ಮಹಿಳಾ ಏಷ್ಯಾಕಪ್: ಭಾರತ vs ಪಾಕಿಸ್ತಾನ: ಸಂಭಾವ್ಯ ಆಡುವ ಬಳಗ ಹಾಗೂ ಪಂದ್ಯದ ಪ್ರಮುಖ ಮಾಹಿತಿ

ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಂತ ಕುತೂಹಲಕಾರಿ ಮುಖಾಮುಖಿಗೆ ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದಾರೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿತ್ತಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಶುಕ್ರವಾರ ನಡೆಯುವ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಮುಖಾಮುಖಿಗಾಗಿ ಈಗ ಕ್ರಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ತಂಡದ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದೆ. ಈವರೆಗೆ ಮೂರು ಪಂದ್ಯಗಳನ್ನು ಆಡಿರುವ ಭಾರತ ತಂಡ ಮೂರರಲ್ಲಿಯೂ ಗೆದ್ದು ಬೀಗಿದೆ. ಅಂತಿಮ ಮುಖಾಮುಖಿಯಲ್ಲಿ ಯುಎಇ ವಿರುದ್ಧ ಕಣಕ್ಕಿಳಿದಿದ್ದ ಭಾರತ 104 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿತ್ತು. ಈ ಮೂಲಕ ಈ ಟೂರ್ನಿಯ ಅಂಕಪಟ್ಟಿಯಲ್ಲಿ ಸದ್ಯ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ತಂಡವನ್ನು ಮುಂದಿನ ಪಂದ್ಯದಲ್ಲಿ ಮಣೊಸುವ ಮೂಲಕ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುವ ವಿಶ್ವಾಸದಲ್ಲಿದೆ ಭಾರತ ತಂಡ.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಪಂದ್ಯದ ದಿನಾಂಕ, ಆರಂಭ ಹಾಗೂ ನೇರಪ್ರಸಾರ

ಪಂದ್ಯದ ದಿನಾಂಕ, ಆರಂಭ ಹಾಗೂ ನೇರಪ್ರಸಾರ

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿಯ ಏಷ್ಯಾ ಕಪ್ ಟೂರ್ನಿಯ 13ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಅಕ್ಟೋಬರ್ 7, ಶುಕ್ರವಾರದಂದು ಈ ಪಂದ್ಯ ನಡೆಯಲಿದ್ದು ಬಾಂಗ್ಲಾದೇಶದ ಸಿಹ್ಲೆಟ್‌ನ ಸಿಹ್ಲೆಟ್ ಇಂಟರ್ನಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಮಧ್ಯಾಹ್ನ 1 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ

ಪಿಚ್ ರಿಪೋರ್ಟ್: ಸಿಹ್ಲೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಮತೋಲಿತವಾಗಿದೆ. ಪಂದ್ಯ ಮುಂದುವರಿದಂತೆ ಬ್ಯಾಟರ್‌ಗಳಿಗೆಅನುಕೂಲವಾಗುತ್ತಾ ಸಾಗಲಿದೆ. ಒಟ್ಟಾರೆಯಾಗಿ ನೋಡಿದಾಗ ಉತ್ತಮವಾದ ಬ್ಯಾಟಿಂಗ್ ಟ್ರ್ಯಾಕ್ ಎನಿಸಿಕೊಂಡಿದೆ.
ಹವಾಮಾನ ವರದಿ: ಇಲ್ಲಿ ಪಂದ್ಯದ ದಿನಾದ ಶುಕ್ರವಾರದಂದು 24 -33 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ. ಮಳೆಯಾಗುವ ಸಾಧ್ಯತೆ ಬಹಳ ಕಡಿಮೆಯಿದೆ.

ಅಗ್ನಿ ಪರೀಕ್ಷೆಗೆ ಸಿದ್ದವಾದ 3 ಕ್ರಿಕೆಟಿಗರು: ದ. ಆಫ್ರಿಕಾ ವಿರುದ್ಧ ಏಕದಿನ ಸರಣಿ ಈ ಮೂವರ ಪಾಲಿಗೆ ಅತ್ಯಂತ ಮಹತ್ವ

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ರಾಧಾ ಯಾದವ್ ಮತ್ತು ರೇಣುಕಾ ಸಿಂಗ್.

ಪಾಕಿಸ್ತಾನ: ಮುನೀಬಾ ಅಲಿ (ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ತುಬಾ ಹಸನ್ ಮತ್ತು ನಶ್ರಾ ಸಂಧು

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ

ಎರಡು ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ

ಹರ್ಮನ್‌ಪ್ರೀತ್ ಕೌರ್(ನಾಯಕಿ), ಸಬ್ಬಿನೇನಿ ಮೇಘನಾ, ಸ್ಮೃತಿ ಮಂಧಾನ, ರಿಚಾ ಘೋಷ್ (ವಿಕೆಟ್ ಕೀಪರ್), ಕಿರಣ್ ನವಗಿರೆ, ಜೆಮಿಮಾ ರಾಡ್ರಿಗಸ್, ದಯಾಲನ್ ಹೇಮಲತಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಶಫಾಲಿ ವರ್ಮಾ, ರಾಧಾ ಯಾದವ್, ಮೇಘನಾ ಸಿಂಗ್

ಪಾಕಿಸ್ತಾನ: ಮುನೀಬಾ ಅಲಿ (ವಿಕೆಟ್ ಕೀಪರ್), ಸಿದ್ರಾ ಅಮೀನ್, ಬಿಸ್ಮಾ ಮರೂಫ್ (ನಾಯಕಿ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಕೈನಾತ್ ಇಮ್ತಿಯಾಜ್, ಡಯಾನಾ ಬೇಗ್, ತುಬಾ ಹಸನ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ಸಿದ್ರಾ ನವಾಜ್, ಐಮನ್ ಅನ್ವರ್, ಸದಾಫ್ ಶಮಾಸ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, October 6, 2022, 16:37 [IST]
Other articles published on Oct 6, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X