ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಏಷ್ಯಾಕಪ್: ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಥಾಯ್ಲೆಂಡ್ ವನಿತೆಯರು

Thailand women

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ನಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದ್ದು, ಥಾಯ್ಲೆಂಡ್ ವನಿತೆಯರು ಮೊಟ್ಟ ಮೊದಲ ಬಾರಿಗೆ ಸಮಿಫೈನಲ್ ಪ್ರವೇಶಿಸಿದ್ದಾರೆ.

ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡ ಥಾಯ್ಲೆಂಡ್ ಮಹಿಳೆಯರು ಸೆಮೀಸ್ ಪ್ರವೇಶಿಸಿದ ನಾಲ್ಕನೇ ತಂಡವಾಗಿದ್ದಷ್ಟೇ ಅಲ್ಲದೆ ಮೊದಲ ಬಾರಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಆಡಿರುವ 6 ಪಂದ್ಯಗಳಲ್ಲಿ ತಲಾ 3 ಗೆಲುವು ಮತ್ತು ಸೋಲು ದಾಖಲಿಸಿರುವ ತಂಡವು 6 ಪಾಯಿಂಟ್ಸ್‌ನೊಂದಿಗೆ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿತು. ಅಗ್ರಸ್ಥಾನದಲ್ಲಿರುವ ಭಾರತದ ವನಿತೆಯರು 6 ಪಂದ್ಯಕ್ಕೆ 5 ಗೆಲುವು 1 ಸೋಲಿನೊಂದಿಗೆ 10 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಅಲಂಕರಿಸಿ ಸೆಮೀಸ್‌ಗೆ ಪ್ರವೇಶಿಸಿತು.

SMAT 2022: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ, ಸ್ಫೋಟಕ ಶತಕ ಸಿಡಿಸಿದ ದೇವದತ್ ಪಡಿಕ್ಕಲ್SMAT 2022: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ, ಸ್ಫೋಟಕ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಇನ್ನು ಎರಡನೇ ಸ್ಥಾನದಲ್ಲಿ ಪಾಕಿಸ್ತಾನ ವನಿತೆಯರು ಭಾರತದಷ್ಟೇ ಗೆಲುವು ಸೋಲು ದಾಖಲಿಸಿ ಅಷ್ಟೇ ಪ್ರಮಾಣದ ಪಾಯಿಂಟ್ಸ್‌ಗಳಿಸಿದ್ದರೂ ಸಹ, ನೆಟ್‌ರನ್‌ರೇಟ್‌ನಲ್ಲಿ ಭಾರತಕ್ಕಿಂತ ಹಿಂದಿರುವ ಕಾರಣ ಎರಡನೇ ಸ್ಥಾನದಲ್ಲಿದ್ದು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಇನ್ನು ಶ್ರೀಲಂಕಾ ವನಿತೆಯರು 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲಿನ ಮೂಲಕ 8 ಪಾಯಿಂಟ್ಸ್‌ನೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಥಾಯ್ಲೆಂಡ್ ನಾಲ್ಕನೇ ಸ್ಥಾನ ಅಲಂಕರಿಸಿದ್ದು, ಬಾಂಗ್ಲಾದೇಶ, ಯುಎಇ ಮತ್ತು ಮಲೇಷಿಯಾ ವನಿತೆಯರು ನಂತರದ ಸ್ಥಾನದಲ್ಲಿದ್ದಾರೆ.

ಈ ಟೂರ್ನಿಯಲ್ಲಿ ಥಾಯ್ಲೆಂಡ್ ವನಿತೆಯರು ಪಾಕಿಸ್ತಾನ ತಂಡವನ್ನ ಮೊದಲ ಬಾರಿಗೆ ಸೋಲಿಸುವ ಮೂಲಕ ಐತಿಹಾಸಿಕ ಗೆಲುವನ್ನ ಸಾಧಿಸಿದ್ದು ಕೂಡ ಪ್ರಮುಖ ಹೈಲೈಟ್‌ ಆಗಿದೆ.

ಥಾಯ್ಲೆಂಡ್ ವನಿತೆಯರ ಸ್ಕ್ವಾಡ್‌
ನನ್ನಪಟ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಮೊಲ್ ಚೈವಾಯ್ (ನಾಯಕಿ), ಸೊರ್ನರಿನ್ ಟಿಪ್ಪೊಚ್, ಚನಿಡಾ ಸುತ್ತಿರುಯಾಂಗ್, ರೊಸೆನನ್ ಕಾನೊಹ್, ಫನ್ನಿತಾ ಮಾಯಾ, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಮ್, ಬಂತೀದ ಲೀಫತ್ತನ, ಸುಲೀಪೋರ್ನ್ ಲಾವೋಮಿ, ಸುವಾನನ್ ಖಿಯಾಟೊ, ಅಫಿಸರ ಸುವಾಂಚೋನ್ರತಿ, ಸುನಿದಾ ಚತುರೋಗ್ರತ್ತಾನ

Story first published: Tuesday, October 11, 2022, 20:44 [IST]
Other articles published on Oct 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X