಬರ್ 1 ಟಿ20 ಬ್ಯಾಟರ್ ಆಗಿದ್ದ ಸೂರ್ಯ ಎರಡೇ ದಿನಕ್ಕೆ ಕುಸಿತ

ಸೂರ್ಯಕುಮಾರ್ ಯಾದವ್‌ ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್‌ ಆಗಿ ಇದ್ದಿದ್ದು ಕೇವಲ ಎರಡು ದಿನ ಮಾತ್ರ ಅಂದ್ರೆ ಆಶ್ಚರ್ಯ ಪಡಲೇಬೇಕು. ಏಕೆಂದರೆ ಸೂರ್ಯಕುಮಾರ್ ನಂಬರ್ 2ನಲ್ಲಿ ತುಂಬಾ ಕಾಲ ಕಳೆದ ಬಳಿಕ ನಂಬರ್ 1 ಟಿ20 ಬ್ಯಾಟರ್ ಪಟ್ಟಕ್ಕೇರಿದ್ದರು. ಆದ್ರೆ ಕೇವಲ ಎರಡು ದಿನಗಳಷ್ಟೇ ಅಗ್ರಪಟ್ಟ ಉಳಿಸಿಕೊಂಡ ಸೂರ್ಯಕುಮಾರ್ ದ್ವಿತೀಯ ಸ್ಥಾನಕ್ಕೆ ಮತ್ತೆ ಕುಸಿತಗೊಂಡಿದ್ದಾರೆ.

ಮೊದಲೆರಡು ಪಂದ್ಯದಲ್ಲಿ ಮಿಂಚಿದ್ದ ಸೂರ್ಯಕುಮಾರ್

ಮೊದಲೆರಡು ಪಂದ್ಯದಲ್ಲಿ ಮಿಂಚಿದ್ದ ಸೂರ್ಯಕುಮಾರ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಅಬ್ಬರದ ಆಟವಾಡಿ ಎರಡು ಅರ್ಧಶತಕ ಸಿಡಿಸಿದ್ರು. ಅದ್ರಲ್ಲೂ ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನ ಅಟ್ಟಿದರು.

ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 61 ರನ್‌ಗಳನ್ನ ದಾಖಲಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಸೂರ್ಯನ ಸ್ಫೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದ್ದು ಅವರ 277.27 ಸ್ಟ್ರೈಕ್‌ರೇಟ್‌.

Ind vs SA 1st ODI: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಸಂಭಾವ್ಯ 11 ಆಟಗಾರರು

ಮೂರನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ, ಎರಡನೇ ಸ್ಥಾನಕ್ಕೆ ಕುಸಿತ

ಮೂರನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ, ಎರಡನೇ ಸ್ಥಾನಕ್ಕೆ ಕುಸಿತ

ಎರಡು ಪಂದ್ಯಗಳಲ್ಲಿ ಮಿಂಚಿದ್ದ ಸೂರ್ಯಕುಮಾರ್ ಮೂರನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ್ದೇ ರ್ಯಾಂಕಿಂಗ್ ಕುಸಿತಕ್ಕೆ ಮುಖ್ಯ ಕಾರಣವಾಯಿತು. ಮೂರನೇ ಟಿ20 ಪಂದ್ಯದಲ್ಲಿ ಸೂರ್ಯ 6 ಎಸೆತಗಳನ್ನ ಎದುರಿಸಿ 8 ರನ್ ಕಲೆಹಾಕಿ ಔಟಾದರು. ಮತ್ತೊಂದೆಡೆ ನಂಬರ್ 1 ಸ್ಥಾನದಲ್ಲಿರುವ ಪಾಕಿಸ್ತಾನದ ಓಪನರ್ ಮೊಹಮ್ಮದ್ ರಿಜ್ವಾನ್ ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಮತ್ತೆ ಅಗ್ರ ಪಟ್ಟಕ್ಕೇರಿದರು.

ಪಾಕಿಸ್ತಾನದ ಓಪನರ್‌ಗಳಾದ ರಿಜ್ವಾನ್ ನಂಬರ್ 1 ಸ್ಥಾನದಲ್ಲಿದ್ದು, ನಾಯಕ ಬಾಬರ್ ಅಜಮ್ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊಹಮ್ಮದ್ ರಿಜ್ವಾನ್ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿಯಲ್ಲಿ 6 ಇನ್ನಿಂಗ್ಸ್‌ನಲ್ಲಿ 316 ರನ್ ಕಲೆಹಾಕಿದ್ದಾರೆ. ಇನ್ನು ಬಾಬರ್ ಅಜಮ್ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟರ್ ಆಗಿದ್ದು 285 ರನ್ ಸಿಡಿಸಿದ್ದಾರೆ.

