ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಅಂಕ ಹಂಚಿಕೊಂಡ ಒಡಿಶಾ, ನಾರ್ಥ್ ಈಸ್ಟ್

By Isl Media
ISL 2020: Coles goal settles point for Odisha as NorthEasts rally goes in vain

ಗೋವಾ: ಒಡಿಶಾ ಎಫ್‌ಸಿ ಪರ ಡಿಗೋ ಮೌರಾಸಿಯೋ (45ನೇ ನಿಮಿಷ) ಮತ್ತು ಕೊಲ್ ಅಲೆಕ್ಸಾಂಡರ್ (67ನೇ ನಿಮಿಷ) ಮತ್ತು ನಾರ್ಥ್ ಈಸ್ಟ್ ಪರ ನಾಯಕ ಬೆಂಜಮಿನ್ ಲಾಂಬೋಟ್ (45ನೇ ನಿಮಿಷ) ಹಾಗೂ ಕ್ವಿಸ್ಸಿ ಅಪ್ಪಿಯ್ಯಾ (65ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 37ನೇ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ಅತ್ಯಂತ ರೋಚಕವಾಗಿನ ನಡೆದ ಪಂದ್ಯದಲ್ಲಿ ಕೊನೆಯ ಕ್ಷಣದವರೆಗೂ ಕುತೂಹಲ ಮನೆಮಾಡಿತ್ತು.

ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್

ಮೊದಲ ಬಾರಿಗೆ ಇತ್ತಂಡಗಳು 4 ಗೋಲುಗಳನ್ನು ಹಂಚಿಕೊಂಡವು. ಈ ಡ್ರಾ ಒಡಿಶಾ ತಂಡಕ್ಕೆ ಅಂಕಪಟ್ಟಿಯಲ್ಲಿ ಮುನ್ನಡೆಯಲು ಹೆಚ್ಚಿನ ಪ್ರಯೋಜವಾಗದಿದ್ದರೂ ಬಲಿಷ್ಠ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಸಮಾಧಾನ ತಂಡದ ಆಟಗಾರರಲ್ಲಿ ಮನೆ ಮಾಡಿತ್ತು. ನಾರ್ಥ್ ಈಸ್ಟ್ ಈ ಫಲಿತಾಂಶದೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಪೆನಾಲ್ಟಿ ಮೂಲಕ ಗೋಲು

ಪೆನಾಲ್ಟಿ ಮೂಲಕ ಗೋಲು

ಕ್ವೆಸಿ ಅಪ್ಪಿಯ್ಯ 65ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸುವಲ್ಲಿ ಪ್ರಮುಖವಾಯಿತು. ಎರಡೂ ತಂಡಗಳಿಗೂ ಮೂರನೇ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು ಆದರೆ ಡಿಫೆನ್ಸ್ ವಿಭಾಗ ಅತ್ಯಂತ ಬಲಿಷ್ಠವಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಅಲೆಕ್ಸಾಂಡರ್ ಹೀರೋ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರೆ, ಅಶೂತೋಶ್ ಮೆಹ್ತಾ ಉತ್ತಮ ಪಾಸ್ ಗೌರವ ಪಡೆದರು.

ಸಮಬಲದ ಹೋರಾಟ

ಸಮಬಲದ ಹೋರಾಟ

ಒಡಿಶಾ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ನಡುವಿನ ಪ್ರಥಮಾರ್ಧದ ಪಂದ್ಯ 1-1ರಲ್ಲಿ ಸಮಬಲಗೊಂಡಿತು. 23ನೇ ನಿಮಿಷದಲ್ಲಿ ಮಾರ್ಸಿಯೊ ಮಚಾಡೋ ನಾರ್ಥ್ ಈಸ್ಟ್ ಪರ ಗಳಿಸಿದ ಗೋಲು ಹಾಗೂ ಒಡಿಶಾ ಪರ ಬೆಂಜಮಿನ್ ಲಾಂಬೊಟ್ (45ನೇ ನಿಮಿಷ) ಗಳಿಸಿದ ಗೋಲು 45 ನಿಮಿಷಗಳ ಆಟವನ್ನು ಸಮಬಲದಲ್ಲಿ ತಂದು ನಿಲ್ಲಿಸಿತು. ನಾರ್ಥ್ ಈಸ್ಟ್ ಪಂದ್ಯದ ಮೇಲೆ ಮೇಲುಗೈ ಸಾಧಿಸುತ್ತದೆ ಎಂಬ ನಂಬಿಕೆ ದೃಢವಾಗಿತ್ತು, ಆದರೆ ಕೊನೆಯ ಕ್ಷಣದ ವರೆಗೂ ಹೋರಾಟ ನೀಡಿದ ಒಡಿಶಾ ಪರ್ವತ ತಪ್ಪಲಿನ ತಂಡಕ್ಕೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. 23ನೇ ನಿಮಿಷದಲ್ಲಿ ಡಿಗೋ ಮೌರಾಸಿಯೊ ಚೆಂಡನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದ್ದರು.

ತಿರುಗೇಟಿನ ಆಟ ಪ್ರದರ್ಶನ

ತಿರುಗೇಟಿನ ಆಟ ಪ್ರದರ್ಶನ

ನಾರ್ಥ್ ಈಸ್ಟ್ ಉತ್ತಮ ರೀತಿಯಲ್ಲಿ ತಿರುಗೇಟು ನೀಡುವ ಆಟ ಪ್ರದರ್ಶಿಸಿತ್ತು. ಅವಕಾಶಗಳು ದೊರೆತರೂ ನಾರ್ಥ್ ಈಸ್ಟ್ ನ ಡಿಫೆನ್ಸ್ ವಿಭಾಗ ಎದುರಾಳಿಯ ಅವಕಾಶಗಳಿಗೆಲ್ಲ ನೀರೆರೆಯುತ್ತಿತ್ತು. ಪ್ರಥಮಾರ್ಧದ ಗಾಯದ ಸಮಯದಲ್ಲಿ ನಾಯಕ ಬೆಂಜಮಿನ್ ತಮ್ಮ ತಂಡದ ಆಟಗಾರರ ಮೊಗದಲ್ಲಿ ನಗು ತಂದರು, ಅಂತಿಮ ಕ್ಷಣದಲ್ಲಿ ದಾಖಲಾದ ಈ ಗೋಲು ಮುಂದಿನ 45 ನಿಮಿಷಗಳ ಪಂದ್ಯದ ಮೇಲೆ ಹೆಚ್ಚು ಕುಲೂಹಲ ಮೂಡುವಂತೆ ಮಾಡಿತು. ಒಡಿಶಾ ಇಲ್ಲಿ ನಿಜವಾಗಿಯೂ ತನ್ನ ವೃತ್ತಿಪರತೆಯನ್ನು ಪ್ರದರ್ಶಿಸಿತ್ತು.

Story first published: Wednesday, December 23, 2020, 10:33 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X