'ಬೇಗ ಗುಣಮುಖರಾಗಿ': ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಕೆಗೆ ಖ್ಯಾತ ಕ್ರಿಕೆಟಿಗರ ಹಾರೈಕೆ

ಜೂನ್ 12ರ ಶನಿವಾರದಂದು ನಡೆದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್ಎ) ಯುರೋ 2020ಯ ಡೆನ್ಮಾರ್ಕ್ ಮತ್ತು ಫಿನ್‍ಲ್ಯಾಂಡ್ ನಡುವಿನ ಪಂದ್ಯದ ವೇಳೆ ಡೆನ್ಮಾರ್ಕ್ ತಂಡದ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ.

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ ಹೊಡೆದು ಮೈದಾನದಲ್ಲೇ ಕುಸಿದು ಬಿದ್ದ ಡು ಪ್ಲೆಸಿಸ್

ಕೋಪನ್ ಹ್ಯಾಗನ್‌ನಲ್ಲಿರುವ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಯುರೋ 2020 ಫುಟ್ಬಾಲ್ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಈ ಅವಘಡ ಸಂಭವಿಸಿದ್ದು ಕ್ರಿಶ್ಚಿಯನ್ ಎರಿಕ್ಸೆನ್ ಚಿಕಿತ್ಸೆಗೊಳಗಾಗಿದ್ದಾರೆ. ಈ ಘಟನೆ ನಡೆದ ಬಳಿಕ ಡೆನ್ಮಾರ್ಕ್ ಮತ್ತು ಫಿನ್‍ಲ್ಯಾಂಡ್ ತಂಡಗಳ ನಡುವಿನ ಪಂದ್ಯವನ್ನು ಅಮಾನತುಗೊಳಿಸಲಾಯಿತು.

WTC Final: ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ರಿಷಭ್ ಪಂತ್!

ಫುಟ್ಬಾಲ್ ಮೈದಾನದಲ್ಲಿಯೇ ಪಂದ್ಯದ ಪ್ರಥಮಾರ್ಧದ ಆರಂಭಕ್ಕೆ ಇನ್ನು ಕೆಲ ನಿಮಿಷಗಳು ಬಾಕಿ ಇರುವಾಗ ಕುಸಿದುಬಿದ್ದ ಕ್ರಿಶ್ಚಿಯನ್ ಎರಿಕ್ಸೆನ್ ಒಂಚೂರು ಕೂಡ ಅಲ್ಲಾಡಲಿಲ್ಲ. ಈ ಘಟನೆಯನ್ನು ನೋಡಿ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಅಕ್ಷರಶಃ ಆಘಾತಕ್ಕೊಳಗಾದರು. ಆಸ್ಪತ್ರೆಗೆ ದಾಖಲಾಗಿರುವ ಕ್ರಿಶ್ಚಿಯನ್ ಎರಿಕ್ಸೆನ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಕ್ರೀಡಾಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ ಮತ್ತು ಕ್ರಿಕೆಟ್ ಜಗತ್ತಿನ ಹಲವಾರು ಕ್ರಿಕೆಟಿಗರು ಕೂಡ ಟ್ವಿಟರ್ ಮೂಲಕ ಕ್ರಿಶ್ಚಿಯನ್ ಎರಿಕ್ಸೆನ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.

'ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದುಬಿದ್ದ ಬಗ್ಗೆ ಓದಿದೆ, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ' ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಶೆಲ್ಡನ್ ಜಾಕ್ಸನ್, ಶ್ರೇಯಸ್ ಐಯ್ಯರ್, ಅಶೋಕ್ ದಿಂಡಾ, ಮೈಕಲ್ ವಾನ್, ಇಯಾನ್ ಬೆಲ್, ರಿಕಿ ಕ್ಲಾರ್ಕ್ ಹಾಗೂ ಮುಂತಾದ ಕ್ರಿಕೆಟಿಗರು ಈ ಕೆಳಕಂಡಂತೆ ಟ್ವೀಟ್ ಮಾಡಿ ಕ್ರಿಶ್ಚಿಯನ್ ಎರಿಕ್ಸೆನ್ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Sunday, June 13, 2021, 12:21 [IST]
Other articles published on Jun 13, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X