IND vs SA 1st ODI: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಆಡುವ 11ರ ಬಳಗ; ಪಾಟಿದಾರ್, ಮುಕೇಶ್ ಪದಾರ್ಪಣೆ?

ನಂಬರ್ 1 ಸ್ಥಾನಕ್ಕಾಗಿ ಮೂವರ ನಡುವೆ ತೀವ್ರ ಪೈಪೋಟಿ

ನಂಬರ್ 1 ಸ್ಥಾನಕ್ಕಾಗಿ ಮೂವರ ನಡುವೆ ತೀವ್ರ ಪೈಪೋಟಿ

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳ ನಡುವೆ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಾಗಿದೆ. ರಿಜ್ವಾನ್, ಸೂರ್ಯಕುಮಾರ್ ಯಾದವ್, ಬಾಬರ್ ಅಜಮ್ ನಡುವೆ ನಂಬರ್ 1 ಪಟ್ಟಕ್ಕಾಗಿ ತೀವ್ರ ಸ್ಪರ್ಧೆ ನಡೆಯಲಿದೆ.

ಚುಟುಕು ಕ್ರಿಕೆಟ್ ಫಾರ್ಮೆಟ್‌ಗೆ ಕಾಲಿಟ್ಟಾಗಿನಿಂದ ಭರ್ಜರಿ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್, ಹೀಗೆ ಬ್ಯಾಟಿಂಗ್ ಮುಂದುವರಿಸಿದ್ದಲ್ಲಿ ನಂಬರ್ 1 ರ್ಯಾಂಕಿಂಗ್‌ಗೆ ಏರುವ ಎಲ್ಲಾ ಅವಕಾಶಗಳಿವೆ. ಆದ್ರೆ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ರಿಜ್ವಾನ್‌ರನ್ನ ಹಿಂದಿಕ್ಕಿವುದು ಅಷ್ಟು ಸುಲಭದ ಮಾತಲ್ಲ. ಜೊತೆಗೆ ಬಾಬರ್ ಅಜಮ್ ಕೂಡ ಬೆನ್ನತ್ತಿದ್ದಾರೆ.

T20 World Cup 2022: ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ

ಅತ್ಯಂತ ಕಡಿಮೆ ಎಸೆತಗಳಲ್ಲಿ 1000ರನ್ ಪೂರೈಸಿರುವ ಸೂರ್ಯ!

ಅತ್ಯಂತ ಕಡಿಮೆ ಎಸೆತಗಳಲ್ಲಿ 1000ರನ್ ಪೂರೈಸಿರುವ ಸೂರ್ಯ!

ಹೌದು ಇತ್ತೀಚೆಗಷ್ಟೇ ಸೂರ್ಯಕುಮಾರ್ ಯಾದವ್ ಅತ್ಯಂತ ಕಡಿಮೆ ಎಸೆತಗಳಲ್ಲಿ 1000ರನ್ ಪೂರೈಸಿದ್ದಾರೆ. 174ರ ಸ್ಟ್ರೈಕ್‌ರೇಟ್‌ನಲ್ಲಿ 573 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ 1000 ರನ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇಷ್ಟು ವರ್ಷ ಮ್ಯಾಕ್ಸ್‌ವೆಲ್ ಹೆಸರಲ್ಲಿದ್ದ ದಾಖಲೆ ಮುರಿದರು. ಅತ್ಯಂತ ಕಡಿಮೆ ಎಸೆತದಲ್ಲಿ ಸಾವಿರ ರನ್ ದಾಖಲಿಸಿರುವ ಬ್ಯಾಟರ್‌ಗಳ ಪಟ್ಟಿ ಈ ಕೆಳಗಿದೆ.

573 ಸೂರ್ಯಕುಮಾರ್ ಯಾದವ್ (ಸ್ಟ್ರೈಕ್‌ರೇಟ್ 174)

604 ಗ್ಲೆನ್ ಮ್ಯಾಕ್ಸ್‌ವೆಲ್ (ಸ್ಟ್ರೈಕ್‌ರೇಟ್ 166)

635 ಕಾಲಿನ್ ಮನ್ರೋ (ಸ್ಟ್ರೈಕ್‌ರೇಟ್ 157)

640 ಎವಿನ್ ಲಿವಿಸ್ (ಸ್ಟ್ರೈಕ್‌ರೇಟ್ 156)

654 ತಿಸಾರ ಪೆರೆರಾ (ಸ್ಟ್ರೈಕ್‌ರೇಟ್ 153)

Story first published: Thursday, October 6, 2022, 15:10 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X